ನಮಗೆ ಇದ್ದಕ್ಕಿದ್ದಂತೆ ಹಣ ಬೇಕಾದಾಗ, ನಾವು ಮೊದಲು ನಮ್ಮ ಉಳಿತಾಯವನ್ನು ನೋಡುತ್ತೇವೆ. ಆ ಠೇವಣಿಯಿಂದ ಹಣವನ್ನು ತೆಗೆದುಕೊಳ್ಳದೆ ಬೇರೆ ದಾರಿಯಿಲ್ಲ.
ಆದರೆ ನಿಮ್ಮ ಉಳಿತಾಯವನ್ನು ಮುಟ್ಟದೆಯೇ ನಿಮ್ಮ ಹಣದ ಅಗತ್ಯಗಳನ್ನು ಪೂರೈಸುವ ಮಾರ್ಗಗಳಿವೆ. ಅದು ವೈಯಕ್ತಿಕ ಸಾಲಗಳು. ಹೌದು, ಪರ್ಸನಲ್ ಕೆಲಸಗಳಿಗಾಗಿ ತೆಗೆದುಕೊಳ್ಳುವ ಸಾಲವನ್ನು ವೈಯಕ್ತಿಕ ಸಾಲ ಅಂತ ಕರೆಯಲಾಗುತ್ತೆ. ಗ್ರಾಹಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಶೇಕಡಾ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು.
ಹೌದು, ಎಮರ್ಜೆನ್ಸಿ ಟೈಮ್ನಲ್ಲಿ ದುಡ್ಡು ಬೇಕು ಅಂದ್ರೆ ಯಾರು ಕೊಡ್ತಾರೆ. 100, 200 ರೂಪಾಯಿ ಆದ್ರೆ ಸ್ನೇಹಿತರು, ಕುಟುಂಬಸ್ಥರ ಬಳಿ ಕೇಳಿ ಪಡೆಯಬಹುದು. ಲಕ್ಷ ಲಕ್ಷ ದುಡ್ಡು ಬೇಕು ಅಂದ್ರೆ ಸಾಲ ತೆಗೆದುಕೊಳ್ಳಬೇಕು.
ಪರ್ಸನಲ್ ಲೋನ್ ಅಪ್ಲೈ ಮಾಡಿ ನೀವು ಸಾಲ ಪಡೆಯಬಹುದು. ಆದರೆ ನಿಮಗೆ ಜಸ್ಟ್ 5 ಲಕ್ಷ ಲೋನ್ ಬೇಕು ಅಂದ್ರೆ ನಿಮ್ಮ ತಿಂಗಳ ಸಂಬಳ ಎಷ್ಟಿರಬೇಕು ಅಂತ ಗೊತ್ತಿದ್ಯಾ? ಲೋನ್ ಅಮೌಂಟ್ ಬಂದ್ರು ಎಷ್ಟು ಕಟ್ ಆಗುತ್ತೆ. ತಿಂಗಳಿಗೆ EMI ಎಷ್ಟು ಕಟ್ಬೇಕು? ಇದಕ್ಕೆಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಗ್ರಾಹಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಶೇಕಡಾ 11.35 ರ ಬಡ್ಡಿದರದಲ್ಲಿ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು. ಆದರೆ ಇದಕ್ಕಾಗಿ ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು. ಕ್ರೆಡಿಟ್ ಸ್ಕೋರ್ ಹೆಚ್ಚಾದಷ್ಟೂ ಬಡ್ಡಿ ದರ ಕಡಿಮೆಯಾಗುತ್ತದೆ.
ಒಂದು ವೇಳೆ ಕಡಿಮೆ ಕ್ರೆಡಿಟ್ ಸ್ಕೋರ್ ಇದ್ದರೆ ಲೋನ್ ಅಪ್ಲಿಕೇಷನ್ ರಿಜೆಕ್ಟ್ ಆಗಬಹುದು. ಇಲ್ಲ ಬಡ್ಡಿದರ ಹೆಚ್ಚಾಗಬಹುದು. ಹೀಗಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಗಮನ ಇಡಬೇಕು. ನಿಮ್ಮ ಕ್ರೆಡಿಟ್ ಸ್ಕೋರ್ 750 ಕ್ಕಿಮತ ಮೇಲಿದ್ದರೆ ಹೆಚ್ಚು ಲೋನ್ ಸಿಗುವ ಚಾನ್ಸ್ ಇರುತ್ತದೆ
ಇಂತಹ ಹೆಂಡತಿ ಇದ್ದರೆ ಬಿಟ್ಟು ಬಿಟ್ರೆ ಒಳ್ಳೆಯದು: ಗಂಡಸರಿಗೆ ಚಾಣಕ್ಯ ಸಲಹೆ!
