ಹುಬ್ಬಳ್ಳಿ; ವಾಣಿಜ್ಯ ನಗರಿ ಹುಬ್ಬಳ್ಳಿಯ ಸರ್. ಸಿದ್ದಪ್ಪ ಕಂಬಳಿ ರಸ್ತೆಯ ಲ್ಯಾಮಿಂಗ್ಟನ್ ಸ್ಕೂಲ್ ಬಸ್ ನಿಲ್ದಾಣದ ಬಳಿಯ ಚರಂಡಿಯಲ್ಲಿ ಬಿದ್ದಿದ್ದ ನಾಯಿಯನ್ನು ಹು-ಧಾ ಪಾಲಿಕೆ ಆರೋಗ್ಯ ಅಧಿಕಾರಿಗಳಾದ ಡಾ. ಶ್ರೀಧರ್ ದಂಡೆಪ್ಪನವರ ನೇತೃತ್ವದಲ್ಲಿ ಪಾಲಿಕೆಯ ಸಿಬ್ಬಂದಿಯಿಂದ ಸುರಕ್ಷಿತವಾಗಿ ರಕ್ಷಣೆ ಮಾಡಲಾಯಿತು. ಬೆಳಿಗ್ಗೆಯೇ ಚರಂಡಿಯಲ್ಲಿ ನಾಯಿ ಬಿದ್ದಿತ್ತು ಎನ್ನಲಾಗಿದ್ದು, ಕೆಲ ಗಂಟೆಗಳ ಕಾಲ ಚರಂಡಿಯಲ್ಲಿಯೇ ಪರದಾಡಿದ್ದು, ಚರಂಡಿಯಿಂದ ಮೇಲೆ ಬಾರದೇ ಗಾಬರಿಗೊಂಡಿತ್ತು.
ಪಾದಾಚಾರಿಗಳು ನಾಯಿಯ ಸ್ಥಿತಿ ನೋಡಿ ಅಯ್ಯೋ ಪಾಪಾ ನಾಯಿ ಚರಂಡಿಯಲ್ಲಿ ಬಿದ್ದಿದೆ ಎಂದು ಗುಣುಗುತ್ತಾ ಹೋದರೇ ವಿನಃ ನಾಯಿಯ ರಕ್ಷಣೆಯ ಗೋಜಿಗೆ ಹೋಗಲಿಲ್ಲ. ಆದರೇ ಅದೇ ದಾರಿಯಲ್ಲಿ ಹೊರಟಿದ್ದ ಪತ್ರಕರ್ತರು ನಾಯಿಯ ಅವಾಂತರವನ್ನು ನೋಡಿ ರಕ್ಷಣೆಗೆ ಮುಂದಾದರು. ಆದರೇ ನಾಯಿಯನ್ನು ರಕ್ಷಣೆ ಮಾಡುವಲ್ಲಿ ಅವ್ಯವಸ್ಥೆ ಉಂಟಾಯಿತು. ಅದೇ ರಸ್ತೆಯಲ್ಲಿ ಹೊರಟಿದ್ದ ಹು-ಧಾ ಪಾಲಿಕೆ ಮೇಯರ್ ವೀಣಾ ಚೇತನ್ ಬರದ್ವಾಡ ಅವರ ಕಾರ್ ನ್ನು ತಡೆದ ಪತ್ರಕರ್ತರು ನಾಯಿಯ ಪರದಾಟವನ್ನು ತಿಳಿಸಿದಾಗ, ಮೇಯರ್ ಪಾಲಿಕೆ ಸಿಬ್ಬಂದಿಗಳಿಗೆ ತಿಳಿಸಿದರು.
Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ ಕಂಬಳ: ಹೇಗಿದೆ ಸಿದ್ಧತೆ!
ಮತ್ತೇ ಪಾಲಿಕೆ ಅಧಿಕಾರಿಗಳಿಗೆ ಕರೆ ಮಾಡಿ ನಾಯಿಯು ಚರಂಡಿಯಲ್ಲಿ ಬಿದ್ದಿದ್ದು ಅದರ ರಕ್ಷಣೆ ಮಾಡಬೇಕಿದೆ ಎಂದು ಮನವಿ ಮಾಡಿದಾಗ ಸ್ಥಳಕ್ಕೆ ಆಗಮಸಿದ ಹು-ಧಾ ಪಾಲಿಕೆ ಆರೋಗ್ಯಧಿಕಾರಿಗಳಾದ ಡಾ. ಶ್ರೀಧರ ದಂಡೆಪ್ಪನವರ ಅವರು ಪಾಲಿಕೆ ಸಿಬ್ಬಂದಿಗೆ ಸೂಚಿಸಿದ ಬಳಿಕ ಪತ್ರಕರ್ತರಾದ ಶೇಖರ್ ಪಿ, ನಾರಾಯಣಗೌಡ ಪಾಟೀಲ್, ರೋಹನ್ ಹುಣಸವಾಡಕರ್,
ಮಾಂತೇಶ್ ಕಂಬಳಿ, ಭರತ್ ಮಂಗಳಗಟ್ಟಿ ಸೇರಿದಂತೆ ಇನ್ನಿತರ ಪತ್ರಕರ್ತರ ಸಹಾಯದ ನೆರವಿನಿಂದ ನಾಯಿಯ ರಕ್ಷಣೆ ಮಾಡಲಾಯಿತು. ಒಟ್ಟಿನಲ್ಲಿ ಜನನಿಬಿಡ ಪ್ರದೇಶದ ಚರಂಡಿಯಲ್ಲಿ ಬಿದ್ದಿದ್ದ ನಾಯಿಯನ್ನು ಪಾಲಿಕೆ ಅಧಿಕಾರಗಳು ಸಮಯಪ್ರಜ್ಞೆಯಿಂದ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಪಾಲಿಕೆ ಅಧಿಕಾರಿಗಳು ಹಾಗೂ ಪತ್ರಕರ್ತರ ಕಾರ್ಯವೈಖರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.