ಕೆಲವರು ನಾಲ್ಕು ಜನರ ಮುಂದೆ, ಮಾತನಾಡಲು ಶರುಮಾಡಿದರೆ ಸಾಕು, ಅವರ ಬಾಯಿ ಯಿಂದ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಇದರಿಂದ ಅವರಿಗೆ ಇರಿಸು-ಮುರಿಸು ಆಗು ವುದರ ಜೊತೆಗೆ, ಅಲ್ಲಿ ನೆರೆದಿರುವ ಇತರರಿಗೂ ಕೂಡ ಕಿರಿಕಿರಿಯನ್ನುಂಟು ಮಾಡುತ್ತದೆ. ಹೀಗಾಗಿ ಈ ಸಮಸ್ಯೆ ಇರುವವರು, ಸಾಮಾನ್ಯವಾಗಿ ಬಾಯಿತೆರೆದು ಮಾತನಾಡಲು ಸಹ ಅವರು ಹಿಂಜರಿಯುತ್ತಾರೆ. ಅಲ್ಲದೆ ಕೆಲವೊಮ್ಮೆ ಪಾಪ, ಇತರರ ಮುಂದೆ, ಮುಜುಗರಕ್ಕೊಳಗಾಗುವುದು ಬೇಡವೆಂದು, ಎಲ್ಲರಿಂದ ದೂರ ಇರಲು ಬಯಸುತ್ತಾರೆ.
ಇದಕ್ಕೆ ಕಾರಣಗಳನ್ನು ನೋಡುವುದಾದರೆ, ಊಟದ ಬಳಿಕ ಸರಿಯಾಗಿ, ಬ್ರಷ್ ಮಾಡದೇ ಇರುವುದು, ಇಲ್ಲಾಂದರೆ ಇವರಲ್ಲಿ ಕಂಡು ಬರುವ ದಂತಕುಳಿ, ಒಸಡಿನ ಸಮಸ್ಯೆ, ಈರುಳ್ಳಿ-ಬೆಳ್ಳುಳ್ಳಿ ಸೇವನೆ, ಹೊಟ್ಟೆಯಿಂದ ಪದೇ ಪದೇ ಹುಳಿ ತೇಗು ಬರುವುದು, ಇತ್ಯಾದಿ ಸಮಸ್ಯೆಗಳು ಮೇಲ್ನೋಟಕ್ಕೆ ಕಂಡು ಬರುತ್ತದೆ. , ಹಾಗೂ ನಾಲ್ಕು ಜನರ ಮುಂದೆ, ಆಗುವ ಮುಜುಗರವನ್ನು ತಪ್ಪಿಸಲು ಯಾವ ತಂತ್ರಗಳನ್ನು ಅನುಸರಿಸಬೇಕು, ಎಂಬುನ್ನು ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ.
ಬಾಯಿಯ ವಾಸನೆ ದೂರ ಮಾಡುವುದು ಹೇಗೆ?:
ಸಿಟ್ರಿಕ್ ಆಮ್ಲ:
ಹಸಿ ಈರುಳ್ಳಿಗೆ ನಿಂಬೆ ಅಥವಾ ನಿಂಬೆ ರಸವನ್ನು ಸೇರಿಸುವುದರಿಂದ ವಾಸನೆಯನ್ನು ಉಂಟುಮಾಡುವ ಕಿಣ್ವಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.
ಹಣ್ಣುಗಳ ಸೇವನೆ ಮಾಡಿ:
ನಿಮ್ಮ ಬಾಯಿಯಿಂದ ಈರುಳ್ಳಿ-ಬೆಳ್ಳುಳ್ಳಿಯ ವಾಸನೆಯನ್ನು ದೂರಾಗಿಸಲು ನೀವು ನಿಮಗಿಷ್ಟವಾದ ಹಣ್ಣುಗಳನ್ನು ಸೇವನೆ ಮಾಡಿ. ಸೇಬುಹಣ್ಣು, ಕಿತ್ತಳೆ ಹಣ್ಣು, ಪೈನಾಪಲ್, ದಾಳಿಂಬೆ ಹಣ್ಣು, ಸೀಬೆಹಣ್ಣು, ಮೋಸಂಬಿ ಹಣ್ಣು, ನಿಂಬೆಹಣ್ಣಿನ ರಸ, ನೇರಳೆ ಹಣ್ಣು ಇತ್ಯಾದಿ ಹಣ್ಣುಗಳ ಸೇವನೆರು ತಕ್ಷಣವೇ ಬಾಯಿಯ ಸಹಿಸಲಸಾಧ್ಯವಾದ ವಾಸನೆಯಿಂದ ಮುಕ್ತಿ ನೀಡುತ್ತವೆ.
