ಕೆಲವರಿಗೆ ರಾತ್ರಿ ಸಂದರ್ಭದಲ್ಲಿ ಕೈಕಾಲುಗಳಲ್ಲಿ ಮುಳ್ಳು ಚುಚ್ಚಿದ ಅನುಭವ ಉಂಟಾಗುತ್ತದೆ. ಇದು ಬ್ಲಡ್ ಶುಗರ್ ಲೆವೆಲ್ ಹೆಚ್ಚಾದ ಸಾಧ್ಯತೆಯನ್ನು ತೋರಿಸುತ್ತದೆ.
ದೀರ್ಘಕಾಲದ ರಕ್ತದಲ್ಲಿನ ಹೆಚ್ಚಿನ ಗ್ಲುಕೋಸ್ ಈ ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ ಮತ್ತು ಮುಖ್ಯವಾಗಿ ನರಗಳ ಹಾನಿ ಕೂಡ ಉಂಟಾಗುತ್ತದೆ. ಇದರಿಂದ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಮಾಡಲಾಗುವುದಿಲ್ಲ.
ದೇಹದ ತೂಕದಲ್ಲಿ ಬದಲಾವಣೆ ಕಂಡು ಬಂದರೆ ಅದು ಕೂಡ ಬ್ಲಡ್ ಶುಗರ್ ಲೆವೆಲ್ ಏರಿಕೆಯಾದ ಬಗ್ಗೆ ಹೇಳುತ್ತದೆ ಎನ್ನಬಹುದು. ನಮ್ಮ ದೇಹ ಕೊಬ್ಬಿನ ಅಂಶವನ್ನು ಕರಗಿಸುವ ಕೆಲಸ ಮಾಡುತ್ತದೆ ಮತ್ತು ಇದರಿಂದ ಮಾಂಸ ಖಂಡಗಳಿಗೆ ಶಕ್ತಿ ಮತ್ತು ಚೈತನ್ಯ ದೊರಕುತ್ತದೆ.
ನಾವು ಸೇವಿಸುವ ಆಹಾರದಲ್ಲಿ ಕಂಡುಬರುವ ಗ್ಲೂಕೋಸ್ ಪ್ರಮಾಣವನ್ನು ನಮ್ಮ ದೇಹ ಸರಿಯಾಗಿ ಬಳಸಿಕೊಳ್ಳದೆ ಇರುವ ಸಂದರ್ಭದಲ್ಲಿ ಈ ರೀತಿ ಆಗುತ್ತದೆ. ಇದರಿಂದ ದೇಹದ ತೂಕ ಸಹಜವಾಗಿ ಕಡಿಮೆಯಾಗುತ್ತದೆ. ಡಯಟ್ ನಲ್ಲಿ ಅಥವಾ ದೈಹಿಕ ಚಟುವಟಿಕೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಇದ್ದರೂ ಕೂಡ ಈ ರೀತಿ ಆದರೆ ತಕ್ಷಣವೇ ಡಾಕ್ಟರ್ ಬಳಿ ತೋರಿಸಿಕೊಳ್ಳಿ.
ಕಣ್ಣು ಮಂಜಾಗುತ್ತೆ..
ರಕ್ತದಲ್ಲಿನ ಶುಗರ್ ಲೆವೆಲ್ ಜಾಸ್ತಿ ಆದ ಸಂದರ್ಭದಲ್ಲಿ ಅದು ರಕ್ತನಾಳ ಗಳ ಮೇಲೆ ಕೆಟ್ಟ ಪ್ರಭಾವ ಬೀರಬಹುದು.
ಕಣ್ಣುಗಳ ಭಾಗಕ್ಕೆ ವಿಸ್ತಾರ ವಾಗಿರುವಂತಹ ರಕ್ತನಾಳಗಳು ಹಾಳಾಗುವುದರಿಂದ ರಾತ್ರಿ ಹೊತ್ತು ಕಣ್ಣು ಕಾಣದಂತೆ ಆಗಬಹುದು. ಅಥವಾ ಮಂದ ಬೆಳಕಿನಲ್ಲಿ ಕಣ್ಣು ಮಂಜಾಗ ಬಹುದು.
ಗಾಯ ಬೇಗ ವಾಸಿಯಾಗಲ್ಲ
ಸಕ್ಕರೆ ಕಾಯಿಲೆ ಇರುವ ಜನರು ವಿಶೇಷವಾಗಿ ಕೈಕಾಲುಗಳಲ್ಲಿ ಗಾಯ ಮಾಡಿಕೊಂಡರೆ ಬೇಗನೆ ವಾಸಿ ಆಗುವುದಿಲ್ಲ ಎಂದು ಕಂಪ್ಲೇಂಟ್ ಹೇಳುತ್ತಾರೆ.
