ವಿಶ್ವದಲ್ಲಿಯೇ ಅತಿ ವೇಗವಾಗಿ ಹೆಚ್ಚುತ್ತಿರುವ ಮಧುಮೇಹಿಗಳನ್ನು ಹೊಂದಿರುವ ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ. ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಆದರೆ ಮಧುಮೇಹದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಲು ಚಿಕಿತ್ಸೆಯನ್ನು ಪಡೆಯಬೇಕು. ಅಲ್ಲದೇ, ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯವಿರುತ್ತದೆ. ಅದರಲ್ಲೂ ಮುಖ್ಯವಾಗಿ ಮಧುಮೇಹಿಗಳು ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಬೇಕು.
ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಅಡಗಿದೆ ಆರೋಗ್ಯದ ನಿಧಿ! ಇದರ ಪ್ರಯೋಜನ ತಿಳಿಯಿರಿ!
ಆಲ್ಕೋಹಾಲ್ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ಎಲ್ಲರಿಗೂ ತಿಳಿದಿದೆ. ಇದು ಯಕೃತ್ತು, ನಿದ್ರೆ ಮತ್ತು ತೂಕದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮಧುಮೇಹ ರೋಗಿಗಳಲ್ಲಿ ಆಲ್ಕೋಹಾಲ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಯಾವುದೋ ಸಂದರ್ಭದಲ್ಲಿ ಒಂದು ಅಥವಾ ಎರಡು ಪೆಗ್ ತೆಗೆದುಕೊಂಡರೇ ಅದು ದೊಡ್ಡ ವಿಷಯವಲ್ಲ ಎನ್ನುವ ಮನಸ್ಥಿತಿಯವರೂ ಇದ್ದಾರೆ.. ಆದರೆ ಒಂದು ಹನಿ ಆಲ್ಕೋಹಾಲ್ ಕೂಡ ಅಪಾಯಕಾರಿ.
ನಾವು ಆಲ್ಕೊಹಾಲ್ ಸೇವಿಸಿದಾಗ, ನಮ್ಮ ದೇಹವು ಅದನ್ನು ವಿಷ ಎಂದು ಗುರುತಿಸುತ್ತದೆ. ಅದಕ್ಕಾಗಿಯೇ ದೇಹವು ಇತರ ಚಟುವಟಿಕೆಗಳಿಗಿಂತ ಆಲ್ಕೋಹಾಲ್ ಸೇವಿಸಿದಾಗ ನಡೆದುಕೊಳ್ಳುವ ರೀತಿಯೇ ಬೇರೆ ಇರುತ್ತದೆ.. ಇದು ಕರುಳಿನಲ್ಲಿ ಪ್ರವೇಶಿಸಿದ ತಕ್ಷಣ, ಚಯಾಪಚಯವು ತೊಂದರೆಗೊಳಗಾಗುತ್ತದೆ.
ಇದಲ್ಲದೇ ಆಲ್ಕೋಹಾಲ್ನೊಂದಿಗೆ ಕಾಕ್ಟೇಲ್ಗಳು ಅಥವಾ ಸಕ್ಕರೆ ಮಿಕ್ಸರ್ಗಳನ್ನು ಕುಡಿಯುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇನ್ನಷ್ಟು ಹೆಚ್ಚಿಸಬಹುದು.
ಆಲ್ಕೋಹಾಲ್ ಆರೋಗ್ಯಕ್ಕೆ ಸುರಕ್ಷಿತವಲ್ಲ. WHO, ಲ್ಯಾನ್ಸೆಟ್ ಬಿಡುಗಡೆ ಮಾಡಿದ 2023 ರ ವರದಿಯ ಪ್ರಕಾರ.. ಯಕೃತ್ತು, ಸಿರೋಸಿಸ್, ಹೃದ್ರೋಗ ಮತ್ತು ಇತರ ಸಾಂಕ್ರಾಮಿಕವಲ್ಲದ ಕಾಯಿಲೆಗಳಂತಹ ವಿವಿಧ ಕಾಯಿಲೆಗಳಿಗೆ ಆಲ್ಕೋಹಾಲ್ ಪ್ರಮುಖ ಕಾರಣವಾಗಿದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