ಭಾರತೀಯ ಆಹಾರಪದ್ಧತಿಯಲ್ಲಿ ಅನ್ನಕ್ಕೆ ಹೆಚ್ಚಿನ ಮಹತ್ವವಿದೆ. ವಿದೇಶಗಳಲ್ಲಿರುವಂತೆ ಮೂರೂ ಹೊತ್ತು ಸ್ಯಾಂಡ್ವಿಚ್, ಬರ್ಗರ್, ರೋಟಿಯನ್ನು ತಿನ್ನದೆ ಭಾರತೀಯರು ಹೆಚ್ಚಾಗಿ ಅನ್ನವನ್ನೇ ತಿನ್ನುತ್ತಾರೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೊತ್ತು ಎಲ್ಲಾ ಮನೆಗಳಿಂದಲೂ ಕುಕ್ಕರ್ ವಿಶಲ್ ಕೇಳಿ ಬರುತ್ತವೆ. ಚಿತ್ರಾನ್ನ, ಮೊಸರನ್ನ, ವಾಂಗೀಬಾತ್, ಪುಲಾವ್ ಹೀಗೆ ಹೆಚ್ಚಿನ ರೆಸಿಪಿಗಳನ್ನು ತಯಾರಿಸಲು ಅನ್ನವೇ ಬೇಕಾಗಿರುವ ಕಾರಣ ಹೆಚ್ಚಿನ ಜನರು ಕುಕ್ಕರ್ನಲ್ಲಿ ಸುಲಭವಾಗಿ ಅನ್ನವನ್ನು ಬೇಯಿಸಿಕೊಳ್ಳುತ್ತಾರೆ.
ಬೆಂಗಳೂರಿನ ಯುವಕ-ಯುವತಿ ಚಿಕ್ಕಮಗಳೂರಿನಲ್ಲಿ ದುರ್ಮರಣ: ಸಾವಿನ ಸುತ್ತ ಅನುಮಾನದ ಹುತ್ತ!
ಇತ್ತೀಚಿನ ವರ್ಷಗಳಲ್ಲಿ ಕುಕ್ಕರ್ ನಲ್ಲಿ ಅನ್ನ ಬೇಯಿಸುವವರ ಸಂಖ್ಯೆ ಹೆಚ್ಚಾಗಿದೆ. ಆಫಿಸ್, ಕಾಲೇಜ್, ಸ್ಕೂಲ್, ಮನೆಗೆ ಅತಿಥಿಗಳು ಬಂದಾಗ ಅಡುಗೆ ಬೇಗ ಆಗಲಿ ಎಂಬ ಕಾರಣಕ್ಕೆ ಪ್ರೆಶರ್ ಕುಕ್ಕರ್ನಲ್ಲಿ ಜನ ಅನ್ನ ಮಾಡುತ್ತಾರೆ. ಆದರೆ ತಮ್ಮ ಅನುಕೂಲಕ್ಕಾಗಿ ಪ್ರೆಶರ್ ಕುಕ್ಕರ್ನಲ್ಲಿ ಅನ್ನ ಮಾಡುವುದು ಎಷ್ಟು ಸರಿ? ನಿಜಕ್ಕೂ ಇದು ಆರೋಗ್ಯಕ್ಕೆ ಒಳ್ಳೆಯದಾ? ಎಂಬುವುದರ ಬಗ್ಗೆ ನಾವಿಂದು ತಿಳಿಯೋಣ ಬನ್ನಿ.
ಅನೇಕ ಮನೆಗಳಲ್ಲಿ ಜನ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಹೊತ್ತು ಅನ್ನ ಮಾಡಲು ಕುಕ್ಕರ್ ಬಳಸುತ್ತಾರೆ. ಅದರಲ್ಲೂ ಕೆಲವರು ಏನನ್ನೇ ಮಾಡಬೇಕಾದರೂ ಕುಕ್ಕರ್ ಅನ್ನು ಅವಲಂಬಿಸಿದ್ದಾರೆ. ಆದರೆ ಇದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ ಎಂದು ವೈದ್ಯರು ಹೇಳುತ್ತಾರೆ.
