ಬೆಂಗಳೂರು: ತಿರುಪತಿ ಲಡ್ಡು ಪ್ರಸಾದ ಅಂದ್ರೆ ಪ್ರತಿಯೊಬ್ಬ ಭಕ್ತರಿಗೂ ಅಚ್ಚುಮೆಚ್ಚು. ಕಷ್ಟಪಟ್ಟು ತಿರುಮಲ ಬೆಟ್ಟ ಹತ್ತೋ ಭಕ್ತರಂತೂ ಲಡ್ಡು ಪ್ರಸಾದವನ್ನು ಸ್ವೀಕರಿಸಿ ಪುನೀತರಾಗುತ್ತಾರೆ. ತಿಮ್ಮಪ್ಪನ ಲಡ್ಡು ಪ್ರಸಾದದ ಸ್ವಾದಿಷ್ಟ ರುಚಿಗೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿತ್ತು. ಆದರೆ ಇನ್ನುಮುಂದೆ ತಿರುಪತಿ ಲಡ್ಡು ಪ್ರಸಾದದಲ್ಲಿ ನಂದಿನಿ ತುಪ್ಪ ಇರಲ್ಲ. ಯಾಕಂದ್ರೆ ತಿರುಪತಿ ತಿಮ್ಮಪ್ಪ ಹಾಗೂ ನಂದಿನಿ ತುಪ್ಪದ ಸಂಬಂಧ ಟೆಂಡರ್ ಮೂಲಕ ಮತ್ತೆ ಕಡಿತವಾಗಿದೆ. ತಿರುಪತಿ ತಿಮ್ಮಪ್ಪನ ವಿಷಯ ಬಂದ್ರೆ ಹಣ-ಭಕ್ತಿ ಜತೆಗೆ ಹೆಚ್ಚು ಪ್ರಸ್ತಾಪವಾಗೋದು ಅಲ್ಲಿ ಪ್ರಸಾದವಾಗಿ ನೀಡಲಾಗುವ ಲಾಡು.
ರುಚಿಕರವಷ್ಟೇ ಅಲ್ಲ ಘಮಘಮಿಸುವ ಸುಗಂಧದಿಂದ ಎಲ್ಲರನ್ನು ಸೆಳೆಯುವ ಲಾಡುವಿನ ಶ್ರೇಯಸ್ಸಿಗೆ ಕರ್ನಾಟಕದ ನಂದಿನಿ ತುಪ್ಪದ ಕೊಡುಗೆ ಅಪಾರ ಇತ್ತು.ಆದ್ರೆ ಕೆಲ ವರ್ಷದಿಂದಲೂ ಅದ್ಹೇಕೋ ತಿರುಪತಿ ಲಾಡುವಿನ ರುಚಿ-ಸುಗಂಧ ಬಹುತೇಕರಿಗೆ ಸಹ್ಯವಾಗುತ್ತಿಲ್ಲ ಎನ್ನೋ ಆಪಾದನೆ ಇದೆ..ಇದಕ್ಕೆ ಕಾರಣ ನಮ್ಮ ನಂದಿನಿ ತುಪ್ಪದ ಪೂರೈಕೆ ಸ್ಥಗಿತ.ದರ ಸಂಧಾನದಲ್ಲಿ ವ್ಯತ್ಯಾಸಗಳಾಗಿದ್ದರಿಂದ ಕಡಿಮೆ ದರಕ್ಕೆ ತುಪ್ಪ ಪೂರೈಸ್ಲಿಕ್ಕೆ ಆಗೊಲ್ಲ ಎಂದು ಕೆಎಂಎಫ್ ಹೇಳಿರೋದ್ರಿಂದ ನಿಮ್ಮ ತುಪ್ಪ ನಮಗೆ ಬೇಡ ಎಂದಿದೆಯಂತೆ ಟಿಟಿಡಿ ಆಡಳಿತ ಮಂಡಳಿ,
Mumbai 26/11 Attacks: ಪಾಕ್ ಜೈಲಿನಲ್ಲೇ ವಿಷ ಪ್ರಾಶನಕ್ಕೆ ತುತ್ತಾಗಿರುವ ಮೋಸ್ಟ್ ವಾಂಟೆಡ್ ಉಗ್ರ..!
