ನಮ್ಮ ದೇಶದ ಪರಿಸ್ಥಿತಿ ಹೇಗಾಗಿದೆ ಗೊತ್ತಾ ಮರ್ರೆ. ಒಳ್ಳೆ ಶಿಕ್ಷಣ ಪಡೆದರೂ ಕೆಲಸ ಸಿಗುತ್ತಿಲ್ಲ. ಯಾವುದಾದರೂ ಸರ್ಕಾರಿ ಕೆಲಸಕ್ಕೆ ಅಪ್ಲೈ ಮಾಡೋಣ ಅಂದ್ರೆ ಲಂಚ ಕೇಳುತ್ತಾರೆ ಎಂದು ನಮ್ಮ ಯುವಕರೇ ಹಿಂದೇಟು ಹಾಕುತ್ತಾರೆ.
ನಟ ದರ್ಶನ್ ಗೆ ಜಾಮೀನು ಸಿಕ್ಕಿದ್ದು ಇದೇ ಕಾರಣ! ಪೊಲೀಸರ ಎಡವಟ್ಟು ಉಲ್ಲೇಖಿಸಿದ ಜಡ್ಜ್!
ಆದರೆ ನಾವು ಹಾಗೆ ಮಾಡ್ಬಾರ್ದು ಕೆಲಸ ಸಿಗೋ ತನಕ ನಮ್ಮ ಪ್ರಯತ್ನ ಬಿಡಬಾರದು. ಕೆಲಸ ಇಲ್ಲ, ಉದ್ಯೋಗ ಇಲ್ಲ ಎಂದು ಕೊಂಡವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳು ಭರ್ತಿಯಾಗದೆ ಉಳಿದಿವೆ ಎಂದು ತಿಳಿದುಬಂದಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.76 ಲಕ್ಷ ಹುದ್ದೆಗಳು ಖಾಲಿ ಇವೆ ಎಂಬ ವಿಚಾರದ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಿದೆ.
ಅದರಂತೆ ಶಾಲಾ ಶಿಕ್ಷಣ 70,727 ಹುದ್ದೆಗಳು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 37,069, ಗೃಹ ಇಲಾಖೆಯಲ್ಲಿ 26,168 ಉದ್ಯೋಗಗಳು, ಉನ್ನತ ಶಿಕ್ಷಣ ಇಲಾಖೆಯಲ್ಲಿ 13,227 ಹುದ್ದೆಗಳು, ಕಂದಾಯ ಇಲಾಖೆಯಲ್ಲಿ 11,145 ಹುದ್ದೆಗಳು, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 10,898 ಹುದ್ದೆಗಳು, ಪಶುಸಂಗೋಪನೆ ಇಲಾಖೆಯಲ್ಲಿ 10,755 ಹುದ್ದೆಗಳು ಸೇರಿದಂತೆ ಗುತ್ತಿಗೆ ಆಧಾರದ ಮೇಲೆ 96,000 ಜನರಿಗೆ ಕೆಲಸಗಳು ಖಾಲಿ ಇವೆ ಎನ್ನಲಾಗಿದೆ.
ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆ?
1.ಸಹಕಾರ ಇಲಾಖೆ-4885
2. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ-8334,
3. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ-6191
4. ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ-6
5. ಇ-ಆಡಳಿತ ಇಲಾಖೆ-71
6. ಇಂಧನ ಇಲಾಖೆ-247
7. ಆರ್ಥಿಕ ಇಲಾಖೆ-9536
8. ಮೀನುಗಾರಿಕೆ ಇಲಾಖೆ-859
9. ಆಹಾರ ಮತ್ತು ನಾಗರಿಕ ಸರಬರಾಜು-1395
10. ಅರಣ್ಯ ಇಲಾಖೆ-6337
11. ಕೈಮಗ್ಗ ಮತ್ತು ಜವಳಿ ಇಲಾಖೆ-50
12. ಒಳಾಡಳಿತ ಇಲಾಖೆ-26168
13. ತೋಟಗಾರಿಕೆ ಇಲಾಖೆ-2969
14. ವಾರ್ತಾ ಇಲಾಖೆ-328
15. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ-61
16. ಕನ್ನಡ ಮತ್ತು ಸಂಸ್ಕೃತಿ ಇಲಾಖೆ-432
17. ಕಾರ್ಮಿಕ ಇಲಾಖೆ-2613
18. ಕಾನೂನು, ನ್ಯಾಯ, ಮಾನವ ಹಕ್ಕುಗಳ ಇಲಾಖೆ-7853
19. ಭಾರಿ ಮತ್ತು ಮಧ್ಯಮ ಕೈಗಾರಿಕೆ-379
20. ಭಾರಿ ನೀರಾವರಿ-601
21. ಗಣಿ-653
22. ಸಣ್ಣ ನೀರಾವರಿ-1237
23. ಅಲ್ಪಸಂಖ್ಯಾತರ ಕಲ್ಯಾಣ-4159
24. ಸಂಸದೀಯ ವ್ಯವಹಾರಗಳು-508
25. ಕಂದಾಯ ಇಲಾಖೆ-11145
26. ಪರಿಶಿಷ್ಟ ಜಾತಿಗಳ ಕಲ್ಯಾಣ-9980
27. ಕೃಷಿ ಇಲಾಖೆ-6773 ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕೆಲಸ ಖಾಲಿ ಇವೆ.
ವಿಧಾನಸಭೆಯಲ್ಲಿ ಅಧಿವೇಶನದಲ್ಲಿ ಈ ಖಾಲಿ ಹುದ್ದೆಗಳ ಬಗ್ಗೆ ಚರ್ಚೆಯಾಗಿದೆ. ಅದರಂತೆ ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಮಾಹಿತಿಯನ್ನು ಹಂಚಿಕೊಂಡಿದೆ. ಅದರಂತೆ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದು, ಇದನ್ನು ಶೀಘ್ರವೇ ಭರ್ತಿ ಮಾಡುವಂತೆಯೂ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಹೀಗಾಗಿ ಇಷ್ಟು ಹುದ್ದೆಗಳು ಖಾಲಿ ಇದ್ದು, ಆದಷ್ಟು ಬೇಗ ಅರ್ಜಿ ಆಹ್ವಾನಿಸೋ ನಿರೀಕ್ಷೆ ಇದೆ. ಅಭ್ಯರ್ಥಿಗಳು ತಪ್ಪದೇ ಅರ್ಜಿ ಸಲ್ಲಿಸಿ. ಸರ್ಕಾರಿ ಕೆಲಸಗಿಟ್ಟಿಸಿಕೊಳ್ಳಿ.