ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಡಾಕ್ಟರ್ ಧನ್ಯತಾ ಜೊತೆ ಫೆ.16ರಂದು ಡಾಲಿ ಧನಂಜಯ್ ಮದುವೆ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಾಲಿ ಜೋಡಿ ಹಲವರಿಗೆ ಮದುವೆ ಆಹ್ವಾನ ನೀಡಿದೆ. ಇನ್ನು ಮದುವೆ ಕುರಿತು ಡಾಲಿ ಜೋಡಿ ಇಂದು ಸುದ್ದಿಗೋಷ್ಠಿ ನಡೆಸಿದ್ದು, ದರ್ಶನ್ರನ್ನು ತಮ್ಮ ಮದುವೆಗೆ ಏಕೆ ಕರೆದಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದರ್ಶನ್ ರನ್ನು ಮದುವೆಗೆ ಕರೆಯದ ಬಗ್ಗೆ ಪ್ರತಿಕ್ರಿಯಿಸಿದ ಡಾಲಿ ಧನಂಜಯ್, ದರ್ಶನ್ರನ್ನ ಸಂಪರ್ಕಿಸಲು ಪ್ರಯತ್ನ ಪಟ್ಟೆ, ಆದರೆ ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಅವರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡುತ್ತೇನೆ. ಯಾರನ್ನೂ ಬಿಟ್ಟಿಲ್ಲ, ಎಲ್ಲರನ್ನೂ ಕರೆದಿದ್ದೇನೆ. ಅವರನ್ನೂ ಕರೆಯುವ ಆಸೆ ಇತ್ತು, ಆದರೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಶೀಘ್ರದಲ್ಲೇ ಅದೂ ನೆರವೇರುತ್ತದೆ. ಅದು ಬಿಟ್ಟು ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದರ್ಶನ್ ನಟನೆಯ ‘ಯಜಮಾನ’ ಚಿತ್ರದಲ್ಲಿ ಡಾಲಿ ಧನಂಜಯ್ ಮಿಠಾಯಿ ಸೂರಿ ಎಂಬ ಪಾತ್ರದಲ್ಲಿ ನಟಿಸಿದ್ದರು. ಆ ಮಟ್ಟಿಗೆ ಇವರಿಬ್ಬರ ನಡುವೆ ಅನ್ಯೋನ್ಯತೆಯಿದೆ. ಆದರೆ ದರ್ಶನ್ ಅವರನ್ನು ಆಹ್ವಾನಿಸದೇ ಇರುವುದು ಹಲವರ ಅನುಮಾನಕ್ಕೆ ಕಾರಣವಾಗಿತ್ತು. ಆದ್ರೆ ಇದೀಗ ದರ್ಶನ್ ರನ್ನು ಮದುವೆಗೆ ಆಹ್ವಾನಿಸುವುದಾಗಿ ಹೇಳುವ ಮೂಲಕ ಹಲವು ಅನುಮಾನಗಳಿಗೆ ಡಾಲಿ ಧನಂಜಯ್ ತೆರೆ ಎಳೆದಿದ್ದಾರೆ.