ತಾಜಾ ನಿಂಬೆಗಳನ್ನು ಬಳಸುವುದರಿಂದ ಆಹಾರಕ್ಕೆ ಪರಿಮಳ ನೀಡುವುದರೊಂದಿಗೆ ಆಹಾರದ ರುಚಿಯನ್ನು ಸಹ ಹೆಚ್ಚಿಸುತ್ತದೆ. ನಿಂಬೆ ಕೊಂಚ ಒಣಗಿದರೂ ಅದರ ರುಚಿಯಲ್ಲಿ ವ್ಯತ್ಯಾಸವನ್ನು ಕಾಣಬಹುದು. ಇದರಲ್ಲಿ ಹೆಚ್ಚು ನಿಂಬೆ ರಸ ಕೂಡ ಇರುವುದಿಲ್ಲ. ಆದರೆ ನಿಂಬೆ ಹಣ್ಣನ್ನು ತಾಜಾವಾಗಿ ಶೇಖರಿಸಿಡುವುದು ಹೇಗೆ ಎಂಬುದು ನಿಮ್ಮ ದೊಡ್ಡ ಚಿಂತೆಯಾಗಿದ್ದರೆ, ನಾವಿಂದು ನಿಮಗೆ ಈ ಸಮಸ್ಯೆಗೆ ಪರಿಹಾರ ನೀಡುತ್ತೇವೆ. ಕೆಲವರು ನಿಂಬೆಯನ್ನು ಹಾಗೆಯೇ ಹೊರಗೆ ಇರಿಸಿದರೆ ಅದು ಒಣಗಿ ಹೋಗುತ್ತದೆ ಎಂದು ಅದನ್ನು ಫ್ರಿಜ್ನಲ್ಲಿ ಸಂಗ್ರಹಿಸುತ್ತಾರೆ. ಆದರೆ ಇದು ಎಷ್ಟು ಉತ್ತಮ ಇದರ ಸಾಧಕ ಬಾಧಕಗಳೇನು ಎಂಬದುನ್ನು ತಿಳಿದುಕೊಳ್ಳೋಣ.
ಫ್ರಿಜ್ನ ಫ್ರೀಜರ್ನಲ್ಲಿ ನಿಂಬೆ ಹಣ್ಣುಗಳನ್ನಿಡುವುದು ಅವು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಇನ್ನು ಕೋಣೆಯ ಉಷ್ಣಾಂಶದಲ್ಲಿ ನಿಂಬೆಯನ್ನಿರಿಸಿದರೆ ಹೆಚ್ಚು ಕಡಿಮೆ ಒಂದು ವಾರ ಅವು ತಾಜಾ ಆಗಿಯೇ ಇರುತ್ತದೆ. ಆದರೆ ಅವುಗಳನ್ನು ಫ್ರಿಜ್ನಲ್ಲಿರಿಸಿದರೆ ಒಂದು ತಿಂಗಳಲ್ಲೇ ಕೊಳೆತು ಹೋಗುತ್ತದೆ. ಇನ್ನು ಫ್ರಿಜರ್ನಲ್ಲಿರಿಸುವುದು ಮೂರರಿಂದ ನಾಲ್ಕು ತಿಂಗಳವರೆಗೆ ನಿಂಬೆಯನ್ನು ಬಾಡದಂತೆ ಕಾಪಾಡುತ್ತದೆ.
ಫ್ರೋಜನ್ ನಿಂಬೆ ಅಂದರೆ ಹಣ್ಣನ್ನು ಹೆಪ್ಪುಗಟ್ಟಿಸಿದ ನಂತರ ಅದರಿಂದ ರುಚಿಕರ ಜ್ಯೂಸ್ ಅನ್ನು ಸುಲಭವಾಗಿ ತಯಾರಿಸಬಹುದು. ಇದು ಹೆಚ್ಚು ಮೃದುವಾಗಿರುವುದರಿಂದ ಇದನ್ನು ತುರಿದುಕೊಳ್ಳುವುದು ಸುಲಭವಾಗಿದೆ. ನಿಂಬೆ ಹಣ್ಣನ್ನು ಹಿಂಡಿ ಅದರ ರಸವನ್ನು ಸುಲಭವಾಗಿ ತೆಗೆಯಬಹುದಾಗಿದೆ. ಇದು ಒಮ್ಮೊಮ್ಮೆ ತಾಜಾ ಲಿಂಬೆಗಿಂತಲೂ ಹೆಚ್ಚು ರಸವನ್ನು ಸುಲಭವಾಗಿ ನೀಡುತ್ತದೆ. ಆದರೆ ಹೆಪ್ಪುಗಟ್ಟಿಸಿದ ಇಲ್ಲವೇ ಫ್ರೀಜರ್ನಲ್ಲಿರಿಸಿದ ನಿಂಬೆ ಯಾವಾಗಲೂ ರುಚಿಕರ ಹಾಗೂ ಹೆಚ್ಚು ರಸವನ್ನು ನೀಡುತ್ತದೆ ಎಂದು ಹೇಳಲಾಗುವುದಿಲ್ಲ.,
ನಿಮ್ಮ ದೇಹದ ತೂಕ, ಕೊಬ್ಬು ಕಡಿಮೆ ಆಗ್ಬೇಕಾ!? ನಿತ್ಯ ಈ ಪಾನೀಯಗಳನ್ನು ಸೇವಿಸಿ!
