ಸಮಾನ್ಯವಾಗಿ ಕೆಲವರಿಗೆ ಹಗಲಿನಲ್ಲಿಯೂ ನಿದ್ರೆ ಬರುತ್ತದೆ. ಅವರಿಗೆ ಇದರಿಂದ ಯಾವುದೇ ಕೆಲಸ ಮಾಡಲು ಉತ್ಸಾಹ ಇರುವುದಿಲ್ಲ. ಹಾಗಾಗಿ ಈ ನಿದ್ರೆಯ ಮಂಪರನ್ನು ನಿವಾರಿಸಲು ಈ ಆಹಾರವನ್ನು ಸೇವಿಸಬೇಡಿ.
ಹೆಚ್ಚಿನ ಸಕ್ಕರೆ ಆಹಾರವನ್ನು ಸೇವಿಸಬೇಡಿ. ಇದರಿಂದ ಶಕ್ತಿ ತ್ವರಿತವಾಗಿ ಸಿಗುತ್ತದೆ ಆದರೆ ತಕ್ಷಣ ಕಣ್ಮರೆಯಾಗುತ್ತದೆ. ಇದರಿಂದ ನಿಮಗೆ ನಿದ್ರೆಯ ಮಂಪರು ಹೆಚ್ಚಾಗುತ್ತದೆ.
ಸಂಸ್ಕರಿಸಿದ ಬ್ರೆಡ್ ಮತ್ತು ಧಾನ್ಯಗಳನ್ನು ಸೇವಿಸಬೇಡಿ. ಇದರಲ್ಲಿ ನಾರಿನಾಂಶ ಕಡಿಮೆ ಇರುತ್ತದೆ. ಇದು ದೇಹಕ್ಕೆ ಶಕ್ತಿಯನ್ನು ಕೊಡುವುದಿಲ್ಲ. ಇದರಿಂದ ನಿಮಗೆ ಆಯಾಸವಾಗಿ ನಿದ್ರೆಗೆ ಜಾರುತ್ತೀರಿ.
ಅಧಿಕ ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸಬೇಡಿ. ಇದನ್ನು ಜೀರ್ಣಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. ಇದರಿಂದ ದೇಹ ದಣಿಯುತ್ತದೆ. ಇದರಿಂದ ನಿಮಗೆ ನಿದ್ರೆ ಬರುತ್ತದೆ.
ಹಾಗೇ ಎನರ್ಜಿ ಡ್ರಿಂಕ್ ಗಳನ್ನು ಕುಡಿಯಬೇಡಿ. ಇವು ತ್ವರಿತ ಶಕ್ತಿಯನ್ನು ಒದಗಿಸಿ ನಂತರ ನೀವು ಆಯಾಸಗೊಳ್ಳುವಂತೆ ಮಾಡುತ್ತದೆ. ಇದರಿಂದ ನಿಮಗೆ ನಿದ್ರೆ ಬರುತ್ತದೆ.