ಸ್ಮಾರ್ಟ್ಫೋನ್ ಬಳಕೆದಾರರಿಗೆ ಅದೊಂದು ಆಸೆ ಇದ್ದೇ ಇರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಆಪಲ್ ಕಂಪನಿಯ ಐಫೋನ್ ಖರೀದಿಸಿ ಬಳಸಬೇಕು ಎಂಬುದು. ಈಗ ಇದೇ ಜಗತ್ತಿನ ದಿಗ್ಗಜ ಕಂಪನಿ ಆಗಿರುವ ಆಪಲ್ ತನ್ನ ಐಫೋನ್ ಬಳಕೆದಾರರಿಗೆ ಒಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.
ಆಪಲ್ನ ಎಲ್ಲ ಐಫೋನ್ಗೆ ಮರ್ಸೆನರಿ ಎಂಬ ಸ್ಪೈವೇರ್ ದಾಳಿ ಸಾಧ್ಯತೆಗಳಿವೆ ಎಂದು ಸ್ವತಃ ಕಂಪನಿ ಎಚ್ಚರಿಕೆಯ ಸಂದೇಶ ರವಾನೆ ಮಾಡಿದೆ. ಜಗತ್ತಿನ 92 ದೇಶಗಳ ಐಫೋನ್ ಬಳಕೆದಾರರಿಗೆ ಮೊನ್ನೆಯಷ್ಟೇ ಈ ಸಂದೇಶವನ್ನು ಕಂಪನಿ ರವಾನೆ ಮಾಡಿದ್ದು, ಐಫೋನ್ ಬಳಸುವವರೆಲ್ಲ ಎಚ್ಚರಿಕೆವಹಿಸಬೇಕು, ಈ ಸ್ಪೈವೇರ್ ದಾಳಿ ದೊಡ್ಡ ಮಟ್ಟದ ಸಮಸ್ಯೆ ಉಂಟುಮಾಡಲಿದೆ ಎಂದಿದೆ. ಮುಂದುವರೆದು ಮರ್ಸೆನರಿ ಸ್ಪೈವೇರ್ ದಾಳಿಗೆ ಒಳಗಾದವರಿಗೆ ಅವರು ಯಾರು, ಏನು ಸಮಸ್ಯೆ ಮಾಡುತ್ತಾರೆ ಎಂಬ ಕುರಿತು ಮಾಹಿತಿಯನ್ನು ಕಂಪನಿ ನೀಡಿದ್ದು, ಎಚ್ಚರಿಕೆ ವಹಿಸಲು ಸೂಚನೆಗಳನ್ನು ನೀಡಿದೆ.
Tata Motors: ಟಾಟಾ ಕಂಪನಿಯಿಂದ ಗುಡ್ ನ್ಯೂಸ್: 5 ಲಕ್ಷಕ್ಕೆ ಹೊಸ ಕಾರು ಬಿಡುಗಡೆ!