ವೈಯಕ್ತಿಕ ಸಾಲಗಳಿಗೆ ವಿಶೇಷ ದಾಖಲಾತಿಗಳ ಅಗತ್ಯವಿಲ್ಲ ಎಂದು ತಿಳಿಯುವುದು ಮುಖ್ಯ. ಯಾವುದೇ ಗ್ಯಾರಂಟಿ ಅಗತ್ಯವಿಲ್ಲ. ಆದಾಗ್ಯೂ, ಬ್ಯಾಂಕ್ಗಳು ಆರ್ಟಿಆರ್, 6 ತಿಂಗಳ ವೇತನ ಚೀಟಿ, ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು, ಐಡಿ ಪುರಾವೆ ಮತ್ತು ನಿವಾಸ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ವೈಯಕ್ತಿಕ ಸಾಲಗಳನ್ನು ಕನಿಷ್ಠ 6 ತಿಂಗಳು ಮತ್ತು ಗರಿಷ್ಠ 72 ತಿಂಗಳೊಳಗೆ ಮರುಪಾವತಿ ಮಾಡಬೇಕು.
ಕಡಿಮೆ ಸಂಬಳ ಹೊಂದಿರುವವರು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಅನೇಕ ಜನರಿಗೆ ತಿಳಿದಿದೆ. ಒಬ್ಬರ ಮಾಸಿಕ ಸಂಬಳ 50,000 ರಿಂದ 6 ಲಕ್ಷ ರೂ.ವರೆಗೆ ಇದ್ದರೆ ವೈಯಕ್ತಿಕ ಸಾಲವನ್ನು ಅವರು ಸುಲಭವಾಗಿ ಪಡೆಯಬಹುದು. ಆದಾಗ್ಯೂ, ಇಎಂಐ ಮಾಸಿಕ ಆದಾಯದ ಶೇಕಡಾ 50 ರಷ್ಟು ಮೀರದಂತೆ ಎಚ್ಚರಿಕೆ ವಹಿಸಬೇಕು.
5 ವರ್ಷಕ್ಕೆ ನೀವು 5 ಲಕ್ಷ ಪರ್ಸನಲ್ ಲೋನ್ ತೆಗೆದಕೊಂಡ್ರೆ ತಿಂಗಳಿಗೆ ನೀವು ಜಸ್ಟ್ 10,959 ರೂಪಾಯಿ EMI ಕಟ್ಟಬೇಕು.1,57,521 ರೂಪಾಯಿ ಒಟ್ಟು 5 ವರ್ಷಕ್ಕೆ ಬಡ್ಡಿಯಾಗಿ ನೀವು ಕಟ್ಟಬೇಕು. ಬಡ್ಡಿ ಸೇರಿ 6,57,521 ರೂಪಾಯಿ ಕಟ್ಟಬೇಕು.,
ತಿಂಗಳಿಗೆ 35 ಸಾವಿರ ಸಂಬಳ ಬಂದ್ರೆ, ನಿಮಗೆ ಲೋನ್ ಸಿಗುವ ಸಾಧ್ಯತೆ ಹೆಚ್ಚಿರುತ್ತೆ. ಮತ್ತೊಂದು ಮುಖ್ಯವಾದ ವಿಚಾರ ಅಂದ್ರೆ ನೀವು ಯಾವುದೇ ಲೋನ್ಗಳನ್ನು ಹೊಂದಿರಬಾರದು. ಒಂದು ಲೋನ್ ಇಟ್ಟುಕೊಂಡು, ಮತ್ತೊಂದು ಲೋನ್ಗೆ ಅಪ್ಲೈ ಮಾಡಿದರೆ ಸಿಗುವ ಸಾಧ್ಯತೆ ಕಡಿಮೆಯಿರುತ್ತದೆ.