ನವದೆಹಲಿ:- ಅಳಿಯನಿಗೆ ಮಾವನ ಆಸ್ತಿ ಮೇಲೆ ಹಕ್ಕಿರುವ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಬ್ಬ ವೃದ್ಧ ವ್ಯಕ್ತಿ ತನ್ನ ಅಳಿಯ ತನ್ನ ಮನೆಯನ್ನು ಆಕ್ರಮಿಸಿಕೊಂಡಿದ್ದಾನೆ ಎಂದು ಕೇಸ್ ದಾಖಲಿಸಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈಗ ಈ ನಿಟ್ಟಿನಲ್ಲಿ ಮಹತ್ವದ ತೀರ್ಪು ನೀಡಲಾಗಿದೆ.
ನಿಮ್ಮ ಸ್ಕಿನ್ ಪಳಪಳನೆ ಹೊಳೆಯಬೇಕಾ? ಹಾಗಿದ್ರೆ ರಾತ್ರಿ ಮಲಗೋ ಮುನ್ನ ಈ ಕೆಲಸ ಮಾಡಿ!
ಪ್ರಕರಣವೊಂದರ ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶರು ಒಂದು ಪ್ರಮುಖ ತೀರ್ಪನ್ನು ನೀಡಿದ್ದಾರೆ. ಈ ಪ್ರಕರಣದಲ್ಲಿ ಅಳಿಯನಿಗೆ ತನ್ನ ಮಾವನ ಮನೆಯನ್ನು ತಕ್ಷಣವೇ ಖಾಲಿ ಮಾಡುವಂತೆ ನಿರ್ದೇಶಿಸಲಾಗಿದೆ. ಅಳಿಯ ತನ್ನ ಮಾವನ ಮನೆಯಲ್ಲಿ ವಾಸಿಸುತ್ತಿದ್ದ. ಆದರೆ, ಅವನ ಮಾವ ಅಳಿಯನಿಗೆ ಮನೆಯಿಂದ ಹೊರಹೋಗುವಂತೆ ಕೇಳಿದಾಗ ಅವನು ಆ ಮನೆಯ ಮೇಲೆ ತನಗೂ ಹಕ್ಕಿದೆ ಎಂದು ಹೇಳಲಾರಂಭಿಸಿದನು.
ಭೋಪಾಲ್ ನಿವಾಸಿ ದಿಲೀಪ್ ಮರ್ಮತ್ ತನ್ನ ಮಾವನ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲವು ಸಮಯದ ಹಿಂದೆ, ಆತನ ಮಾವ ಎಸ್ಡಿಎಂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಆತನಿಂದ ಮನೆ ಖಾಲಿ ಮಾಡಿಸಬೇಕೆಂದು ಮೇಲ್ಮನವಿ ಸಲ್ಲಿಸಲಾಗಿತ್ತು. ಅಲ್ಲಿಂದ ಮನೆ ಖಾಲಿ ಮಾಡುವಂತೆ ಆದೇಶ ಬಂದಾಗ, ದಿಲೀಪ್ ಭೋಪಾಲ್ ಕಲೆಕ್ಟರ್ಗೆ ಮೇಲ್ಮನವಿ ಸಲ್ಲಿಸಿದರು. ಆದರೆ ಅದನ್ನು ತಿರಸ್ಕರಿಸಲಾಯಿತು.
ಇದರ ನಂತರ, ಅಳಿಯ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು. ಮಾವ ವಾಸವಾಗಿರುವ ಮನೆ ಕಟ್ಟಲು 10 ಲಕ್ಷ ರೂ. ಪಾವತಿಸಿರುವುದಾಗಿ ಅಳಿಯ ಹೇಳಿಕೊಂಡಿದ್ದಾನೆ. ಆದರೆ ನ್ಯಾಯಾಲಯವು ಆತನಿಗೆ ಆ ಮನೆ ಖಾಲಿ ಮಾಡುವಂತೆ ಆದೇಶಿಸಿದೆ
ದಿಲೀಪ್ಗೆ ಅವರ ಮಾವ ಮನೆಯಲ್ಲಿ ವಾಸಿಸಲು ಮಾತ್ರ ಅವಕಾಶ ನೀಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ ಆತ ಆ ಮನೆಯನ್ನು ಪಡೆಯಲು ಸಾಧ್ಯವಿಲ್ಲ. ಅಳಿಯನ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸಿದರೆ ಆತ ಅದರ ಮೇಲೆ ತಮ್ಮ ಹಕ್ಕನ್ನು ಪಡೆಯಬಹುದು. ಆದರೆ ಅವರಿಗೆ ಆಸ್ತಿಯಲ್ಲಿ ವಾಸಿಸಲು ಮಾತ್ರ ಅವಕಾಶವಿದ್ದರೆ ಆತ ಆಸ್ತಿಯ ಮೇಲೆ ತಮ್ಮ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.