ಹೌದು..ದೇಶದಲ್ಲಿ ನಂದಿನಿ ತುಪ್ಪಕ್ಕಿರುವ ಮಾರುಕಟ್ಟೆ ಬೆಲೆಗಿಂತ ಅರ್ಧಕ್ಕರ್ಧ ಬೆಲೆಗೆ ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಗೆ ತುಪ್ಪವನ್ನು ಕಳಿಸಲು ಸಾಧ್ಯವಿಲ್ಲ ಎಂದು ಕೆಎಂಎಫ್ನಿಂದ ತುಪ್ಪ ಸರಬರಾಜು ಮಾಡಿರಲಿಲ್ಲ. ಆದರೆ, ಕಳೆದ ಎರಡು ಬಾರಿಯಿಂದ ಟಿಟಿಡಿಯ ತುಪ್ಪದ ಟೆಂಡರ್ನಲ್ಲಿ ಕೆಎಂಎಫ್ ಭಾಗವಹಿಸಿದರೂ ನಂದಿನಿ ತುಪ್ಪದ ದರ ಹೆಚ್ಚಾಗಿದ್ದು, ಖರೀದಿ ಮಾಡಲು ಸಾಧ್ಯವಿಲ್ಲ ಎಂದು ತಿರುಪತಿ ತಿಮ್ಮಪ್ಪ ದೇವಸ್ಥಾನ ಆಡಳಿತ ಮಂಡಳಿ ತಿರಸ್ಕರಿಸಿದೆ.
ಈ ಮೂಲಕ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಿಂದ ನಂದಿನಿ ತುಪ್ಪದ ಘಮ ಕಾಣೆಯಾಗಿದೆ.ಟೆಂಡರ್ ನಲ್ಲಿ ಟಿಟಿಡಿ ಕೇಳ್ತಿರೋ ಕಡಿಮೆ ದರಕ್ಕೆ ತುಪ್ಪ ಸರಬರಾಜು ಮಾಡಲ್ಲ ಎಂದು ಕೆಎಂಎಫ್ ಹೇಳಿತ್ತು. ಆದರೆ, ಈ ಬಾರಿ ಕಳೆದ ಬಾರಿಗಿಂತ ಕಡಿಮೆ ದರಕ್ಕೆ ನಂದಿನಿ ತುಪ್ಪವನ್ನು ಸರಬರಾಜು ಮಾಡುವುದಾಗಿ ಕೆಎಂಎಫ್ ಟಿಟಿಡಿ ಟೆಂಡರ್ನಲ್ಲಿ ಭಾಗವಹಿಸಿದ್ದರೂ ಅದಕ್ಕಿಂತ ಕಡಿಮೆ ದರದ ತುಪ್ಪವನ್ನು ಟಿಟಿಡಿ ಖರೀದಿ ಮಾಡಲು ಮುಂದಾಗಿದೆ. ಆದ್ದರಿಂದ ಕೆಎಂಎಫ್ಗೆ ಮತ್ತೆ ಹಿನ್ನಡೆ ಉಂಟಾಗಿದೆ.
ತಿರುಪತಿ ಮತ್ತು ಕೆಎಂಎಫ್ ದಶಕಗಳಿಂದ ತುಪ್ಪದ ಸರಬರಾಜು ಸಂಬಂಧವನ್ನು ಹೊಂದಿದ್ದವು.ಆದರೆ, ಕಳೆದ ಬಾರಿಗಿಂತ ಕಡಿಮೆ ಬಿಡ್ ಮಾಡಿದ್ರೂ KMFಗೆ ಟಿಟಿಡಿ ತುಪ್ಪದ ಟೆಂಡರ್ ಸಿಗಲಿಲ್ಲ. ಕೆಎಂಎಫ್ ಅಧಿಕಾರಿಗಳು ಈ ಬಾರಿ ಟಿಟಿಡಿ ಟೆಂಡರ್ ಪಡೆಯಲು ಹರಸಾಹಸ ಪಟ್ಟಿದ್ದರು. ಕೆಎಂಎಫ್ ಟೆಂಡರ್ ನ ಎಲ್ಲ ಪ್ರಕ್ರಿಯೆಯಲ್ಲಿ ಪಾಸ್ ಆಗಿದ್ದರೂ, ದರ ವಿಚಾರವಾಗಿ ಅತ್ಯಂತ ಕನಿಷ್ಠ ಬಿಡ್ ಮಾಡಿದ ಕಂಪನಿಗೆ ಟೆಂಡರ್ ಸಿಕ್ಕಿದೆ. ಇತ್ತೀಚಿಗಷ್ಟೇ ಬೆಂಗಳೂರು ಕೆಎಂಎಫ್ ಯೂನಿಟ್ ಗೆ ಭೇಟಿ ನೀಡಿದ್ದ ಟಿಟಿಡಿ ತುಪ್ಪ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿತ್ತು.
