ಬೆಂಗಳೂರು:- ಕಾರ್ಲ್ಟನ್ ಟವರ್ ಹೆಸರಲ್ಲಿ ದೋಖಾ ಮಾಡಿದ್ದ ನೂರು ಕೇಸಿನ ನಯವಂಚಕಿ ರೇಖಾಳನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಕಾರ್ಲ್ಟನ್ ಟವರ್ ಹೆಸರಲ್ಲಿ 25 ಕೋಟಿ ಕಥೆ ಹೇಳಿ ರೇಖಾ ಕೋಟಿ ಕೋಟಿ ವಂಚಿಸ್ತಾಳೆ. ಇದೇ ಕೇಸ್ ನಲ್ಲಿ ರೇಖಾ ಹಾಗೂ ಆತನ ಗಂಡ ಮಂಜುನಾಥ್ ಚಾರಿ ಅರೆಸ್ಟ್ ಮಾಡಲಾಗಿದೆ. ಸಿಸಿಬಿ ಪೊಲೀಸರ ಕೈಯಲ್ಲಿ ರೇಖಾ ಟೀಂ ಇದ್ದು, ತನಿಖೆಗೆ ಒಳಪಡಿಸಲಾಗಿದೆ. ಎಂಎಲ್ ಎ ರಾಜು ಗೌಡರ ಹೆಸರಲ್ಲೂ ಸುಲಿಗೆ ಮಾಡಿದ್ದಳು.. ಪೊನ್ನಂಪೇಟೆಯ ಉದ್ಯಮಿಯನ್ನೂ ಸುಲಿಗೆ ಮಾಡಿತ್ತು ಈ ಟೀಂ.
ಶಾದಿ ಡಾಟ್ ಕಾಮ್ ನ ಹೆಸರಲ್ಲೂ ಉಂಡೆನಾಮ ಹಾಕಿತ್ತು. ಹೀಗೆ100 ಕೋಟಿ ರೂಪಾಯಿ ಸುಲಿಗೆಯನ್ನು ರೇಖಾ ಮಾಡಿದರು.
1 ಕೋಟಿ ಕೊಟ್ಟರೇ ಐದು ಕೋಟಿ ಕೊಡುವುದಾಗಿ ನಿಸಾರ್ ಎಂಬುವವರು ಈ ಚಾಲಾಕಿ ನಂಬಿಸಿದ್ದಳು. ನಿಸಾರ್ ಎಂಬುವವರು ಮಾತು ನಂಬಿ 5 ಕೋಟಿ ಹಣ ಕೊಟ್ಟಿದ್ದರು. ವಂಚನೆ ಗೊತ್ತಾದ ಮೇಲೆ ಸಿಸಿಬಿಯಲ್ಲಿ ನಿಸಾರ್ ಪ್ರಕರಣ ದಾಖಲಿಸಿದ್ದರು.
ಇದೀಗ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.