ಮೈಸೂರು: ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಅದ್ಯಾವಾಗ ಹಸೆಮಣೆ ಏರುತ್ತಾರೆ ಎಂಬುದು ಅಭಿಮಾನಿಗಳ ಬಹು ಸಮಯದ ಪ್ರಶ್ನೆಯಾಗಿತ್ತು. ಇತ್ತೀಚೆಗಷ್ಟೇ ಅದಕ್ಕೆ ಉತ್ತರ ಸಿಕ್ಕಿದೆ. ಹೊಸ ವರ್ಷದ ಆರಂಭದಲ್ಲಿ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ದಾಂಪತ್ಯ ಜೀವನ ಆರಂಭಿಸಲಿದ್ದು, ಸದ್ಯ ಮದುವೆ ಸಿದ್ಧತೆಗಳು ಜೋರಾಗೇ ನಡೆಯುತ್ತಿವೆ. ಇದೀಗ ಸುತ್ತೂರು ಮಠಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ, ನಂದಿ ಕಂಬ ಹೊತ್ತು ಡಾಲಿ ಕುಣಿದಿದ್ದಾರೆ.
Health Tips: ಚಳಿಗಾಲದಲ್ಲಿ ದಿನಕ್ಕೊಂದು ಕ್ಯಾರೆಟ್ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ..?
ಧನ್ಯತಾ ಜೊತೆ ಡಾಲಿ ಮದುವೆಗೆ ಸಜ್ಜಾಗಿರುವ ಹಿನ್ನೆಲೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಶಿವರಾತ್ರಿ ಶಿವಯೋಗಿಗಳ 1065ನೇ ಜಯಂತಿ ಹಿನ್ನೆಲೆ ನಂದಿ ಧ್ವಜಕ್ಕೆ ಪೂಜೆ ಜರುಗಿದೆ. ಬಳಿಕ ನಂದಿ ಧ್ವಜ ಹಿಡಿದು ಡಾಲಿ ಕುಣಿದಿದ್ದಾರೆ. ಡಾಲಿ, ಧನ್ಯತಾ ಜೊತೆ ನಟ ನಾಗಭೂಷಣ್ ಕೂಡ ಸಾಥ್ ನೀಡಿದ್ದಾರೆ. ಇನ್ನೂ ಫೆ.16ರಂದು ಮೈಸೂರಿನಲ್ಲಿ ಡಾಲಿ ಮದುವೆ ಜರುಗಲಿದೆ. ಈ ಮದುವೆಗೆ ರಾಜಕೀಯ ಗಣ್ಯರು, ಸಿನಿಮಾ ಸ್ಟಾರ್ಗಳು ಭಾಗಿಯಾಗಲಿದ್ದಾರೆ.