ಇತ್ತೀಚಿನ ದಿನಗಳಲ್ಲಿ ಮನೆಯಿಂದ ಕೆಲಸ ಮಾಡುವ ಪದ್ಧತಿ ಮತ್ತೆ ಹೆಚ್ಚಾಗಿದೆ. ಮನೆಯಿಂದ ಕೆಲಸ ಮಾಡುವಾಗ, ಅನೇಕ ಜನರು ಲ್ಯಾಪ್ಟಾಪ್ ಗಳನ್ನು ಸೋಮಾರಿತನದಲ್ಲಿ ತಮ್ಮ ತೊಡೆಯ ಮೇಲಿಟ್ಟುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಅಪಾಯವಿದೆ. ದೀರ್ಘಕಾಲದವರೆಗೆ ನಿಮ್ಮ ತೊಡೆಯ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡುವುದರಿಂದ ಬಂಜೆತನದ ಸಮಸ್ಯೆ ಉಲ್ಬಣಗೊಳಿಸಬಹುದು. ಹೌದು ಇದರ ಬಗ್ಗೆ ನೀವು ಎಚ್ಚರ ವಹಿಸಲೇಬೇಕು. ಇಲ್ಲಿದೆ ಆ ಕುರಿತು ಹೆಚ್ಚಿನ ಮಾಹಿತಿ. ಅವುಗಳನ್ನು ತಿಳಿದುಕೊಳ್ಳಿ.
High Court: ನಟ ದರ್ಶನ್ ಗೆ ಜೈಲೂಟ ಫಿಕ್ಸ್; ಆ.20ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್!
ಇಂಟರ್ನೆಟ್ ಒಂದಿದ್ದರೆ ನಾವು ಎಲ್ಲಿ ಬೇಕಾದರೂ ಕುಳಿತು ಕೆಲಸ ಮಾಡಬಹುದು. ಇದಕ್ಕೆ ಸಹಕಾರಿಯಾಗಿ ವಿವಿಧ ಕಂಪನಿಗಳಿಂದ ಆಕರ್ಷಕ ಬೆಲೆಗಳಲ್ಲಿ ಬ್ರಾಂಡೆಡ್ ಲ್ಯಾಪ್ಟಾಪ್ಗಳು ಸಹ ಲಭ್ಯವಿವೆ.
ಸಾಧಾರಣ ಡೆಸ್ಕ್ ಟಾಪ್ ಕಂಪ್ಯೂಟರ್ ಇಷ್ಟಪಡದೆ ಇರುವವರು ಪೋರ್ಟಬಿಲಿಟಿ ಕಾರಣಕ್ಕೆ ಲ್ಯಾಪ್ಟಾಪ್ ಖರೀದಿ ಮಾಡುತ್ತಾರೆ ಮತ್ತು ಅನುಕೂಲ ಕರವಾಗಿ ಬಳಸುತ್ತಾರೆ ಕೂಡ. ಈಗ ಅಸಲಿ ವಿಷಯ ಏನೆಂದರೆ ಲ್ಯಾಪ್ಟಾಪ್ ಅನ್ನು ತೊಡೆಯ ಮೇಲೆ ನಿರಂತರವಾಗಿ ಇಟ್ಟುಕೊಂಡು ಕೆಲಸ ಮಾಡು ವುದರಿಂದ ಈ ಕೆಳಗಿನ ರೀತಿ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ಸಂಶೋಧನೆ ಅಭಿಪ್ರಾಯ ಪಟ್ಟಿದೆ.
ಇಂದು ಎಷ್ಟೋ ಜನ ಟೆಕ್ಕಿಗಳಿಗೆ ಮಕ್ಕಳಾಗುತ್ತಿಲ್ಲ. ಇದನ್ನು ನೋಡಿದ ಬೇರೆ ಟೆಕ್ಕಿಗಳು ನಮಗೆ ಮಕ್ಕಳೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾದರೆ ಏನು ಇದಕ್ಕೆಲ್ಲ ಕಾರಣ?
ಯಾವಾಗಲೂ ಲ್ಯಾಪ್ಟಾಪ್ ಜೊತೆಗಿರುವುದು. ಅದ ರಲ್ಲೂ ಸಾಕಷ್ಟು ಜನರು ಲ್ಯಾಪ್ಟಾಪ್ ಅನ್ನು ತೊಡೆ ಮೇಲೆ ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಇದು ಪ್ರಮು ಖವಾಗಿ ಮೈಕ್ರೋವೇವ್ ಸಿಗ್ನಲ್ ಗಳನ್ನು ನಿರಂತ ರವಾಗಿ ಕೊಡುತ್ತಿರುತ್ತದೆ.
