ನಟ ಡಾಲಿ ಧನಂಜಯ್ ಮದುವೆ ಓಡಾಟದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಹಲವು ಗಣ್ಯರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿರುವ ಡಾಲಿ ಇದೀಗ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಮದುವೆಗೆ ಕರೆಯೋಲೆ ನೀಡಿದ್ದಾರೆ.
ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಬೆಂಗಳೂರಿನ HMT ಫ್ಯಾಕ್ಟರಿ ಆವರಣದಲ್ಲಿ ನಡೆಯುತ್ತಿದೆ. ಆ ಸಿನಿಮಾದ ಚಿತ್ರೀಕರಣದ ಸೆಟ್ಗೆ ನಟ ಡಾಲಿ ಧನಂಜಯ ಅವರು ಭೇಟಿ ನೀಡಿದ್ದಾರೆ. ತಮ್ಮ ವಿವಾಹದ ಆಹ್ವಾನ ಪತ್ರಿಕೆಯನ್ನು ಯಶ್ಗೆ ನೀಡಿದ್ದಾರೆ. ಆ ಸಂದರ್ಭದ ಫೋಟೋಸ್ ಇಲ್ಲಿವೆ. ಮದುವೆ ಸಲುವಾಗಿ ಧನಂಜಯ್ ಅವರು ಸಿನಿಮಾ ಕೆಲಸಗಳಿಂದ ಸದ್ಯಕ್ಕೆ ಬ್ರೇಕ್ ಹಾಕಿದ್ದಾರೆ.
ಮೈಸೂರಿನಲ್ಲಿ ಫೆಬ್ರವರಿ 15 ಮತ್ತು 16ರಂದು ಡಾಲಿ ಮದುವೆ ನೆರವೇರಲಿದೆ. ಡಾಲಿ ಮದುವೆ ಸಂಭ್ರಮದಲ್ಲಿ ರಾಜಕೀಯ ಗಣ್ಯರು ಸಿನಿಮಾ ಸ್ಟಾರ್ಸ್ ಭಾಗಿಯಾಗಲಿದ್ದಾರೆ.