ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯ ಮಹಿಳಾ ಕಾಂಗ್ರೆಸ್ , ಸುಶ್ರುತ ಸ್ವಯಂ ರಕ್ತದಾನ ಕೇಂದ್ರ ಬೆಂಗಳೂರು ಇವರ ಸಹಯೋಗದಿಂದ ಹಾಡೋನಹಳ್ಳಿಯಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.
ಮೈಸೂರಿನ ರಸ್ತೆಗೆ ಸಿದ್ದರಾಮಯ್ಯ ಹೆಸರು: ಸ್ನೇಹಮಯಿ ಕೃಷ್ಣ ಹೇಳಿದ್ದೇನು?
ರಕ್ತದಾನ ಶಿಬಿರವನ್ನು ಚಿರನುಡಿ ಕನ್ನಡಾಂಬೆ ಹೋರಾಟ ಸಮಿತಿ ಅಧ್ಯಕ್ಷ ರವಿ ಮಾವಿನಕುಂಟೆ ಅವರು ಉದ್ಘಾಟನೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ… ರಕ್ತದಾನ ಶಿಬಿರಗಳು ಹೆಚ್ಚುಹೆಚ್ಚಾಗಿ ನಡೆಯಬೇಕು. ರಕ್ತದಾನ ಮಾಡಿದರೆ ರೋಗಿಯ ಜೀವ ಬದುಕುಳಿಯುತ್ತದೆ. ರೋಗಿಯ ಜೀವ ಉಳಿಯುವುದರ ಜೊತೆಗೆ ರಕ್ತದಾನ ಮಾಡಿದ ವ್ಯಕ್ತಿಯಲ್ಲಿ ಹಳೇ ರಕ್ತ ಹೋಗಿ ಹೊಸ ರಕ್ತ ಬಂದು ಆರೋಗ್ಯವಾಗಿರುತ್ತಾನೆ ಎಂದರು.
ಹೆಚ್ಚಾಗಿ ಯುವಕರು ರಕ್ತದಾನವನ್ನು ಮಾಡಬೇಕು. ಈ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಬೇಕು. ತಾನೂ ಆರೋಗ್ಯವಾಗಿರಲು, ಇತರರನ್ನು ಆರೋಗ್ಯವಂತರನ್ನಾಗಿಸಲು ಭಯಪಡದೇ, ಹಿಂಜರಿಯದೇ ರಕ್ತದಾನವನ್ನು ಮಾಡಿ ಎಂದು ಮನವಿ ಮಾಡಿದರು.
ರಕ್ತದಾನ ಶಿಬಿರದಲ್ಲಿ ಯುವಕರು ಸ್ವಯಂಪ್ರೇತರಾಗಿ ಉಚಿತವಾಗಿ ರಕ್ತದಾನ ಮಾಡಿದರು. ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದವರಿಗೆ ಹಣ್ಣುಹಂಪಲು, ಪ್ರಮಾಣಪತ್ರವನ್ನು ನೀಡಲಾಯಿತು.
ಈ ವೇಳೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸವಿತಾ ಆನಂದ್, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮೀನಾ ಕೃಷ್ಣಾ ಮೂರ್ತಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶೋಭಾ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದಿನ್ನೂರು ಕೆ. ವೆಂಕಟೇಶ್ , ಊರಿನ ಮುಖಂಡರಾದ ಶೆಟ್ಟಪ್ಪ, ಪ್ರಕಾಶ್, ಅನ್ನದಾಸೋಹಿ ಮಲ್ಲೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.