ಚಿತ್ರದುರ್ಗ: ಮನೆ ಮುಂದೆ ಆಟವಾಡುತ್ತಿದ್ದ 6 ವರ್ಷದ ಬಾಲಕನ (Boy) ಮೇಲೆ ನಾಯಿಯೊಂದು (Dog) ಎರಗಿ ಕೈಕಾಲುಗಳಿಗೆ ಸೇರಿ 11 ಕಡೆ ಕಚ್ಚಿ ಗಾಯಗೊಳಿಸಿರುವ ಘಟನೆ ಚಿತ್ರದುರ್ಗದ (Chitradurga) ಜೆಸಿಆರ್ ಬಡಾವಣೆಯಲ್ಲಿ ನಡೆದಿದೆ.
ಜೆಸಿಆರ್ ಬಡಾವಣೆಯ 6ನೇ ಅಡ್ಡರಸ್ತೆಯ ಜ್ಯೋತಿ-ನಾಗರಾಜ್ ದಂಪತಿಯ ಪುತ್ರ ಸಾಯಿ ಚರಣ್ (6) ನಿನ್ನೆ ಸಂಜೆ ವೇಳೆ ಮನೆ ಮುಂದೆ ತನ್ನ ಅಕ್ಕನೊಂದಿಗೆ ಆಟವಾಡುತ್ತಿದ್ದ. ಆಗ ಏಕಾಏಕಿ ಬಾಲಕನ ಮೇಲೆ ದಾಳಿ ನಡೆಸಿರೋ 2 ನಾಯಿಗಳು, 11 ಕಡೆ ಕಚ್ಚಿ ಗಾಯಗೊಳಿಸಿವೆ. ಈ ವೇಳೆ ಅಲ್ಲಿನ ಸ್ಥಳೀಯರು ನಾಯಿಗಳಿಂದ ಬಾಲಕನ ರಕ್ಷಣೆಗೆ ಹರಸಾಹಸಪಟ್ಟಿದ್ದಾರೆ.
ಒಂದು ನಾಯಿ ಜನರ ಬೆದರಿಕೆಗೆ ಹೆದರಿ ಓಡಿ ಹೋದರು ಸಹ ಮತ್ತೊಂದು ನಾಯಿ, ಜನರ ಆವಾಜ್ಗೆ ಡೋಂಟ್ ಕೇರ್ ಎಂದಿದೆ. ಪದೇ ಪದೇ ಬಾಲಕನ ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಸದ್ಯ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾನೆ