ಉತ್ತಮ ಮತ್ತು ವೇಟ್ ಲಾಸ್ ಬೆಂಬಲಿಸುವ ಆಹಾರ ಸೇವನೆಯು ತೂಕ ಇಳಿಸಲು ಸಹಾಯ ಮಾಡುತ್ತದೆ. ನೀವು ತಿನ್ನುವ ಪದಾರ್ಥಗಳು ಕಡಿಮೆ ಕ್ಯಾಲೋರಿ ಹೊಂದಿರುವಂತೆ ಮತ್ತು ದೇಹಕ್ಕೆ ಜಲಸಂಚಯನ ಒದಗಿಸುವಂತೆ ಇರಲಿ. ಇದು ದೇಹದ ಕೆಟ್ಟ ಕೊಬ್ಬು ಸಂಗ್ರಹ ತೊಡೆದು ಹಾಕುತ್ತದೆ.
Bangalore Rain: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆಯಿಂದ ಧಾರಾಕಾರ ಮಳೆ: ವಾಹನ ಸವಾರರ ಪರದಾಟ, ಟ್ರಾಫಿಕ್ ಜಾಂ!
ಸ್ಥೂಲಕಾಯ ಸಮಸ್ಯೆ ತೊಡೆದು ಹಾಕಲು ನೀವು ಮೆಂತ್ಯ ಬೀಜಗಳನ್ನ ಆಹಾರ ಕ್ರಮದಲ್ಲಿ ಸೇರಿಸಿ. ಮೆಂತ್ಯ ಬೀಜಗಳಿಂದ ತಯಾರಿಸಿದ ಪಾನೀಯವು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಮೆಂತ್ಯ ಕಾಳುಗಳು ಆಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿದೆ. ಇದು ದೇಹಕ್ಕೆ ಬಲ ನೀಡುತ್ತದೆ.
ತೂಕ ಹೆಚ್ಚಾಗುವ ಸಮಸ್ಯೆ ನಿವಾರಿಸಲು ಮೆಂತ್ಯ ಬೀಜಗಳ ಪಾನೀಯ ಕುಡಿಯಿರಿ. ಮೆಂತ್ಯ ಬೀಜಗಳ ಪಾನೀಯದ ಪಾಕವಿಧಾನದ ಬಗ್ಗೆ ಇಲ್ಲಿ ತಿಳಿಯೋಣ. ಮೆಂತ್ಯ ಮತ್ತು ಸೋಂಪು ಕಾಳಿನ ಪೌಡರ್ ಪಾನೀಯ. ಇದನ್ನು ತಯಾರಿಸಲು ಮೆಂತ್ಯ ಬೀಜದ ಪುಡಿ, ಸೋಂಪು ಕಾಳು ಪುಡಿ, ಒಣ ಶುಂಠಿ, ದಾಲ್ಚಿನ್ನಿ, ಕಪ್ಪು ಉಪ್ಪು ಬೇಕು..
ಮೊದಲು ಒಂದು ಬಟ್ಟಲಿನಲ್ಲಿ ಮೆಂತ್ಯ ಬೀಜ ಪುಡಿ, ಸೋಂಪು ಕಾಳು ಪುಡಿ, ಒಣ ಶುಂಠಿ, ದಾಲ್ಚಿನ್ನಿ ಮತ್ತು ಕಪ್ಪು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಒಂದು ಲೋಟ ಉಗುರು ಬೆಚ್ಚಗಿನ ನೀರು ಹಾಕಿ, ಮಿಕ್ಸ್ ಮಾಡಿ, ನಿಂಬೆ ರಸ ಹಾಕಿ ಕುಡಿಯಿರಿ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟಕ್ಕೆ ಮೊದಲು, ಮಲಗುವ ಮೊದಲು ಕುಡಿಯಬಹುದು.
ನೆನೆಸಿದ ಮೆಂತ್ಯ ಬೀಜ ಮತ್ತು ಕರಿಮೆಣಸು ಪಾನೀಯ. ನೆನೆಸಿದ ಮೆಂತ್ಯ ಬೀಜ, ಕಪ್ಪು ಜೀರಿಗೆ, ಅಜ್ವೈನ್, ಕರಿಮೆಣಸು, ಕಪ್ಪು ಉಪ್ಪು ಬೇಕು. ಮೊದಲು ರಾತ್ರಿಯಿಡಿ ಮೆಂತ್ಯ ನೆನೆಸಿ. ಬೆಳಗ್ಗೆ ನೀರು ಫಿಲ್ಟರ್ ಮಾಡಿ. ಈಗ ನೆನೆಸಿದ ಮೆಂತ್ಯ ಕಾಳು, ಅಜ್ವೈನ್, ಕರಿಮೆಣಸು ಮತ್ತು ಕಪ್ಪು ಉಪ್ಪು ಮಿಕ್ಸ್ ಮಾಡಿ ನೀರು ಕುಡಿಯಿರಿ.
ಆರೋಗ್ಯಕ್ಕೂ ಉತ್ತಮ ಮೆಂತ್ಯ
ಇದು ದೇಹದಲ್ಲಿರುವ ಎಲ್ಲಾ ವಿಷಕಾರಿ ವಸ್ತುಗಳನ್ನು ನಿರ್ವಿಷಗೊಳಿಸುತ್ತದೆ. ತೂಕ ಹೆಚ್ಚಾಗುವ ಸಮಸ್ಯೆ ತಡೆಯುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಮೆಂತ್ಯ ಮತ್ತು ಅರಿಶಿನ ಪಾನೀಯ ಸೇವಿಸಿ. ಮೆಂತ್ಯ ಬೀಜ, ಅರಿಶಿನ, ಕರಿಮೆಣಸು, ಏಲಕ್ಕಿ ಬೇಕು. ಎಲ್ಲಾ ಪದಾರ್ಥಗಳನ್ನ ನೀರಿಗೆ ಹಾಕಿ ಕುದಿಸಿ.
ಸ್ವಲ್ಪ ಸಮಯ ನೀರಿನಲ್ಲಿ ಪದಾರ್ಥಗಳು ಕುದ್ದ ಮೇಲೆ ಗ್ಯಾಸ್ ಆಫ್ ಮಾಡಿ. ಈಗ ನೀರಿನ ಬಣ್ಣ ಸಂಪೂರ್ಣವಾಗಿ ಬದಲಾಗುತ್ತದೆ. ನೀರು ತಣ್ಣಗಾಗಲು ಬಿಡಿ. ನಂತರ ಅದನ್ನು ಕುಡಿಯಿರಿ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಕಾಪಾಡುತ್ತದೆ.