ಮುಖಕ್ಕೆ ಲಕ್ಷಣ ನೀಡುವುದೇ ನಮ್ಮ ಕೇಶರಾಶಿ. ಅದು ತೆಳ್ಳಗಾದಷ್ಟು, ಉದುರಿದಷ್ಟು ವ್ಯಕ್ತಿಯ ಮುಖಚರ್ಯೆಯು ಬದಲಾಗಿಬಿಡುತ್ತದೆ. ಹೀಗಾಗಿಯೇ, ಜನ ಕೂದಲು ಸ್ವಲ್ಪ ಕೂದಲು ಉದುರಲು ಪ್ರಾರಂಭವಾದರೂ ಹೆಚ್ಚು ತಲೆಕೆಡಿಸಿಕೊಳ್ಳಲು ಪ್ರಾರಂಭಿಸಿಬಿಡುತ್ತಾರೆ. ಪರಿಹಾರಕ್ಕಾಗಿ ತಡಕಾಡುತ್ತಾರೆ. ಇಂಗ್ಲಿಷ್ ಮೆಡಿಸನ್, ಆಯುರ್ವೇದಿಕ್ ಔಷಧ, ಮನೆ ಮದ್ದು ಎಲ್ಲವನ್ನು ಪ್ರಯತ್ನಿಸುತ್ತಿರುತ್ತಾರೆ
Kukke Subramanya Temple: ಮದ್ಯಪಾನ ಸೇವಿಸಿ ಬಂದ ಯುವಕ: ಎತ್ತಿ ಎಸೆದ ದೇವಸ್ಥಾನದ ಆನೆ
ಮನೆಮದ್ದುಗಳಲ್ಲಿ ಪ್ರಮುಖವಾದುದು ನಾವು ಪ್ರತಿನಿತ್ಯ ಬಳಸುವ ಈರುಳ್ಳಿ. ಹೌದು, ಸಾಕಷ್ಟು ಮಂದಿ ಈರುಳ್ಳಿಯನ್ನು ಬಳಸಿ ತಮ್ಮ ಕೇಶವನ್ನು ಕಾಪಾಡಿಕೊಳ್ಳುತ್ತಿದ್ದು, ಇಂದು ನಮ್ಮ ಈ ಲೇಖನದಲ್ಲಿ ಇದರ ಪ್ರಯೋಜನಗಳನ್ನು ತಿಳಿಸಲಿದ್ದೇವೆ.
ಕೂದಲು ಉದುರುತ್ತಿದ್ದರೆ ಸಾಮಾನ್ಯವಾಗಿ “ನೆತ್ತಿ ಗುಣ ಚೆನ್ನಾಗಿಲ್ಲ” ಎನ್ನುದನ್ನು ಕೇಳಿದ್ದೇವೆ. ಈರುಳ್ಳಿಯಲ್ಲಿರುವ ಔಷಧೀಯ ಅಂಶವು ನೆತ್ತಿಯ ಸೋಂಕು ಮತ್ತು ತಲೆಹೊಟ್ಟು ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆರೋಗ್ಯಕರ ನೆತ್ತಿಯು ಬಲವಾದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಈರುಳ್ಳಿಯಲ್ಲಿ ಸಲ್ಫರ್ ಸಮೃದ್ಧವಾಗಿದ್ದು, ಇದು ಕೂದಲಿನ ಆರೋಗ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕೆರಾಟಿನ್ ಸೇರಿದಂತೆ ಪ್ರೋಟೀನ್ಗಳು ಹಾಗೂ ಅಮೈನೋ ಆಮ್ಲಗಳಲ್ಲಿ ಸಲ್ಫ್ಯೂರಿಸ್ ಕಂಡುಬರುತ್ತದೆ. ಹೆಚ್ಚಿನ ಸಲ್ಫರ್ ಅಂಶವು ಕೂದಲಿನ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ.
ಈರುಳ್ಳಿಯು ಆಂಟಿಆಕ್ಸಿಡೆಂಟ್ಗಳನ್ನು ಹೊಂದಿದ್ದು ಅದು ಕೂದಲಿನ ಕಿರುಚೀಲಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಈರುಳ್ಳಿ ರಸ ಅಥವಾ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿದರೆ ಇದು ತಲೆಬುರುಡೆಗೆ ಸರಿಯಾಗಿ ರಕ್ತ ಸಂಚಾರ ಆಗುವಂತೆ ಮಾಡುತ್ತದೆ.
