ಜನಪ್ರಿಯ ನಟ ಡಾಲಿ ಧನಂಜಯ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಾಕ್ಟರ್ ಧನ್ಯತಾ ಜೊತೆ ಅವರ ಮದುವೆ ನೆರವೇರಿದೆ. ಬಾಳ ಬಂಧನಕ್ಕೆ ಒಳಗಾಗಿರುವ ಧನ್ಯತಾ ಹಾಗೂ ಡಾಲಿ ಧನಂಜಯ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಬಿಜೆಪಿ, ಮೋದಿಯವರ ಚಿಯರ್ ಲೀಡರ್ ಆಗಿದ್ದೀರಿ: HDD ವ್ಯಂಗ್ಯ ಮಾಡಿದ ಸಿದ್ದರಾಮಯ್ಯ!
ಆ್ಯಕ್ಟರ್ ಡಾಲಿ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸ್ಯಾಂಡಲ್ವುಡ್ನ ಸ್ಟಾರ್ ಬಳಗ ಮದುವೆಗೆ ಆಗಮಿಸಿ ಶುಭ ಕೋರಿದೆ.
ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಆ್ಯಕ್ಟರ್-ಡಾಕ್ಟರ್ ಮದುವೆ ಅದ್ದೂರಿಯಾಗಿ ನೆರವೇರಿದ್ದು, ಸಿನಿರಂಗದ ನಟ-ನಟಿಯರು ಆಗಮಿಸಿ, ಧನಂಜಯ ಹಾಗೂ ಧನ್ಯತಾ ಜೋಡಿಗೆ ವಿಶ್ ಮಾಡಿದ್ದಾರೆ.
ಡಾಲಿ ಮದುವೆಗೆ ಆಗಮಿಸಿದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ನೇರಳೆ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದು, ಡಾಲಿಯನ್ನು ತಬ್ಬಿಕೊಂಡು ಶುಭಹಾರೈಸಿದರು. ಇನ್ನೂ ನಟ ಶಿವರಾಜಕುಮಾರ್, ಕಾಂತಾರ ಖ್ಯಾತಿಯ ಸಪ್ತಮಿ ಗೌಡ, ದೊಡ್ಡಣ್ಣ, ತರುಣ್ ಸುಧೀರ್-ಸೋನಲ್, ವಸಿಷ್ಠ ಸಿಂಹ, ಸಾಧು ಕೋಕಿಲ, ಯುವರಾಜ ಕುಮಾರ್, ವಿನಯ್ ರಾಜ್, ಬಿಗ್ಬಾಸ್ ಖ್ಯಾತಿಯ ದಿವ್ಯ ಉರುಡುಗ ಮದುವೆಗೆ ಬಂದು ಜೋಡಿಗೆ ವಿಶ್ ಮಾಡಿದ್ದಾರೆ
ಗೋಲ್ಡನ್ ಬಣ್ಣದ ಶೇರ್ವಾನಿಯಲ್ಲಿ ಡಾಲಿ ಹಾಗೂ ಗೋಲ್ಡನ್ ಬಣ್ಣದ ಸೀರೆಯಲ್ಲಿ ಧನ್ಯತಾ ಮಿಂಚಿದ್ದು, ಕುಟುಂಬಸ್ಥರು, ಆಪ್ತರು, ಸಿನಿರಂಗದ ತಾರೆಯರು, ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಪಾಲ್ಗೊಂಡು ಶುಭಹಾರೈಸುತ್ತಿದ್ದಾರೆ.