ಇತ್ತೀಚಿನ ದಿನಗಳಲ್ಲಿ ಕಾರುಗಳು ಸಾಕಷ್ಟು ದುಬಾರಿಯಾಗುತ್ತಿದ್ದರೂ, ಈ ಬಜೆಟ್ನಲ್ಲಿ ಮೂರು ಕಾರುಗಳು ನಿಮ್ಮ ಖರೀದಿಗೆ ಲಭ್ಯವಾಗಲಿದೆ. ಬಜೆಟ್ ಕಡಿಮೆಯಾದರೂ ನಿಮಗೆ ಈ ಕಾರುಗಳಲ್ಲಿ ಅಗತ್ಯಕ್ಕೆ ತಕ್ಕ ಫೀಚರ್ ಮತ್ತು ಉತ್ತಮ ಮೈಲೇಜ್ಗಳು ಲಭ್ಯವಾಗಲಿದೆ.
ಮಾರುತಿ ಸುಜುಕಿ ಆಲ್ಟೊ ಕೆ10: ಆಲ್ಟೊ ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ಗಳಲ್ಲಿ ಒಂದಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು ಮಾರಾಟವಾದ ಕಾರು ಕೂಡ ಆಗಿದೆ. ಕಳೆದ ವರ್ಷ ಆಲ್ಟೊ 800 ಸ್ಥಗಿತಗೊಂಡಿದ್ದರೂ ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಟಾಟಾ ಮೋಟಾರ್ಸ್ʼನಿಂದ ಬಂದಿದೆ ಹೊಸ ರೀತಿಯ ಎಲೆಕ್ಟ್ರಿಕ್ ಕಾರು: ಮೈಲೇಜ್ ಕೇಳಿದ್ರೆ ತಗೋಳೋದು ಪಕ್ಕಾ!
ಕ್ವಿಡ್ 1.0-ಲೀಟರ್ SCe ಪೆಟ್ರೋಲ್ ಎಂಜಿನ್ ಅನ್ನು ಬಳಸಿಕೊಳ್ಳುತ್ತದೆ, ಇದು 68PS ಗರಿಷ್ಠ ಶಕ್ತಿ ಮತ್ತು 91Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. 5 ಲಕ್ಷ ಬೆಲೆಗೆ (ಎಕ್ಸ್ ಶೋರೂಂ), ನೀವು ಕೇವಲ 5-ಸ್ಪೀಡ್ MT ಆಯ್ಕೆಯನ್ನು ಪಡೆಯಬಹುದಾಗಿದೆ.
ಹ್ಯುಂಡೈ ಎಕ್ಸ್ಟರ್: ಈ ಎಸ್ಯುವಿ, 1.2-ಲೀಟರ್, 4 ಸಿಲಿಂಡರ್ (ಪೆಟ್ರೋಲ್) ಎಂಜಿನ್ ಹೊಂದಿದ್ದು, 81.8 bhp ಗರಿಷ್ಠ ಪವರ್ ಹಾಗೂ 113.8 Nm ಪಿಕ್ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್ಜಿ ಮೋಡ್ ನಲ್ಲಿ 67.7 bhp ಪವರ್ ಮತ್ತು 95.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಆವೃತ್ತಿಯು ಮ್ಯಾನ್ಯುವಲ್ ಮತ್ತು AMT ಗೇರ್ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಆಲ್ಟೊ ಕೆ10 ರೂ 3.99 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ). ಇದು 1.0-ಲೀಟರ್ K10C ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಇದು 67PS ಗರಿಷ್ಠ ಶಕ್ತಿ ಮತ್ತು 89Nm ಗರಿಷ್ಠ ಟಾರ್ಕ್ ಅನ್ನು ನೀಡುತ್ತದೆ. ಇದರ ಬೆಲೆಯನ್ನು ನೋಡುವುದಾದರೆ (5-ಸ್ಪೀಡ್ MT) ರೂ. 5 ಲಕ್ಷದೊಳಗೆ (ಎಕ್ಸ್ ಶೋ ರೂಂ) ಲಭ್ಯವಿದೆ. ರೆನಾಲ್ಟ್ ಕ್ವಿಡ್: ಕ್ವಿಡ್ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. 0.8-ಲೀಟರ್ ಮತ್ತು 1.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಗ್ರಾಹಕರು ಯಾವುದನ್ನು ಬೇಕಾದರೂ ಖರೀದಿ ಮಾಡಬಹುದಾಗಿದೆ. ಕ್ವಿಡ್ ಆರಂಭಿಕ ಬೆಲೆ ರೂ 4.69 ಲಕ್ಷ (ಎಕ್ಸ್ ಶೋ ರೂಂ).
ಹ್ಯುಂಡೈ ಗ್ರ್ಯಾಂಡ್ i10: ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ (Hyundai Grand i10 Nios) ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಹೊಸ ಆವೃತ್ತಿಯು ನವೀನ ಅಮೆಜಾನ್ ಗ್ರೇ ಬಣ್ಣದೊಂದಿಗೆ ಲಭ್ಯವಿದ್ದು, ಟೈಲ್ಗೇಟ್ನಲ್ಲಿ ‘ಕಾರ್ಪೊರೇಟ್’ ಲೋಗೋವನ್ನು ಹೊಂದಿದೆ.
ಕೃಪೆ: ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್