ಬೆಂಗಳೂರು: ಚಿತ್ರನಟ ದರ್ಶನ್ ಅವರ ಮನೆಯ ಸಾಕು ನಾಯಿಗಳು ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದು ದರ್ಶನ್ ಸೇರಿ ಇಬ್ಬರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ಎಫ್ಐಆರ್ ದಾಖಲಾಗಿದೆ.
ಆರ್.ಆರ್.ನಗರದ ಬಿಇಎಂಎಲ್ 5ನೇ ಹಂತದ ನಿವಾಸಿ, ವಕೀಲೆ ಅಮಿತಾ ಜಿಂದಾಲ್ ಎಂಬುವರು ದೂರು ನೀಡಿದ್ದಾರೆ. ಅ.28ರಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದರು.
ಔಷಧಿಗಳಿಲ್ಲದೆ ಆರೋಗ್ಯ ಚಿಕಿತ್ಸೆ: ಸುಪ್ರೀಂ ರೇ ಹೀಲಿಂಗ್ ಸೆಂಟರ್ : ಇಲ್ಲಿದೆ ಉಚಿತ ಸಲಹೆ – Reiki
ಸ್ಪರ್ಶ ಆಸ್ಪತ್ರೆಗೆ ಕಾರ್ಯಕ್ರಮವೊಂದಕ್ಕೆ 28ರಂದು ತೆರಳಿದ್ದೆ. ಕಾರನ್ನು ದರ್ಶನ್ ಮನೆ ಪಕ್ಕದಲ್ಲಿದ್ದ ಖಾಲಿ ಪ್ರದೇಶದ ಎದುರಿನ ರಸ್ತೆಯಲ್ಲಿ ನಿಲುಗಡೆ ಮಾಡಿದ್ದೆ. ಕಾರ್ಯಕ್ರಮ ಮುಗಿಸಿ ವಾಪಸ್ ಬಂದಾಗ ನಾಯಿಗಳು ದಾಳಿ ನಡೆಸಿದವುದು ತಿಳಿಸಿದ್ದಾರೆ.
ಎರಡು ನಾಯಿಗಳನ್ನು ಕಟ್ಟಿದ್ದು, ಒಂದನ್ನು ಹಾಗೆಯೇ ಬಿಡಲಾಗಿತ್ತು. ಕಾರು ತೆಗೆದುಕೊಳ್ಳಬೇಕಿದ್ದು, ನಾಯಿಗಳನ್ನು ಬೇರೆಯಡೆ ಒಯ್ಯಲು ಕಾವಲುಗಾರನಲ್ಲಿ ಮನವಿ ಮಾಡಿದೆ. ಆದರೆ, ಆತ ಕಾರು ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆಸಿದ.ಈ ಸಂದರ್ಭದಲ್ಲಿ ನಾಯಿಗಳು ದಾಳಿ ನಡೆಸಿದವು ಹೊಟ್ಟೆ ಭಾಗಕ್ಕೆ ಗಾಯವಾಗಿದೆ. ಬಟ್ಟೆ ಹರಿದುಹಾಕಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಾಯಿಗಳು ಕಚ್ಚುತ್ತವೆ ಎಂದು ಎಚ್ಚರಿಕೆ ವಹಿಸಿರಲಿಲ್ಲ. ಮನೆ, ಶ್ವಾನಗಳ ಮಾಲೀಕರು, ಶ್ವಾನ ನೋಡಿಕೊಳ್ಳುತ್ತಿದ್ದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.