ದೇವನಹಳ್ಳಿ:-ದೊಡ್ಡಬಳ್ಳಾಪುರ ನಗರ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ಘಟನೆ ಜರುಗಿದೆ. ದೊಡ್ಡಬಳ್ಳಾಪುರದ ಬಾಶಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.
ಅರಹಳ್ಳಿ- ಗುಡ್ಡದಹಳ್ಳಿ ಬಳಿಯ ಅಜಾಕ್ಸ್ ಕಂಪನಿ ಮುಂಭಾಗ ಚಿರತೆ ಕಾಣಿಸಿಕೊಂಡಿದ್ದು, ಗುಡ್ಡದಹಳ್ಳಿ ಅಪೇರಲ್ ಪಾರ್ಕ್ ಅಜಾಕ್ಸ್ ಕಂಪನಿಯ CCTV ಯಲ್ಲಿ ಚಿರತೆ ಪ್ರತ್ಯಕ್ಷ ದೃಶ್ಯ ಸೆರೆಯಾಗಿದೆ. ಈ ಹಿನ್ನೆಲೆ ಮತ್ತೆ ದೊಡ್ಡಬಳ್ಳಾಪುರ ನಾಗರೀಕರಲ್ಲಿ ಆತಂಕ ಹೆಚ್ಚಾಗಿದೆ.