ಕೋಲಾರ: ನಗರದ ಹೋಪ್ ಹೆಲ್ತ್ ಕೇರ್ನಲ್ಲಿ ರೋಗಿ ಮೃತಪಡಲು ವೈದ್ಯರ ರ್ನಿಲಕ್ಷ ಕಾರಣವಲ್ಲ, ಚಿಕಿತ್ಸೆ ನೀಡುವಲ್ಲಿ ಲೋಪವಾಗಿಲ್ಲ ಎಂದು ವೈದ್ಯ ಐಎಂಎ ಜಿಲ್ಲಾಧ್ಯಕ್ಷ ಡಾ. ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು. ನಗರದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಸ್ಪತ್ರೆ ಮೇಲೆ ದಾಳಿ ಹಾಗೂ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿರುವ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕೋಲಾರ ಘಟಕ ವೈದ್ಯರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
Karnataka Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 4 ದಿನ ಮಳೆ ಸಾಧ್ಯತೆ!
ಇತ್ತೀಚೆಗೆ ರೋಗಿಗಳು ಸಾವನ್ನಪ್ಪಿದರೆ ಆಸ್ಪತ್ರೆ ಪೀಠೋಪಕರಣಗಳನ್ನು ಹೊಡೆದು ಹಾಕುವುದು, ವೈದ್ಯರ ಮೇಲೆ ಹಲ್ಲೆ ಮಾಡುವಂತಹ ಘಟನೆಗಳು ಹೆಚ್ಚಾಗುತ್ತಿವೆ. ಸರ್ಕಾರ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಿದ್ದು ಈ ಬಗ್ಗೆ ಸಾರ್ವಜನಿಕರು ಅರಿವು ಪಡೆದುಕೊಳ್ಳಬೇಕು. ಆಸ್ಪತ್ರೆಯ ಆಸ್ತಿ ಹಾನಿ ಮಾಡಿದರೆ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದ್ರು. ಆಸ್ಪತ್ರೆ ವೈದ್ಯರು ಯಾರೂ ಕೂಡ ರೋಗಿಗಳು ಸಾವು ಬಯಸಿರುವುದಿಲ್ಲ,
ಬೇರೆ ಬೇರೆ ಕಾರಣಗಳಿಂದ ಅಥವಾ ಕೊನೆಹಂತದಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡುವುದು ಸೇರಿದಂತೆ ಇತರೆ ಕಾರಣಗಳಿಂದ ಆಸ್ಪತ್ರೆಯಲ್ಲಿ ರೋಗಿ ಸಾವುನ್ನಪ್ಪಿದರೆ ಅದಕ್ಕೆ ವೈದ್ಯರು ಕಾರಣವಾಗಿರುವುದಿಲ್ಲ,
ಆದರೆ ಕೆಲವರು ವೈದ್ಯರ ನೀರ್ಲಕ್ಷದಿಂದಲೆ ಸಾವು ಸಂಭವಿಸಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ವೈದ್ಯರಿಂದ ಸುಲಿಗೆ ಮಾಡಲು ನೋಡುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರ ಗಮನಕ್ಕೆ ತಂದು ಸೂಕ್ತ ಕ್ರಮ ಜರಗಿಸಬೇಕೆಂದು ಒತ್ತಾಯಿಸಲಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಡಾ. ಯಶವಂತ್ ಮಾತನಾಡಿ ಆಸ್ಪತ್ರೆಗೆ ಬಂದಿದ್ದ ರೋಗಿಯ ಸಮಸ್ಯೆ ಏನು ಎಂಬುದು ಅರಿತು ಚಿಕಿತ್ಸೆ ನೀಡಲಾಗಿದೆ. ಅವರು ವಾರದ ಮುಂಚೆಯೆ ಕಾಯಿಲೆಗೆ ಚಿಕಿತ್ಸೆ ಪಡೆದುಕೊಂಡು, ಸುಧಾರಣೆಯಾಗಿದ್ದರು ಎಂದರು.
ಶ್ರೀನಿವಾಸಪುರದ ವೆಂಕಟರಮಣಪ್ಪ ಪುನಃ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿಗೆ ಬರುವ ಮೊದಲು ಸಿಟಿ ಸ್ಕ್ಯಾನಿಂಗ್ ವರದಿ ತಂದಿದ್ದರು, ಹೊಟ್ಟೆ ಉಬ್ಬಸ ಇದ್ದು, ಊಟ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು. ಇದಕ್ಕೆ ಪೂರಕವಾಗಿ ಪರೀಕ್ಷೆಗಳು, ಸ್ಕ್ಯಾನಿಂಗ್ ಮಾಡಿಸಲಾಗಿತ್ತು. ವರದಿ ನೀಡಿ ಚಿಕಿತ್ಸೆ ನೀಡದ್ದೆವೆ, ಆದರೆ ಫಲಕಾರಿಯಾಗದೇ ರೋಗಿ ಮೃತಪಟ್ಟಿರುವುದಕ್ಕೆ ನೋವು ಉಂಟು ಮಾಡಿದೆ ಎಂದು ತಿಳಿಸಿದರು.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಯಾರು ಸಹ ರ್ನಿಲಕ್ಷ ತೋರುವುದಿಲ್ಲ. ರೋಗಿಯ ಪ್ರಾಣ ಉಳಿಸುವ ಹಾಗೂ ಹರಡಿರುವ ಕಾಯಿಲೆಯಿಂದ ಸುಧಾರಣೆಯಾಗುವ ರೀತಿ ಚಿಕಿತ್ಸೆ ನೀಡುತ್ತಾರೆ. ವೈಜ್ಞಾನಿಕ ತೊಂದರೆಗಳಿಂದ ಮೃತಪಟ್ಟಿದ್ದು, ಅನುಮಾನ ಇದ್ದರೆ ಕಾನೂನು ಹೋರಾಟ ಮಾಡಬೇಕಿತ್ತು, ಅದು ಬಿಟ್ಟು ಆಸ್ತಿಗೆ ಹಾನಿ ಮಾಡುವುದು ಎಷ್ಟು ಮಾತ್ರ ಸರಿ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ವೈದ್ಯರಾದ ಡಾ. ಶಂಕರ್, ಡಾ. ಅರವಿದ್, ಡಾ.ಎಸ್.ಜಿ.ನಾರಾಯಣಸ್ವಾಮಿ, ಡಾ.ಬೀರೇಗೌಡ, ಡಾ.ಶ್ರೀನಿವಾಸ್ ಮತಿತರರು ಹಾಜರಿದ್ದರು.