ದೊಡ್ಡಬಳ್ಳಾಪುರ: ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಳೆಯಿಂದಾಗಿ ಸಾಕಷ್ಟು ಅನಾಹುತಾ ಸೃಷ್ಟಿಯಾಗಿದ್ದರೆ, ಮಳೆಯಿಲ್ಲದೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಬರದ ವಾತಾವರಣ ನಿರ್ಮಾಣವಾಗಿದೆ. ಮಳೆಯಿಲ್ಲದೆ ಬೆಳೆಗಳು ಒಣಗುವ ಹಂತಕ್ಕೆ ಹೋಗಿದ್ದು ಜನರು ಮಳೆಗಾಗಿ ಪ್ರಾರ್ಥನೆ ಮಾಡಿ ಹಳೆ ಸಂಪ್ರದಾಯದಂತೆ ಪೂಜೆ ಮಾಡುತ್ತಿದ್ದಾರೆ. ಈ ಕುರಿತು ಕಂಪ್ಲಿಟ್ ವರದಿ ಇಲ್ಲಿದೆ ನೋಡಿ……………….
ನಿಮ್ಮ ಮಕ್ಕಳು ಫೋನ್ ಗೆ ಅಡಿಕ್ಟ್ ಆಗಿದ್ದಾರಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!
ಹೌದು ಹೀಗೆ ಊರಿನ ಗ್ರಾಮಸ್ಥರೆಲ್ಲ ಸೇರಿ ಒಟ್ಟಿಗೆ ಕೂತು ಮದುವೆ ಮಾಡುತ್ತಿರುವ ದೃಶ್ಯಗಳು, ತಲೆಗೆ ಬಾಚಿಂಗ, ರೇಷ್ಮೆ ಸೀರೆ ಉಟ್ಟು ವಧುವರರ ರೀತಿ ಫೋಸ್ ನೀಡುತ್ತಿರುವ ಹುಡುಗರು, ಈ ಎಲ್ಲಾ ದೃಶ್ಯಗಳು ಕಂಡಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪಚ್ಚಾರಲಹಳ್ಳಿ ಗ್ರಾಮದಲ್ಲಿ. ಕಳೆದ ಒಂದು ತಿಂಗಳಿನಿಂದಲೂ ಮಳೆಯಿಲ್ಲದೆ ಕಂಗಲಾಗಿದ್ದು ಇಂದು – ನಾಳೆ ಮಳೆಯಾಗುತ್ತದೆ ಎಂಬ ನಂಬಿಕೆಯಿಂದಲೇ ಜನರು ಕಾಲ ಕಳೆಯುತ್ತಿದ್ದಾರೆ. ಕಳೆದ ತಿಂಗಳು ಬಿದ್ದ ಮಳೆಗೆ ಗೊಬ್ಬರ ಹಾಕಿ, ಬೆಳೆ ಉತ್ತಮವಾಗಿ ಬೆಳೆಯುತ್ತದೆ ಎಂಬ ನಂಬಿಕೆಯಲ್ಲಿ ರೈತರ ಕನಸಿಗೆ ಮಳೆ ನೀರೆರೆಚಿದೆ. ಮಳೆಗಾಗಿ ಈಗ ಜನರು ದೇವರ ಮೊರೆ ಹೋಗಿದ್ದು ಕರಾವಳಿ ಭಾಗದಲ್ಲಿ ಕಪ್ಪೆಗಳಿಗೆ ಮದುವೆ ಮಾಡಿಸುವುದು, ಕತ್ತೆಗಳಿಗೆ ಮದುವೆ ಮಾಡಿಸುವುದು ಕಂಡು ಬರುತ್ತದೆ. ಆದರೆ ಬಯಲು ಸೀಮೆಯಲ್ಲಿ ಇಬ್ಬರು ಹುಡುಗರಿಗೆ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ..
ಇನ್ನೂ ಹುಡುಗರಿಗೆ ಮದುವೆ ಮಾಡಿಸುವ ವೇಳೆ ಒಬ್ಬನಿಗೆ ವಧುವಿನ ರೀತಿ ರೇಷ್ಮೆ ಸೀರೆ ಹಾಕಿ, ಒಡವೆ ವಸ್ತ್ರಗಳನ್ನು ಹಾಕಿ ಸಿಂಗಾರ ಮಾಡುತ್ತಾರೆ. ಮತ್ತೊಬ್ಬ ಹುಡುಗನಿಗೆ ಬಾಚಿಂಗ ಕಟ್ಟಿ ವರನ ರೀತಿ ರೆಡಿ ಮಾಡಲಾಗುತ್ತದೆ. ಈ ಮದುವೆಗೂ ಮುನ್ನಾ ಒಂದು ವಾರಗಳ ಕಾಲ ಮನೆಯ ಮುಂದಿನ ಅಂಗಳದಲ್ಲಿ ಹಸುವಿನ ಸಗಣಿಯಿಂದ ಸಾರಿಸಿ, ರಂಗೋಲಿಯಲ್ಲಿ ಚಂದ್ರನನ್ನು ಬಿಟ್ಟು ಪೂಜೆ ಮಾಡುತ್ತಾರೆ. ಒಂದು ವಾರದ ನಂತರ ಹುಡುಗರಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಮೊದಲೇ ಬಯಲು ಸೀಮೆ ಎಂದು ಹೆಸರು ಪಡೆದಿರುವ ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಈ ಆಚರಣೆ ಮಾಡಲಾಗುತ್ತೆ..
ಒಟ್ಟಾರೆ ಮಳೆಗಾಗಿ ಜನರು ವಿಭಿನ್ನವಾಗಿ ಪೂಜೆ ಮಾಡಲು ಮುಂದಾಗಿದ್ದಾರೆ. ಕಪ್ಪೆಗಳ ಪೂಜೆ, ಚಂದಮಾಮ ಪೂಜೆ, ಕತ್ತೆಗಳು ಸೇರಿ ಹುಡುಗರಿಗೆ ಮದುವೆ ಮಾಡಿ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ರೈತರ ಈ ಎಲ್ಲಾ ಪ್ರಯತ್ನಗಳಿಗೆ ದೇವರು ಕರುಣಿಸಿ ವರುಣ ಧರೆಗಿಳಿಯಲಿ, ಬೆಳೆಗಳು ಸಮೃದ್ದಿಯಾಗಲಿ ಎಂದು ನಮ್ಮೆಲ್ಲರ ಆಶಯವಾಗಿದೆ..