ಹೊಟ್ಟೆ ಬಹಳ ಹೊತ್ತು ತುಂಬಿರುತ್ತದೆ: ಪ್ರೆಶರ್ ಕುಕ್ಕರ್ನಲ್ಲಿ ಅನ್ನ ಬೇಯಿಸಿದರೆ, ಅನ್ನದಲ್ಲಿರುವ ಗಂಜಿಯೂ ಅದರಲ್ಲೇ ಉಳಿಯುತ್ತದೆ. ಈ ಪಿಷ್ಟವು ದೀರ್ಘಕಾಲದವರೆಗೆ ನಿಮ್ಮ ಹೊಟ್ಟೆಯನ್ನು ತುಂಬಿರುವಂತೆ ಮಾಡುತ್ತದೆ. ಅಲ್ಲದೇ, ಇದು ದೀರ್ಘಕಾಲದವರೆಗೆ ಹಸಿವಾಗುವುದನ್ನು ತಡೆಯುತ್ತದೆ. ಹಸಿವು ಕಡಿಮೆಯಾಗುವುದರಿಂದ ತೂಕವೂ ನಿಯಂತ್ರಣದಲ್ಲಿರುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಪ್ರೆಶರ್ ಕುಕ್ಕರ್ನಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಅಕ್ಕಿಯನ್ನು ಪ್ರೆಶರ್ ಕುಕ್ಕರ್ಗೆ ಹಾಕಿ ಬೇಯಿಸುವುದರಿಂದ ಇದು ಚೆನ್ನಾಗಿ ಬೇಯುತ್ತದೆ. ನಂತರ ಇದರ ಸೇವನೆಯು ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಸಹಾಯ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಸಾಕಷ್ಟು ಪೋಷಣೆ: ನೀವು ಅನ್ನ ತಯಾರಿಸಲು ಪ್ರೆಶರ್ ಕುಕ್ಕರ್ ಅಥವಾ ರೈಸ್ ಕುಕ್ಕರ್ ಬಳಸಿದರೆ, ಅದರಲ್ಲಿರುವ ಪೋಷಕಾಂಶಗಳು ಅನ್ನದಲ್ಲಿಯೇ ಉಳಿಯುತ್ತವೆ. ಆದರೆ ಪಾತ್ರೆಯಲ್ಲಿ ಅನ್ನವನ್ನು ಬೇಯಿಸುವಾದ ಅದರಲ್ಲಿರುವ ನೀರನ್ನು ಬಸಿಯಬೇಕಾಗುತ್ತದೆ. ಇದರಿಂದ ಅನ್ನದಲ್ಲಿರುವ ಅನೇಕ ಪೋಷಕಾಂಶಗಳು ಕಳೆದುಹೋಗುತ್ತವೆ.
ಬ್ಯಾಕ್ಟೀರಿಯಾ ವಿರೋಧಿ: ಪ್ರೆಶರ್ ಕುಕ್ಕರ್ನಲ್ಲಿ ಅಕ್ಕಿ ಬೇಯಿಸಿದಾಗ, ಅದರಲ್ಲಿ ಯಾವುದೇ ಬ್ಯಾಕ್ಟೀರಿಯಾ ಉಳಿಯುವ ಸಾಧ್ಯತೆ ಇರುವುದಿಲ್ಲ. ಆದ್ದರಿಂದ, ಪ್ರೆಶರ್ ಕುಕ್ಕರ್ನಲ್ಲಿ ಅನ್ನ ಬೇಯಿಸಿ ತಿನ್ನುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.
ಶಕ್ತಿ ಮತ್ತು ಸಮಯವನ್ನು ಉಳಿಸುತ್ತದೆ: ನಾವು ಅಕ್ಕಿಯನ್ನು ಪ್ರೆಶರ್ ಕುಕ್ಕರ್ನಲ್ಲಿ ಕೂಗಿಸುವುದರಿಂದ ಅದು ಬಹಳ ವೇಗವಾಗಿ ಬೇಯುತ್ತದೆ. ಅಲ್ಲದೇ, ಅನಿಲ (ಗ್ಯಾಸ್) ಸಹ ವ್ಯರ್ಥವಾಗುವುದಿಲ್ಲ. ಇದು ನಿಮ್ಮ ಸಮಯ ಮತ್ತು ಶಕ್ತಿಯನ್ನು ಉಳಿಸುತ್ತದೆ.