ಇದರಿಂದ ಪುರುಷರ ವೀರ್ಯಾಣುಗಳು ಮತ್ತು ಮಹಿಳೆ ಯರ ಅಂಡಾಣುಗಳು ತೊಂದರೆಗೆ ಸಿಲುಕುತ್ತವೆ. ಹೀಗೆಂದು ನಾವು ಹೇಳುತ್ತಿಲ್ಲ.
ಸಾಕಷ್ಟು ಸಂಶೋಧನೆಗಳು ಈ ಬಗ್ಗೆ ಅಧ್ಯಯನ ಮಾಡಿ ವರದಿ ಕೊಟ್ಟಿವೆ. ಪ್ರಮುಖವಾಗಿ ಲ್ಯಾಪ್ಟಾಪ್ ಅನ್ನು ವೃಷ ಣಗಳ ಭಾಗದಲ್ಲಿ ತೊಡೆಯ ಮೇಲೆ ಇಟ್ಟುಕೊಂಡು ನಿರಂತರವಾಗಿ ಕೆಲಸ ಮಾಡುವುದರಿಂದ ಫಲವತ್ತತೆಯ ತೊಂದರೆ ಸಾಕಷ್ಟು ಎದುರಾಗುತ್ತದೆ
ಲ್ಯಾಪ್ಟಾಪ್ ಒಂದು ಎಲೆಕ್ಟ್ರಾನಿಕ್ ಮೆಷಿನ್. ಇದು ನಿರಂತರವಾಗಿ ತನ್ನಿಂದ ಬಿಸಿಯನ್ನು ಹೊರಗೆ ಹಾಕುತ್ತದೆ. ತೊಡೆಯ ಭಾಗದ ಚರ್ಮ ಇದರಿಂದ ಹಾನಿಗೆ ಒಳಗಾಗುವುದು ಖಚಿತ.
ಇದು ಹೀಗೆ ಮುಂದುವರೆದರೆ ತೊಡೆಯ ಭಾಗದಲ್ಲಿ ಚರ್ಮದ ಕ್ಯಾನ್ಸರ್ ಕಂಡು ಬರುತ್ತದೆ ಎಂದು ಚರ್ಮ ರೋಗ ತಜ್ಞರು ಈ ಹಿಂದೆಯೇ ಕೇಳಿದ್ದಾರೆ.
ಕೆಲವರಿಗಂತೂ ಚರ್ಮದ ಜೀವಕೋಶಗಳ ಕ್ಯಾನ್ಸರ್ ಹೆಚ್ಚಾಗಿ ತುಂಬಾ ಗಂಭೀರ ಸ್ವರೂಪದ ಸಮಸ್ಯೆ ಎದುರಾ ಗುತ್ತದೆ. ಅದ ರಲ್ಲೂ ಕೆಲವು ಪುರುಷರಿಗೆ ವೃಷಣಗಳ ಭಾಗದಲ್ಲಿ ಕ್ಯಾನ್ಸರ್ ಕಂಡು ಬರುತ್ತದೆ.
ಇದನ್ನು ನಾವೇನು ಬೇರೆ ಹೇಳಬೇಕಾಗಿಲ್ಲ. ಏಕೆಂದರೆ ಲ್ಯಾಪ್ಟಾಪ್ ಅನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡುವ ಪ್ರತಿಯೊಬ್ಬರಿಗೂ ಇದರ ಅನುಭವ ಆಗಿರುತ್ತದೆ.
ಹಾಗಾಗಿ ನಿಮಗೆ ಸರಿ ಹೊಂದುವಂತಹ ಒಂದು ಲ್ಯಾಪ್ಟಾಪ್ ಟೇಬಲ್ ಖರೀದಿಸಿ ಅದರ ಮೇಲೆ ಲ್ಯಾಪ್ ಟಾಪ್ ಇಟ್ಟು ಕೆಲಸ ಮಾಡಿ. ಇದರಿಂದ ನಿಮ್ಮ ಬೆನ್ನು ನೋವು ಹಾಗೂ ಕುತ್ತಿಗೆ ನೋವು ಕ್ರಮೇಣವಾಗಿ ಕಡಿಮೆಯಾಗುತ್ತದೆ.