ಕರ್ನಾಟಕದ ಕೆಎಂಎಫ್ ತುಪ್ಪಕ್ಕೆ ಪ್ರತಿ ಕೆ.ಜಿಗೆ 550 ರೂ. ದರ ನಿಗದಿಪಡಿಸಿ ಟಿಟಿಡಿ ಟೆಂಡರ್ನಲ್ಲಿ ತುಪ್ಪಕ್ಕೆ ಬಿಡ್ ಮಾಡಿತ್ತು. ಆದ್ರೆ ಬೇರೆ ಕಂಪನಿ ಇದಕ್ಕಿಂತ ಕಡಿಮೆ ದರ ನಿಗದಿ ಮಾಡಿ ಬಿಡ್ ಮಾಡಿತ್ತು.ಟಿಟಿಡಿ ಮಾಹಿತಿಯ ಪ್ರಕಾರ ಪ್ರತಿ ಕೆ.ಜಿ. ತುಪ್ಪಕ್ಕೆ ಕೇವಲ 370 ರೂ.ನಂತೆ ತುಪ್ಪ ಸರಬರಾಜು ಮಾಡುವುದಾಗಿ ಖಾಸಗಿ ಕಂಪನಿಯೊಂದು ಟೆಂಡರ್ಗೆ ಬಿಡ್ ಮಾಡಿತ್ತು. ಆದರೆ, ಇಷ್ಟು ಕಡಿಮೆ ಬಿಡ್ ಮಾಡಿದ್ರೆ ಕೆಎಂಎಫ್ಗೆ ಆರ್ಥಿಕ ನಷ್ಟ ಆಗುವ ಭೀತಿಯಿದೆ. ಹೀಗಾಗಿ ಟಿಟಿಡಿ ನೀಡ್ತಿರೋ ರೇಟ್ ಗೆ ತುಪ್ಪು ಪೂರೈಕೆ ಅಸಾಧ್ಯ ಅಂತ ಕೆಎಂಎಫ್ ಎಂಡಿ ಹೇಳ್ತಿದ್ದಾರೆ.
ಒಟ್ಇನಲ್ಲಿ ಕೆಎಂಎಫ್ ಮೊದಲೇ ನಷ್ಟದಲ್ಲಿದೆ.ಯಾವ್ ಮಟ್ಟದ ಆರ್ಥಿಕ ಹಿಂಜರಿತ ಇದೆ ಎಂದರೆ ನಾವು ಎಚ್ಚೆತ್ತುಕೊಳ್ಳದಿದ್ದರೆ ಕೆಎಂಎಫ್ ಮುಚ್ಚೇ ಹೋಗಬಹುದು.ಹಾಲು ಪೂರೈಸುವ ರೈತರಿಗೆ ಪ್ರೋತ್ಸಾಹಧನ ನೀಡಲಾಗುತ್ತಿಲ್ಲ.ಈ ಕಾರಣಕ್ಕೆ ಅವರು ತಮ್ಮ ರಾಸುಗಳನ್ನೇ ಮಾರುವ ಸ್ತಿತಿಗೆ ತಲುಪಿದ್ದಾರೆ.
ಇಂಥಾ ಪರಿಸ್ಥಿತಿಯಲ್ಲಿ ತಿರುಪತಿಗೆ ಅವರು ಕೇಳುವ ಕನಿಷ್ಟಾತೀಕನಿಷ್ಟ ದರದಲ್ಲಿ ತುಪ್ಪ ಪೂರೈಸಿ ನಮ್ಮ ರೈತರ ಹಿತಾಸಕ್ತಿ ಬಲಿಗೊಡುವಂತ ಅವಶ್ಯಕತೆ ನಮಗಂತೂ ಇಲ್ಲ.ನಮಗೆ ಮೊದಲು ನಮ್ಮ ರೈತರ ಹಿತ ಮುಖ್ಯ.ದರದಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡರೆ ನಂದಿನಿ ತುಪ್ಪವನ್ನು ತಿರುಪತಿಗೆ ಪೂರೈಸ್ಲಿಕ್ಕೆ ಈಗಲೂ ನಾವು ಸಿದ್ದರಿದ್ದೇವೆ ಅಂತ ಕೆಎಂಎಫ್ ಹೇಳ್ತಿದೆ.ಆದ್ರೆ ಟಿಟಿಡಿ ಮಾತ್ರ ಕಡಿಮೆ ರೇಟ್ ತಪ್ಪಕ್ಕೆ ಮಣೆ ಹಾಕಿರೋದು ಭಕ್ತರಿಗೂ ರುಚಿಯ ನಿರಾಶೆ ಮೂಡಿಸಿದೆ.