ತೂಕ ಇಳಿಸಿಕೊಳ್ಳಬೇಕು ಎಂಬುದು ಹೇಳಿದಷ್ಟು ಸುಲಭವಾಗಿ ಇಲ್ಲ. ಅಧ್ಯಯನಗಳ ಪ್ರಕಾರ, US ನಲ್ಲಿ ಸುಮಾರು 100 ಜನರಲ್ಲಿ 70 ಜನರು ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ನಿದ್ರಾಹೀನತೆಯಿಂದ ಬಳಲುತ್ತಾರೆ. ಉತ್ತಮ ನಿದ್ರೆ ನಿಮ್ಮ ದೇಹದ ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಬೆತ್ತಲೆಯಾಗಿ ಮಲಗುವುದು ನಿದ್ರೆಯ ಅವಧಿ ಮತ್ತು ಗುಣಮಟ್ಟವನ್ನು ಸುಧಾರಿಸುವ ಒಂದು ಮಾರ್ಗವಾಗಿದೆ.
ನಗ್ನವಾಗಿ ಮಲಗುವುದು ನಿದ್ರೆಯನ್ನು ಹೆಚ್ಚಿಸಲು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಚೆನ್ನಾಗಿ ನಿದ್ರೆ ಮಾಡುವುದರಿಂದ ಬೇಗನೆ, ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದು ಸಂಶೋಧನೆಗಳು ಸಹ ತಿಳಿಸಿವೆ. ನಗ್ನವಾಗಿ ಮಲಗುವುದರಿಂದ ದೇಹದಲ್ಲಿ ಹೆಚ್ಚಿದ ಒತ್ತಡದ ಪರಿಣಾಮವಾಗಿ ಉತ್ಪತ್ತಿಯಾಗುವ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಒತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ದೇಹದ ತೂಕ ಹೆಚ್ಚಾಗುತ್ತಾ ಇರುತ್ತದೆ ಎಂದು ಹೇಳಲಾಗಿದೆ. ಬೆತ್ತಲೆಯಾಗಿ ಹಾಗೂ ಕಡಿಮೆ ಬಟ್ಟೆ ಧರಿಸಿ ಮಲಗುವುದರಿಂದ ನಿಮ್ಮ ಹಾರ್ಮೋನ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, ನಗ್ನವಾಗಿ ಮಲಗುವುದರಿಂದ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ.
ಖಾಸಗಿ ವಿಡಿಯೋ ಲೀಕ್ ಕೇಸ್… ಬೆಂಗಳೂರಿಗೆ ಬರಲು ಕೊನೆಗೂ ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್!
ವಿಲೀ ಆನ್ಲೈನ್ ಲೈಬ್ರರಿ ಪ್ರಕಟಿಸಿದ ಅಧ್ಯಯನವು ಮಲಗುವ ಕೋಣೆಯ ಉಷ್ಣತೆಯನ್ನು ಮೂರು ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿಸಿದಾಗ ನಿದ್ರೆಯಲ್ಲಿ ಬದಲಾವಣೆ ಆಗಿ ಸುಮಾರು 30 ನಿಮಿಷಗಳವರೆಗೆ ನಿದ್ರೆಯನ್ನು ಕಡಿಮೆ ಮಾಡುತ್ತದೆ ಎಂದು ಉಲ್ಲೇಖಿಸಿದೆ. ಬೆತ್ತಲೆಯಾಗಿ ಮಲಗುವುದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ, ನಿದ್ರಾಭಂಗವಿಲ್ಲದೆ ಆರಾಮಾದಾಯಕವಾಗಿ ನಿದ್ರಿಸಬಹುದು. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಆರೋಗ್ಯಕರ ರೀತಿಯಲ್ಲಿ ತೂಕವನ್ನು ಇಳಿಸಿಕೊಳ್ಳಲು, ಆಹಾರ ಮತ್ತು ವ್ಯಾಯಾಮದಂತಹ ಜೀವನಶೈಲಿ ರೂಢಿ ಮಾಡಿಕೊಳ್ಳಬೇಕು. ಕೆಲ ಪ್ರಮುಖ ಅಂಶಗಳು ನಿಮ್ಮ ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ತಜ್ಞರು ಹೇಳುವ ಸಲಹೆಗಳು ತಿಳಿಯೋಣ.
ಬೆಳಗಿನ ಉಪಾಹಾರವನ್ನು ಎಂದಿಗೂ ಬಿಡಬೇಡಿ.
ಪ್ರತಿ ದಿನ ಸರಿಯಾದ ಸಮಯಕ್ಕೆ ಮೂರು ಹೊತ್ತು ಆಹಾರ ಸೇವಿಸಬೇಕು.
ಸೀಸನ್ ಗಳಿಗೆ ತಕ್ಕಂತೆ ಬರುವ ಹಣ್ಣು, ತರಕಾರಿಗಳನ್ನು ಸೇವಿಸಬೇಕು.
ಮದ್ಯಪಾನ, ಹೆಚ್ಚು ಆಲ್ಕೋಹಾಲ್ ತೆಗೆದುಕೊಳ್ಳುವುದಕ್ಕೆ ಕಡಿವಾಣ ಹಾಕಬೇಕು.
ಪ್ರತಿ ದಿನ ವ್ಯಾಯಾಮ, ವರ್ಕೌಟ್ ಮಾಡುವುದು.
ಚೆನ್ನಾಗಿ ಶುದ್ಧ ಕುಡಿಯುವ ನೀರು ಕುಡಿಯುವುದು
ಬಿಸಿಬಿಸಿಯಾಗಿ ತಾಜಾ ತರಕಾರಿಗಳಿಂದ ಮಾಡಿದ ಆಹಾರ ಸೇವಿಸುವುದು.
ಒತ್ತಡ ತೆಗೆದುಕೊಳ್ಳದೆ ಆರಾಮಾದಾಯಕವಾಗಿ ಜೀವನ ನಡೆಸುವುದು.
ಆರೋಗ್ಯಕರ ತೂಕ ಇಳಿಕೆಗಾಗಿ ಉತ್ತಮ ಆಹಾರ ಪದ್ಧತಿ ಇರಬೇಕು. ಪ್ರತಿನಿತ್ಯ ವ್ಯಾಯಾಮ, ಯೋಗ ಸಹ ಅತ್ಯವಶ್ಯಕ.