ಮರ್ಸೆನರಿ ಸ್ಪೈವೇರ್ ದಾಳಿಕೋರರು ಕಡಿಮೆ ಸಂಖ್ಯೆಯ ನಿರ್ದಿಷ್ಟ ವ್ಯಕ್ತಿಗಳು ಮತ್ತು ಅವರ ಸಾಧನಗಳನ್ನು ಗುರಿಯಾಗಿಟ್ಟುಕೊಂಡು ಅಸಾಧಾರಣ ಸಂಪನ್ಮೂಲಗಳನ್ನು ಅನ್ವಯಿಸುವ ಮೂಲಕ ಸಾಮಾನ್ಯ ಸೈಬರ್ ಕ್ರಿಮಿನಲ್ ಚಟುವಟಿಕೆ ಮತ್ತು ಗ್ರಾಹಕ ಮಾಲ್ವೇರ್ಗಿಂತ ಇಂತಹ ದಾಳಿಗಳು ಹೆಚ್ಚು ಸಮಸ್ಯೆಯನ್ನು ಒಡ್ಡುವ ಮಾಲ್ವೇರ್ಗಳಾಗಿವೆ. ಈ ದಾಳಿಗಳಿಗೆ ಮಿಲಿಯನ್ಗಟ್ಟಲೆ ಡಾಲರ್ಗಳ ವೆಚ್ಚ ಮಾಡುವುದರಿಂದ ಮತ್ತು ಸಾಮಾನ್ಯವಾಗಿ ಕಡಿಮೆ ಅವಧಿ ಹೊಂದಿರುವುದರಿಂದ ಇವುಗಳನ್ನು ಪತ್ತೆ ಹಚ್ಚುವುದು ಮತ್ತು ತಡೆಯುವುದು ಕೂಡ ಹೆಚ್ಚು ಕಷ್ಟವಾಗಿದೆ ಎನ್ನಲಾಗಿದೆ. ಅಲ್ಲದೇ ಬಹುಸಂಖ್ಯಾತ ಬಳಕೆದಾರರು ಈ ಮರ್ಸೆನರಿಗೆ ಒಳಗಾಗುವ ಅವಕಾಶ ಇಲ್ಲ ಎಂದು ಸಹ ಆಪಲ್ ಕಂಪನಿ ತಿಳಿಸಿದೆ.
ಐಫೋನ್ ಬಳಕೆದಾರರು ಮರ್ಸೆನರಿ ಸ್ಪೈವೇರ್ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಭದ್ರತೆ ಹೇಗೆ?
ಆಪಲ್ ಕಂಪನಿ ನೀಡಿರುವ ಎಚ್ಚರಿಕೆ ಸಂದೇಶ ಪಡೆಯುವ ಐಫೋನ್ ಬಳಕೆದಾರರು ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿರಿ..
– ಡಿವೈಸ್ನಲ್ಲಿ ಮೊದಲಿಗೆ ಲಾಕ್ಡೌನ್ ಮೋಡ್ ಎನೇಬಲ್ ಮಾಡಬೇಕು.
– ಸೆಟ್ಟಿಂಗ್ಸ್ಗೆ ಹೋಗಿ ಪ್ರೈವೆಸಿ ಅಂಡ್ ಸೆಕ್ಯೂರಿಟಿ ಅಡಿಯಲ್ಲಿ ಈ ಲಾಕ್ಡೌನ್ ಮೋಡ್ ಆನ್ ಮಾಡಬೇಕು.
– ದಾಳಿಗೆ ಒಳಗಾದ ಬಳಕೆದಾರರಿಗೆ ಇದರಿಂದ ಹೆಚ್ಚಿನ ಡಿಜಿಟಲ್ ಭದ್ರತೆ ಲಭಿಸುತ್ತದೆ.
– ಬಳಕೆದಾರರು ಇತ್ತೀಚಿನ ಓಎಸ್ ಗೆ ಅಪ್ಡೇಟ್ ಮಾಡಬೇಕು.
– ಐಫೋನ್ನಲ್ಲಿ ಇನ್ಸ್ಟಾಲ್ ಮಾಡಿಕೊಂಡ ಎಲ್ಲ ಅಪ್ಲಿಕೇಶನ್ಗಳನ್ನು ಅಪ್ಡೇಟ್ ಮಾಡಿಕೊಳ್ಳಬೇಕು.
– ಮ್ಯಾಕ್ / ಐಪ್ಯಾಡ್ ಬಳಕೆದಾರರು ಸಹ ಈ ಕ್ರಮಗಳನ್ನು ಕೈಗೊಳ್ಳಬೇಕು.
– ಅಗತ್ಯವಿದ್ದಲ್ಲಿ ಬಳಕೆದಾರರು ಡಿಜಿಟಲ್ ಸೆಕ್ಯೂರಿಟಿ ಹೆಲ್ಪ್ ಲೈನ್ನಲ್ಲಿ ಪರಿಣತರ ಸಹಾಯವನ್ನೂ ಪಡೆಯಬಹುದು.