ಬೆಂಗಳೂರು: ಮನೆ ಮುಂದೆ ಆಟ ಆಡ್ತಿದ್ದ ನಾಲ್ಕು ವರ್ಷದ ಕಂದನ ಮೇಲೆ ನಾಯಿಯೊಂದು ಮೃಗದಂತೆ ಎಗರಿದೆ. ನೋಡ ನೋಡ್ತಿದ್ದಂತೆ ಮೆಟ್ಟಿಲುಗಳ ಮೇಲೆ ಮಗುವನ್ನ ಎಳೆದೋಯ್ದು ಮನೋಸೋ ಇಚ್ಚೆ ಕಚ್ಚಿದೆ. ಮಗು ಚೀರಾಟಕ್ಕೆ ಮನೆಯಲ್ಲಿದ್ದ ತಂದೆ ಓಡಿ ಹೋಗಿ ನಾಯಿ ಬಾಯಿಯಿಂದ ಮಗುವನ್ನ ರಕ್ಷಿಸಿದ್ದಾರೆ. ಈ ವೇಳೆ ಮಗು ತಂದೆಗೂ ನಾಯಿ ಕಚ್ಚಿ ಗೊಳಿಸಿದೆ. ಅಂದಹಾಗೆ ಈ ಘಟನೆ ನಡೆದಿರೋದು ಐದನೆ ತಾರೀಖು ರಾತ್ರಿ 8 ಗಂಟೆ ಸುಮಾರಿಗೆ.
ಇಂದಿರಾನಗರ ಪೊಲೀಸ್ ಠಾಣವ್ಯಾಪ್ತಿಯ ಗಣೇಶ ಟೆಂಪಲ್ ಬಳಿ ನಡೆದಿದೆ. ಈ ಫೋಟೋ ದಲ್ಲಿ ಮುದ್ದಾಗಿ ಕಾಣ್ತಿರೋ ಈ ಮಗು ಹೆಸ್ರು ರಿಶಾನ್, ತಂದೆ ತಾಯಿ ಮೂಲತ ಕೇರಳದವ್ರು ಕಳೆದು ಒಂದುವರೇ ವರ್ಷದಿಂದ ಇದೇ ಮನೆಯಲ್ಲಿ ವಾಸವಾಗಿದ್ರು. ಕಳೆದ ಎಂಟು ತಿಂಗಳ ಹಿಂದೆ ಮೇಲಿನ ಮನೆಯ ಮಾಲಕಿ ಮಾಗೇಶ್ವರಿ ಹಾಗೂ ಸಂಜಯ್ ತಮ್ಮ ಮನೆಗೆ ರ್ಯಾಟ್ ವಿಲ್ಲರ್ ನಾಯಿ ತಂದಿದ್ದಾರೆ. ಸಾಕಷ್ಟು ರ್ಯಾಶ್ ಆಗಿದ್ದ ಆ ನಾಯಿ ಹಿಂದೆ ಕೂಡ ಕೆಲವರಿಗೆ ಕಚ್ಚಿದ್ಯಂತೆ.
ಚಳಿಗಾಲದಲ್ಲಿ ಮೂಲಂಗಿ ಸೇವನೆ ಒಳ್ಳೆಯದು, ಆದ್ರೆ ತಪ್ಪಿಯೂ ಈ ಆಹಾರಗಳ ಜೊತೆ ತಿನ್ನಬೇಡಿ!
ಆದ್ರೂ ನಾಯಿ ಬಗ್ಗೆ ಕೇರ್ ಮಾಡ ಮಾಲೀಕರು ನಾಯಿಯನ್ನ ಕಟ್ಟಿ ಹಾಕದೆ ಹಾಗೆ ಬಿಡ್ತಿದ್ರಂತೆ. ಮನೆ ಮುಂದಿನ ಸಣ್ಣ ಗೇಟ್ ಲಾಕ್ ಮಾಡಿದ್ರು ನಾಯಿ ಗೇಟ್ ಎಗರಿ ಬಂದು ಮಗುಗೆ ಕಚ್ಚಿರೋದಾಗಿ ಸದ್ಯ ದೂರು ದಾಖಲಾಗಿದೆ. ಮಾಗೇಶ್ವರಿ ಹಾಗೂ ಸಂಜಯ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಇನ್ನೂ ರಿಶಾನ್ ಪೋಷಕರು ದೂರು ನೀಡ್ತಿದ್ದಂತೆ ಮಾಗೇಶ್ವರಿ ನಾಯಿಯನ್ನ ಬೇರೆಡೆ ಶಿಫ್ಟ್ ಮಾಡಿದ್ದರಂತೆ. ಮಗು ಆಸ್ಪತ್ರೆಯಲ್ಲಿದೆ ಚಿಕಿತ್ಸೆಗೂ ಹಣ ಇಲ್ಲ ಅಂತ ಮಾಲೀಕರಿಗೆ ಕರೆ ಮಾಡಿದ್ರೂ ನೋ ಯೂಸ್.. ಆದೇನೆ ಇದ್ರೂ ಕೆಲವೊಂದು ಡೇಂಜರಸ್ ನಾಯಿಗಳನ್ನ ಸಾಕದೆ ಇರೋದೆ ಒಳ್ಳೆಯದು. ಅದ್ರಲ್ಲೂ ಬಾಡಿಗೆ ಮನೆಗಳಿರೋ ಕಟ್ಟಡದಲ್ಲಂತೂ ಈ ನಾಯಿ ಸಾಕೋಕೆ ಅವಕಾಶ ನೀಡಲೆಬಾರದು.