ಹೆಪ್ಪುಗಟ್ಟಿಸಿದ ನಿಂಬೆಯನ್ನು ತುರಿದು ಬಳಸುವುದು ತುಂಬಾ ಸುಲಭವಾದ ವಿಧಾನವಾಗಿದೆ. ಇದನ್ನು ತುರಿಯುವುದು ಬೀಜದಿಂದ ಒಳಗಿನ ಪದರದವರೆಗಿನ ರಸವನ್ನೊದಗಿಸುತ್ತದೆ. ಇನ್ನು ಸಿಪ್ಪೆಯು ಕಹಿ ರುಚಿಯನ್ನು ನೀಡುತ್ತದೆ ಎಂಬ ಚಿಂತೆಯೂ ಬೇಡ. ಏಕೆಂದರೆ ಹೆಪ್ಪುಗಟ್ಟಿಸಿದ ನಿಂಬೆಯ ಸಿಪ್ಪೆ ಕಹಿಯಾಗಿರುವುದಿಲ್ಲ ಹಾಗೂ ಇದರ ಪರಿಮಳ ಕೂಡ ತಾಜಾ ಆಗಿರುತ್ತದೆ.
ನೀವು ನಿಂಬೆ ರಸವನ್ನು ಐಸ್ ಟ್ರೇಗೆ ಕೂಡ ಹಾಕಿ ಇಡಬಹುದು ಹಾಗೂ ಇದನ್ನು ಫ್ರೀಜರ್ನಲ್ಲಿ ಶೇಖರಿಸಿಡಬಹುದು ನಂತರ ಇದನ್ನು ಸೂಪ್, ಸಲಾಡ್, ಜ್ಯೂಸ್, ಸಾಸ್ಗಳಲ್ಲಿ ಕೂಡ ಬಳಸಬಹುದು. ಹೆಪ್ಪುಗಟ್ಟಿದ ಲಿಂಬೆಯನ್ನು ತುರಿದು ಬಳಸುವುದು ಭಕ್ಷ್ಯಗಳಿಗೆ ಉತ್ತಮ ರುಚಿಯನ್ನು ನೀಡುತ್ತದೆ. ಇನ್ನು ಲಿಂಬೆಯ ಪರಿಮಳ ಕೂಡ ತಾಜಾ ಆಗಿರುತ್ತದೆ. ಸಿಪ್ಪೆಯು ನಿಂಬೆ ರಸಕ್ಕಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ, ಆದ್ದರಿಂದ ಅವೆಲ್ಲವನ್ನೂ ಒಟ್ಟಿಗೆ ತುರಿಯುವ ಮೂಲಕ, ನೀವು ಸೇರಿಸುವ ಪ್ರತಿಯೊಂದು ಭಕ್ಷ್ಯದಲ್ಲಿ ಈ ಉತ್ಪನ್ನದ ಸಂಪೂರ್ಣ ಪೌಷ್ಟಿಕಾಂಶದ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ವಿಟಮಿನ್, ಫೈಬರ್, ಎಸನ್ಶಿಯಲ್ ಆಯಿಲ್, ಪ್ರೊಟೀನ್ಗಳನ್ನು ಒಳಗೊಂಡಿರುತ್ತದೆ.
ತಾಜಾ ನಿಂಬೆಗಿಂತ ಫ್ರೋಜನ್ ಮಾಡಿದ ಲಿಂಬೆಯು ವಿಭಿನ್ನ ರುಚಿಯನ್ನು ಹೊಂದಿರುತ್ತದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಇನ್ನು ಹೆಪ್ಪುಗಟ್ಟಿಸಿದ ನಿಂಬೆ ಒಮ್ಮೊಮ್ಮೆ ಹೆಚ್ಚಿನ ರಸವನ್ನು ನೀಡುವುದಿಲ್ಲ. ಇನ್ನು ನಿಂಬೆಯನ್ನು ವಿವಿಧ ಭಾಗಗಳಾಗಿ ಶೇಖರಿಸಿಟ್ಟು ಪ್ರತ್ಯೇಕವಾಗಿ ಫ್ರಿಜ್ ಮಾಡಿ. ನಿಂಬೆ ರಸವನ್ನು ಐಸ್ ಕ್ಯೂಬ್ನಲ್ಲಿಟ್ಟು ಅದನ್ನು ಶೇಖರಿಸಿಡಬಹುದು. ಆದರೆ ಸರಿಯಾದ ತಾಪಮಾನದಲ್ಲಿ ನಿಂಬೆಹಣ್ಣನ್ನಿರಿಸಿ ಹಾಗೂ ಅವುಗಳು ಕೊಳೆತು ಹೋಗುವ ಮುನ್ನ ಬಳಸುವುದು ಉತ್ತಮವಾಗಿದೆ ಎಂದು ಹೇಳಲಾಗಿದೆ.