ಲ್ಯಾಪ್ಟಾಪ್ ಅನ್ನು ಟೇಬಲ್ ಮೇಲೆ ಇಟ್ಟು ಕೆಲಸ ಮಾಡುವುದಕ್ಕೂ ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಏಕೆಂದರೆ ತೊಡೆಯ ಮೇಲೆ ಇಟ್ಟುಕೊಂಡರೆ ಕಣ್ಣುಗಳಿಗೆ ಮತ್ತು ಲ್ಯಾಪ್ಟಾಪ್ ಸ್ಕ್ರೀನ್ ಗೆ ಅಂತರ ಕಡಿಮೆ ಇರುತ್ತದೆ.
ಇದು ಕ್ರಮೇಣವಾಗಿ ನಿಮ್ಮ ನಿದ್ರೆಗೆ ಅವಶ್ಯಕವಾಗಿ ಬೇಕಾದ ಮೇಲಟೋನಿನ್ ಹಾರ್ಮೋನ್ ಉತ್ಪತ್ತಿಯಲ್ಲಿ ತಡೆ ಹಾಕುತ್ತದೆ. ಹಾಗಾಗಿ ಇದು ನಿಮಗೆ ದಿನ ಕಳೆದಂತೆ ನಿದ್ರೆ ಬರದಂತೆ ಮಾಡುತ್ತದೆ.
ಇದಕ್ಕಾಗಿ ನೀವು ನಿಮ್ಮ ಲ್ಯಾಪ್ಟಾಪ್ ಸ್ಕ್ರೀನ್ ಬ್ರೈಟ್ನೆಸ್ ಅನ್ನು ಕಡಿಮೆ ಮಾಡಿಕೊಳ್ಳಿ ಮತ್ತು ಟೇಬಲ್ ಮೇಲೆ ಇಟ್ಟುಕೊಂಡು ಬಳಸಿ.
ಕೇವಲ ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರಿಗೂ ಕೂಡ ಲ್ಯಾಪ್ಟಾಪ್ ನಿಂದ ತೊಂದರೆ ಇದೆ. ಮಹಿಳೆ ಯರು ನಿರಂತರವಾಗಿ ತೊಡೆಯ ಮೇಲೆ ಲ್ಯಾಪ್ಟಾಪ್ ಇಟ್ಟುಕೊಂಡು ಕೆಲಸ ಮಾಡುವುದರಿಂದ ಅವರ ದೇಹದ ಫಲವತ್ತತೆ ಕುಸಿಯುತ್ತದೆ.
ಒಂದು ವೇಳೆ ಈಗಾಗಲೇ ಗರ್ಭಿಣಿಯಾಗಿದ್ದು, ತೊಡೆಯ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಲು ಹೋದರೆ ಅದು ಹುಟ್ಟುವ ಮಗುವಿಗೆ ಸಾಕಷ್ಟು ಆರೋಗ್ಯ ಸಮಸ್ಯೆ ಗಳನ್ನು ತಂದು ಕೊಡುತ್ತದೆ. ಏಕೆಂದರೆ ಲ್ಯಾಪ್ಟಾಪ್ ನಿಂದ ಹೊರಡುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿ ಯೇಷನ್ ಕಿರಣಗಳು ಅಷ್ಟರಮಟ್ಟಿಗೆ ಪ್ರಭಾವ ಹೊಂದಿರುತ್ತವೆ.
ಒಂದೇ ಬಾರಿಗೆ ಇದು ಆಗುತ್ತದೆ ಎಂದು ಹೇಳಲು ಕಷ್ಟ ಸಾಧ್ಯ. ಆದರೆ ತೊಡೆಯ ಮೇಲೆ ನಿರಂತರವಾದ ಲ್ಯಾಪ್ ಟಾಪ್ ಬಳಕೆಯಿಂದ ತೊಡೆಯ ಭಾಗದ ಚರ್ಮ ಕ್ರಮೇಣವಾಗಿ ಬಿಸಿಯ ಪ್ರಭಾವಕ್ಕೆ ಒಳಗಾಗಿ ಚರ್ಮದ ಮೇಲೆ ದದ್ದುಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಇಂತಹ ಜನರಿಗೆ ಮೊದಲು ಚರ್ಮದ ಬಣ್ಣ ಬದಲಾಗುತ್ತದೆ.
ಇದನ್ನು ನಿರ್ಲಕ್ಷ ಮಾಡಲು ಹೋದರೆ ಅದರಿಂದ ಮುಂಬರುವ ದಿನಗಳಲ್ಲಿ ಗಂಭೀರ ಸ್ವರೂಪದ ಚರ್ಮದ ಹಾನಿ ಸಮಸ್ಯೆ ಉಂಟಾಗುತ್ತದೆ.