ಬ್ಲಡ್ ಶುಗರ್ ಲೆವೆಲ್ ದೇಹದಲ್ಲಿ ಏರಿಕೆ ಆದಾಗ ಸೋಂಕುಗಳ ವಿರುದ್ಧ ನಮ್ಮನ್ನು ರಕ್ಷಿಸಲು ಜೀವಕೋಶಗಳಿಗೆ ಸಾಧ್ಯವಾಗುವುದಿಲ್ಲ. ಇದರಿಂದ ವಾಸಿಯಾಗುವ ಸಮಯ ಮತ್ತಷ್ಟು ಮುಂದಕ್ಕೆ ಹೋಗುತ್ತದೆ. ಹೀಗಾಗಿ ಪಾದಗಳ ಭಾಗದಲ್ಲಿ ಅಲ್ಸರ್ ಉಂಟಾಗಿದ್ದರೆ ಅಂತಹವರು ಬಹಳಷ್ಟು ಹುಷಾರಾಗಿರಬೇಕು.
ತುಂಬಾ ಹೊಟ್ಟೆ ಹಸಿವಾಗುತ್ತೆ
ಕೆಲವರಿಗೆ ಯಾವಾಗಲೂ ಹೊಟ್ಟೆ ಹಸಿವು ಆಗುತ್ತಲೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ರಾತ್ರಿ ಸಂದರ್ಭದಲ್ಲಿ ಈ ರೀತಿ ಆಗುತ್ತದೆ. ಅಂದರೆ ಇದರ ಅರ್ಥ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಶುಗರ್ ಲೆವೆಲ್ ಇರುತ್ತದೆ ಎಂದು.
ಹೀಗಾಗಿ ನಿಮ್ಮ ದೇಹಕ್ಕೆ ಬೊಜ್ಜಿನ ಪ್ರಮಾಣವನ್ನು ಒದಗಿಸುವ ಆಹಾರಗಳ ಮೇಲೆ ನೀವು ಗಮನ ಇಡಬೇಕು. ಸಕ್ಕರೆ ಕಾಯಿಲೆ ಬರಲು ಇದು ಪ್ರಮುಖ ಕಾರಣವಾಗಿರುತ್ತದೆ.
ಜಾಸ್ತಿ ಸುಸ್ತಾಗುತ್ತೆ!
ನಮ್ಮ ಬ್ಲಡ್ ಶುಗರ್ ಲೆವೆಲ್ ಹೆಚ್ಚಾದ ಸಂದರ್ಭದಲ್ಲಿ ನಾವು ದೈಹಿಕವಾಗಿ ದುರ್ಬಲರಾಗುತ್ತೇವೆ. ಮಾಡಿಕೊಳ್ಳಲು ಕೆಲವೊಮ್ಮೆ ಕಷ್ಟವಾಗುತ್ತದೆ.
ಏಕೆಂದರೆ ನಮ್ಮ ಜೀವಕೋಶಗಳು ತಮ್ಮ ಕಾರ್ಯ ಚಟುವಟಿಕೆಗೆ ಅಗತ್ಯವಾಗಿ ಬೇಕಾದ ಗ್ಲುಕೋಸ್ ಪ್ರಮಾಣವನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ.
ಬಾಯಾರಿಕೆ ಹೆಚ್ಚಾಗುತ್ತೇ
ರಕ್ತದಲ್ಲಿ ಬ್ಲಡ್ ಶುಗರ್ ಲೆವೆಲ್ ಜಾಸ್ತಿಯಾದರೆ ಅದರಿಂದ ವಿಪರೀತ ಬಾಯಾರಿಕೆ ಮತ್ತು ಮೂತ್ರ ವಿಸರ್ಜನೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಏಕೆಂದರೆ ಈ ಸಂದರ್ಭದಲ್ಲಿ ನಮ್ಮ ಕಿಡ್ನಿಗಳು ಅತಿಯಾದ ಗ್ಲುಕೋಸ್ ಪ್ರಮಾಣವನ್ನು ಹೀರಿಕೊಳ್ಳುವ ಸಲುವಾಗಿ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿರುತ್ತವೆ.
ಹೀಗಾಗಿ ರಾತ್ರಿ ಹೊತ್ತು ಪದೇ ಪದೇ ಮೂತ್ರ ವಿಸರ್ಜನೆ ಹೋಗು ವುದು ಆಗುತ್ತಿರುತ್ತದೆ. ಇದರಿಂದ ಸರಿಯಾಗಿ ನಿದ್ರೆ ಕೂಡ ಬರುವುದಿಲ್ಲ