ಸ್ಯಾಂಡಲ್ವುಡ್ನಟ ಡಾಲಿ ಧನಂಜಯ್ ಮದುವೆಗೆಗಂಟೆಗಳುಮಾತ್ರವೇಭಾಕಿಇದೆ. ಈಗಾಗಲೇಮದು, ವರರಮನೆಯಲ್ಲಿಮದುವೆಮುನ್ನಶಾಸ್ತ್ರಗಳುಸಂಭ್ರಮದಿಂದನಡೆಯುತ್ತಿದೆ. ಫೆ.೧೬ರಂದುಮೈಸೂರಿನಲ್ಲಿ ಈ ಜೋಡಿ ಸಪ್ತಪದಿ ತುಳಿಯುವುದಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಡಾಲಿ ಧನಂಜಯ್ ಮದುವೆಗೆ ಆಪ್ತರು, ಸ್ನೇಹಿತರು, ಸಿನಿಮಾ ರಂಗದವರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಪರಭಾಷೆಯ ಕಲಾವಿದರು ಧನಂಜಯ್ ಮದುವೆಯಲ್ಲಿ ಭಾಗವಹಿಸಲಿದ್ದಾರೆ. ಈ ಮಧ್ಯೆ ವಿಶ್ವದ ಜನಪ್ರಿಯ ರಂಗಭೂಮಿ ನಿರ್ದೇಶಕ ಈಗಾಗಲೇ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಡಾಲಿ ಮದುವೆಗೆ ಜರ್ಮನಿಯಿಂದ ಜನಪ್ರಿಯ ರಂಗಭೂಮಿ ನಿರ್ದೇಶಕ ಕ್ರಿಸ್ಟೆನ್ ಸ್ಟುಕೆಲ್ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇವರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಿ ಬರಮಾಡಿಕೊಳ್ಳಲಾಗಿದೆ. ಧನಂಜಯ್ ಗೆಳೆಯ ಹಾಗೂ ನಟ ಪೂರ್ಣಚಂದ್ರ ಮೈಸೂರು ಜರ್ಮನಿಯಿಂದ ಬಂದ ನಿರ್ದೇಶಕರಿಗೆ ಸ್ವಾಗತ ಕೋರಿದ್ದಾರೆ.
ಜರ್ಮನಿಯ ಒಬೆರಮ್ಮೆರ್ಗೌ ಮೂಲದ ಕ್ರಿಸ್ಟೆನ್ ಸ್ಟುಕೆಲ್ ಅಂತರಾಷ್ಟ್ರೀಯ ಮಟ್ಟದ ರಂಗಭೂಮಿ ನಿರ್ದೇಶಕ. 1961ರಲ್ಲಿ ಜನಿಸಿದ ಕ್ರಿಸ್ಟೆನ್ ಸ್ಟುಕೆಲ್ 81ರಲ್ಲಿ ತಮ್ಮದೇ ಸ್ವಂತ ಡ್ರಾಮ ಗ್ರೂಪ್ ಅನ್ನು ಕಟ್ಟುತ್ತಾರೆ. ಇದಾದ ಕೇವಲ ಆರು ವರ್ಷಗಳಲ್ಲೇ ‘ಒಬೆರಮ್ಮೆರ್ಗೌ ಪ್ಯಾಷನ್ ಪ್ಲೇ‘ ನಿರ್ದೇಶಕರಾಗಿದ್ದರು. 1981ರಿಂದ ಇಲ್ಲಿವರೆಗೂ ನಿರಂತರವಾಗಿ ನಾಟಕಗಳನ್ನು ನಿರ್ದೇಶನ ಮಾಡುತ್ತಾ ಬಂದಿದ್ದಾರೆ. ಅವು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿವೆ. ಕ್ರಿಸ್ಟೆನ್ ಸ್ಟುಕೆಲ್ ಹಾಗೆಊ ಡಾಲಿ ಧನಂಜಯ್ ಗೆ ಮೈಸೂರಿನ ರಂಗಾಯಣದಲ್ಲಿ ನಂಟು ಬೆಳೆದಿದೆ. ಸಿನಿಮಾಗೂ ಮುನ್ನ ರಂಗಭೂಮಿಯಲ್ಲಿ ಹೆಚ್ಚಾಗಿ ಆಸಕ್ತಿ ಬೆಳೆಸಿಕೊಂಡಿದ್ದ ಧನಂಜಯ್ಗೆ ಕಾರ್ಯಗಾರದಲ್ಲಿ ಪರಿಚಯವಾಗಿತ್ತು ಎನ್ನಲಾಗಿತ್ತು. ಅಲ್ಲಿಂದ ಇಬ್ಬರೂ ಸಂಪರ್ಕದಲ್ಲಿ ಇದ್ದರು. ಹೀಗಾಗಿ ಡಾಲಿ ಮದುವೆಗೆ ಜರ್ಮನಿಯಿಂದ ಆಗಮಿಸಿದ್ದಾರೆ.