ಈರುಳ್ಳಿಯಲ್ಲಿರುವ ಮೊಶ್ಚಿರೈಸ್ ಗುಣವು ಒಣ ತಲೆಬುರುಡೆ ಹಾಗೂ ಕೂದಲನ್ನು ಮೃದುವಾಗಿಸುತ್ತದೆ, ಪುನಃಶ್ಚೇತನ ನೀಡುತ್ತದೆ ಇದರಿಂದ ಕೂದಲು ಕಾಂತಿಯುತವಾಗುವುದು.
ಇದರಲ್ಲಿ ಇರುವ ವಿಟಮಿನ್ ಹಾಗೂ ಖನಿಜಾಂಶಗಳು ನೇರವಾಗಿ ಕೂದಲಿನ ಕಿರುಚೀಲಗಳನ್ನು ತಲುಪಿ ಬುಡಕ್ಕೆ ಪೋಷಣೆ ನೀಡುವುದರಿಂದ ಕೂದಲನ್ನು ಬಲಪಡಿಸುವುದು ಮಾತ್ರವಲ್ಲದೆ, ಕೂದಲಿನ ಬೆಳವಣಿಗೆಗೆ ಸಹಕಾರಿ ಆಗುತ್ತದೆ.
ಈರುಳ್ಳಿಯಲ್ಲಿ ನಂಜುನಿರೋಧಕ ಮತ್ತು ಉರಿಯೂತ ಶಮನಕಾರಿ ಗುಣಗಳಿದ್ದು, ಇದು ತಲೆಬುರುಡೆಯ ಸೋಂಕನ್ನು ದೂರ ಮಾಡುತ್ತದೆ. ಈರುಳ್ಳಿ ರಸವನ್ನು ತಲೆಗೆ ಹಚ್ಚಿಕೊಂಡರೆ, ಅದರಲ್ಲಿನ ವಿಟಮಿನ್ ಹಾಗೂ ಖನಿಜಾಂಶಗಳು ಕೂದಲನ್ನು ಬುಡದಲ್ಲೇ ಹೈಡ್ರೇಟ್ ಮಾಡಿ ಬಲಪಡಿಸುತ್ತದೆ. ಇದರಿಂದ ಕೂದಲು ತುಂಡಾಗುವ ತೊಂದರೆ ಕಡಿಮೆಯಾಗುತ್ತದೆ.
ಕೂದಲು ಬೆಳವಣಿಗೆಗೆ ಈರುಳ್ಳಿ ರಸವನ್ನು ಬಳಸುವುದು ಹೇಗೆ*?*
ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.
ಕತ್ತರಿಸಿದ ಈರುಳ್ಳಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
ನುಣ್ಣಗೆ ಪೇಸ್ಟ್ ಮಾಡಿದ ಈರುಳ್ಳಿ ರಸವನ್ನು ನೇರವಾಗಿ ನಿಮ್ಮ ನೆತ್ತಿ ಮತ್ತು ಕೂದಲಿನ ಬೇರುಗಳಿಗೆ ಹಚ್ಚಿರಿ
ಈರುಳ್ಳಿ ರಸವನ್ನುಕೂದಲಿಗೆ ಹಚ್ಚಿ ಕೆಲವು ನಿಮಿಷಗಳ ಕಾಲ ನಿಮ್ಮ ನೆತ್ತಿಯನ್ನು ಮಸಾಜ್ ಮಾಡಿ. ಮಸಾಜ್ ಮಾಡುವುದರಿಂದ ಕೂದಲಿನ ಬುಡದಲ್ಲಿನ ಬೇರುಗಳಿಗೆ ರಕ್ತ ಸಂಚಾರವಾಗುತ್ತದೆ. ಇದು ಕೂದಲಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಈರುಳ್ಳಿ ರಸವನ್ನು ನಿಮ್ಮ ಕೂದಲಿನ ಮೇಲೆ ಕನಿಷ್ಠ 30 ನಿಮಿಷದಿಂದ ಒಂದು ಗಂಟೆಯವರೆಗೆ ಬಿಡಿ.
ನಂತರ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ. ಈರುಳ್ಳಿಯು ಬಹಳ ಕಟುವಾದ ವಾಸನೆಯನ್ನು ಹೊಂದಿರುವುದರಿಂದ ಘಮವಿರುವ ಶಾಂಪೂವಿನಿಂದ ತಲೆಗೆ ಸ್ನಾನ ಮಾಡಿದರೆ, ವಾಸನೆ ಕಡಿಮೆಯಾಗುತ್ತದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)