ಗ್ರೀನ್ ಟೀ ಸೇವಿಸಿ:
ಹಸಿರು ಚಹಾ, ಅದರ ಪಾಲಿಫಿನಾಲ್ಗಳು ಅಥವಾ ಹೆಚ್ಚಿನ ಕೊಬ್ಬಿನಂಶ ಹೊಂದಿರುವ ಹಾಲು, ವಾಸನೆಯನ್ನು ಮರೆಮಾಚಲು ಸಹಾಯ ಮಾಡುತ್ತದೆ.
ಲವಂಗ ತಿನ್ನಿ:
ಲವಂಗದ ವಾಸನೆ ಸಹ ತುಂಬಾ ಗಾಢವಾಗಿ ಇರುವುದರಿಂದ ಇದನ್ನು ಬಾಯಿಯಲ್ಲಿ ಹಾಕಿಕೊಂಡು ಸ್ವಲ್ಪ ಹೊತ್ತು ಇದರ ರಸ ಸೇವನೆ ಮಾಡಲು ಮುಂದಾದರೆ ಆನಂತರದಲ್ಲಿ ಸಂಪೂರ್ಣವಾಗಿ ಕಾಫಿ ಸೇವನೆಯ ವಾಸನೆ ಬಾಯಿಂದ ದೂರವಾಗುತ್ತದೆ.
ನಿಂಬೆ ಸರ ಅಥವಾ ಪುದೀನ ಸೇವಿಸಿ :
ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಇದು ಬ್ಯಾಕ್ಟೀರಿಯಗಳ ಸೋಂಕನ್ನು ನಿವಾರಣೆ ಮಾಡುವಲ್ಲಿ ಮತ್ತು ಬಾಯಿಯ ದುರ್ವಾಸನೆಯನ್ನು ದೂರ ಮಾಡುವಲ್ಲಿ ಅತ್ಯಂತ ಲಾಭಕಾರಿ ಎಂದು ಹೇಳಬಹುದು. ಅಲ್ಲದೆ ಬಾಯಿಯ ದುರ್ವಾಸನೆಗೆ ಮುಕ್ತಿ ಕಾಣಿಸಲು ತಾಜಾ ಪುದಿನ ಎಲೆಗಳನ್ನು ಬಾಯಲ್ಲಿ ಹಾಕಿಕೊಂಡು ಜಗಿಯಬೇಕು. ಇದರಿಂದ ಆದಷ್ಟು ಬೇಗನೆ ನಿಮ್ಮ ಬಾಯಿಯಲ್ಲಿ ಹೊಸ ತಾಜಾತನ ಕಂಡುಬರುವ ಜೊತೆಗೆ ಮೊದಲಿನ ರುಚಿ ನಿಮ್ಮ ನಾಲಿಗೆಗೆ ವಾಪಸ್ ಬರುತ್ತದೆ.
ಪುದೀನಾ
ಒಂದು ವೇಳೆ ಟೀ-ಕಾಫಿ ಕುಡಿದ ಬಳಿಕ, ಇಲ್ಲಾಂದರೆ ಈರುಳ್ಳಿ ಅಥವಾ ಬೆಳ್ಳುಳ್ಳಿ ತಿಂದ ಬಳಿಕ ಬಾಯಿಯಿಂದ ದುರ್ವಾ ಸನೆ ಬರುತ್ತಿದ್ದರೆ, ಮೂರು ನಾಲ್ಕು ತಾಜಾ ಪುದೀನಾ ಎಲೆಗಳನ್ನು ಬಾಯಲ್ಲಿ ಹಾಕಿಕೊಂಡು ಜಗಿಯಬೇಕು, ಇದರ ರಸವನ್ನು ನಿಧಾನಕ್ಕೆ ನುಂಗುತ್ತಾ ಬರಬೇಕು. ಇದರಿಂದ ಕೂಡ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ.
ಸೋಂಪು ಕಾಳು
ಊಟವಾದ ಬಳಿಕ, ಒಂದು ಟೇಬಲ್ ಚಮಚ ಕಾಳುಗಳನ್ನು ಬಾಯಿಯಲ್ಲಿ ಹಾಕಿ ಕೊಂಡು ಜಗಿಯುವ ಅಭ್ಯಾಸ ಮಾಡಿಕೊಂಡರೆ ಜೀರ್ಣಶಕ್ತಿ ಹೆಚ್ಚಾ ಗುವುದು ಮಾತ್ರವಲ್ಲದೆ, ಬಾಯಿಯ ವಾಸನೆಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳ ಪ್ರಭಾವ ಕೂಡ ನಿಯಂತ್ರಣಕ್ಕೆ ಬರುತ್ತದೆ! ಇದಕ್ಕೆ ಮುಖ್ಯ ಕಾರಣ, ಈ ಕಾಳುಗಳಲ್ಲಿ ಕಂಡು ಬರುವ ಪ್ರಬಲ ಆಂಟಿ ಆಕ್ಸಿಡೆಂಟುಗಳು ಹಾಗೂ ಇತರ ಪೌಷ್ಟಿಕ ಸತ್ವಗಳು, ಇಂತಹ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.