ಶಿವಮೊಗ್ಗ:- ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಮೆಗ್ಗಾನ್ ಗೆ ದಾಖಲು ಮಾಡಲಾಗಿತ್ತು. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡದೇ ರೋಗಿ ಸಾವನ್ನಪ್ಪಿದ ಘಟನೆ ಜರುಗಿದೆ.
Hubballi: ಒನ್ ನೇಷನ್ ಒನ್ ಲಾ ಎಲ್ಲದಕ್ಕೂ ಅನ್ವಯವಾಗಲಿ:ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್
55 ವರ್ಷದ ಸ್ವಾಮಿನಾಥ್ ಭದ್ರಾವತಿಯಿಂದ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ವಿಷ ಸೇವಿಸಿ ಒದ್ದಾಡುತ್ತಿದ್ದ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ವೈದ್ಯರು ಮತ್ತು ಸಿಬ್ಬಂದಿ ವಿಫಲರಾಗಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಒಂದು ಗಂಟೆ ಆದರೂ ಯಾವುದೇ ಸಿಬ್ಬಂದಿ ಮತ್ತು ವೈದ್ಯರು ವ್ಯಕ್ತಿಗೆ ಚಿಕಿತ್ಸೆ ನೀಡದ ಪರಿಣಾಮ ರೋಗಿಯ ಜೀವ ಹೋಗಿದೆ.
ವಿಷಸೇವಿಸಿದ ಕೇಸ್ ಬಂದ ತಕ್ಷಣ ಕೂಡಲೇ ಅವರಿಗೆ ವಾಂತಿ ಮಾಡಿಸಬೇಕು. ಆದರೆ ವಾಂತಿ ಮಾಡಿಸಲು ಆಸ್ಪತ್ರೆಯಲ್ಲಿ ಉಪ್ಪು ಖಾಲಿ ಆಗಿದ್ದು, ಉಪ್ಪು ಇಲ್ಲದೇ ಸಿಬ್ಬಂದಿಗಳು ಪರದಾಡಿದ್ದಾರೆ. ಇನ್ನು ಉಪ್ಪು ತರಲು ಒಂದು ಗಂಟೆ ವಿಳಂಬ ಮಾಡಿದ್ದಾರೆ. ಅಷ್ಟರಲ್ಲೇ ವಿಷಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಜೀವ ಹೋಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲು ವೈದ್ಯರು ಮತ್ತು ಸಿಬ್ಬಂದಿಗಳು ಇರದ ಹಿನ್ನಲೆಯಲ್ಲಿ ವ್ಯಕ್ತಿಯ ಜೀವ ಹೋಗಿದೆ ಎನ್ನುವುದು ಮೃತನ ಕುಟುಂಬಸ್ಥರ ಆರೋಪವಾಗಿದೆ. ಸ್ವಾಮಿನಾಥ್ ನ ಸಾವಿಗೆ ವೈದ್ಯರು ಮತ್ತು ಜಿಲ್ಲಾಸ್ಪತ್ರೆಯ ಬೇಜವಾಬ್ದಾರಿಯೇ ಕಾರಣವಾಗಿದೆ.
ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮೃತನ ಕುಟುಂಬಸ್ಥರು ಮತ್ತು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ.