ನೀವು ತುಂಬಾ ನಿದ್ರೆ ಮಾಡ್ತೀರಾ? ಹಾಗಾದ್ರೆ ಈ ಅಭ್ಯಾಸವನ್ನು ಈಗ್ಲೇ ಬಿಟ್ಟುಬಿಡುವುದು ಉತ್ತಮ. ಏಕೆಂದರೆ ಹೆಚ್ಚು ಹೊತ್ತು ಮಲಗುವುದರಿಂದ ಅನೇಕ ರೀತಿಯ ರೊಗಗಳು ಉಂಟಾಗುತ್ತದೆ.
ಬಿಬಿಎಂಪಿ ಕಸದ ಲಾರಿ ಡೆಡ್ಲಿ ಆಕ್ಸಿಡೆಂಟ್ ಗೆ ಮತ್ತೆರಡು ಬಲಿ: ಹಿಂಬದಿ ಚಕ್ರಕ್ಕೆ ಸಿಲುಕಿ ಪ್ರಾಣ ಬಿಟ್ಟ ಸಹೋದರಿಯರು!
ಹೆಚ್ಚು ಅಥವಾ ಕಡಿಮೆ ನಿದ್ರೆ ಸಾಮಾನ್ಯವಾಗಿ ದೈಹಿಕ ಅನಾರೋಗ್ಯದ ಲಕ್ಷಣವಾಗಿದೆ. ಅಷ್ಟಕ್ಕೂ ಇವುಗಳಿಂದ ನೀವು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬಹುದು ಎಂದು ನೋಡೋಣ ಬನ್ನಿ.
ಇತ್ತೀಚಿನ ದಿನಗಳಲ್ಲಿ ಕೆಲ ಯುವಕರು ತಡವಾಗಿ ನಿದ್ರೆ ಮಾಡುವ ಮೂಲಕ ಕಡಿಮೆ ನಿದ್ರೆ ಮಾಡಿದರೆ, ಇನ್ನೂ ಕೆಲ ಮಂದಿ ಹೆಚ್ಚು ನಿದ್ರೆ ಮಾಡುತ್ತಿದ್ದಾರೆ. ಹೀಗೆ ಒಂದಷ್ಟು ಜನ ಹಗಲು ರಾತ್ರಿ ಸಮಯವನ್ನು ಲೆಕ್ಕಿಸದೇ ಹೆಚ್ಚು ನಿದ್ರೆ ಮಾಡುತ್ತಿದ್ದಾರೆ. ವಾಸ್ತವವಾಗಿ ಅತಿಯಾಗಿ ನಿದ್ರೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ತಜ್ಞರ ಪ್ರಕಾರ, ದಿನಕ್ಕೆ 10 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವವರಲ್ಲಿ 5 ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾದ್ರೆ ಅವು ಯಾವುವು ಎಂದು ತಿಳಿಯೋಣ ಬನ್ನಿ.
ಬೊಜ್ಜು: ಸಾಮಾನ್ಯವಾಗಿ ಅತಿಯಾಗಿ ತಿನ್ನುವುದರಿಂದ ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ. ಜಂಕ್ ಫುಡ್, ಫಾಸ್ಟ್ ಫುಡ್ ತಿನ್ನುವುದು, ವ್ಯಾಯಾಮದ ಕೊರತೆಯು ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ಹೆಚ್ಚುತ್ತದೆ. ಇದರಿಂದ ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ. ಇದರ ಜೊತೆಗೆ ಹೆಚ್ಚು ನಿದ್ರೆ ಮಾಡುವುದು ಕೂಡ ಸ್ಥೂಲಕಾಯತೆಗೆ ಕಾರಣವಾಗಿದೆ.
ನೀವು ಹೆಚ್ಚು ನಿದ್ರೆ ಮಾಡುವವರಾಗಿದ್ದರೆ, ನಿಮ್ಮ ದೇಹವು ಸಕ್ರಿಯವಾಗಿರುವುದಿಲ್ಲ. ರಾತ್ರಿ ಮಲಗಿದ ತಕ್ಷಣ ನಿದ್ರೆ ಬರುವುದಿಲ್ಲ. ಇದರಿಂದ ಉತ್ತಮ ಗುಣಮಟ್ಟದ ನಿದ್ರೆ ಪಡೆಯಲು ಕಷ್ಟವಾಗುತ್ತದೆ. ಇದರ ಪರಿಣಾಮದಿಂದಾಗಿ ತೂಕ ಹೆಚ್ಚಾಗುತ್ತದೆ.
ಹಾರ್ಮೋನ್ ಅಸಮತೋಲನ: ದೀರ್ಘಕಾಲದ ನಿದ್ರೆ ಹಾರ್ಮೋನ್ ಉತ್ಪಾದನೆಯನ್ನು ಅಸಮತೋಲನಗೊಳಿಸುತ್ತದೆ. ಇದರಿಂದ ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನದ ಪ್ರಮಾಣ ಹೆಚ್ಚಾಗುತ್ತದೆ. ಅತಿಯಾಗಿ ನಿದ್ರೆ ಮಾಡುವುದು ಒತ್ತಡದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಇದು ವೀರ್ಯ ಮತ್ತು ಮೊಟ್ಟೆಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮದಿಂದಾಗಿ, ವೀರ್ಯ ಕೋಶಗಳು ಮತ್ತು ಅಂಡಾಶಯಗಳ ಗುಣಮಟ್ಟವು ಹಾನಿಗೊಳಗಾಗುತ್ತದೆ. ಜೊತೆಗೆ ಫಲವತ್ತತೆಯ ವೈಫಲ್ಯದ ಪ್ರಮಾಣವು ಹೆಚ್ಚಾಗುತ್ತದೆ.
ಜೀರ್ಣಕ್ರಿಯೆ ಸಮಸ್ಯೆ: ನಿದ್ರೆಯ ಸಮಯದಲ್ಲಿ ಡಿಯೋನೈಸೇಶನ್ ಪ್ರಕ್ರಿಯೆಯು ಸ್ವಲ್ಪ ನಿಧಾನವಾಗುತ್ತದೆ. ಆದರೆ, ಹೆಚ್ಚು ಹೊತ್ತು ನಿದ್ರೆ ಮಾಡುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಇವುಗಳನ್ನು ಸಮತೋಲನಗೊಳಿಸಲು ಉತ್ತಮ ಆಹಾರವನ್ನು ಸೇವಿಸಬೇಕು.
ಕೆಲವೊಮ್ಮೆ ಮಿತಿಮೀರಿದ ಪ್ರಮಾಣದಷ್ಟು ಕಳಪೆ ಆಹಾರ ಸೇವಿಸಿದರೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸ್ಪೈಕ್ ಮತ್ತು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು. ಮುಂದೊಂದು ದಿನ ಇದು ಮಧುಮೇಹಕ್ಕೆ ಕಾರಣವಾಗುತ್ತದೆ. ಅದರಲ್ಲೂ ಇಂದಿನ ಪೀಳಿಗೆಯ ಯುವಕ-ಯುವತಿಯರಲ್ಲಿ ಟೈಪ್ 2 ಮಧುಮೇಹದ ಅಪಾಯ ಹೆಚ್ಚುತ್ತಿದೆ.
ಹೃದ್ರೋಗ: ಹೆಚ್ಚು ನಿದ್ರೆ ಮಾಡುವುದರಿಂದ ಹೃದ್ರೋಗದ ಅಪಾಯ ಹೆಚ್ಚು. ಅತಿಯಾಗಿ ನಿದ್ರೆ ಮಾಡುವುದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗಿ ದೇಹದಲ್ಲಿ ಕ್ಯಾಲೋರಿ ಸಂಗ್ರಹವಾಗುತ್ತದೆ. ನಂತರ, ಇವು ಕೊಲೆಸ್ಟ್ರಾಲ್ ಆಗಿ ಬದಲಾಗುತ್ತವೆ ಮತ್ತು ರಕ್ತನಾಳಗಳನ್ನು ಮುಚ್ಚಲ್ಪಡುತ್ತದೆ. ಇದರಿಂದ ಹೃದಯಕ್ಕೆ ರಕ್ತ ಪೂರೈಕೆ ಸರಾಗವಾಗದೇ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯ ಹೆಚ್ಚು. ಅತಿಯಾದ ನಿದ್ರೆಯು 36 ಪ್ರತಿಶತದಷ್ಟು ಹೃದಯಾಘಾತದ ಅಪಾಯಕ್ಕೆ ಕಾರಣವಾಗಿದೆ ಎಂದು ಅಧ್ಯಯನಗಳು ತಿಳಿಸುತ್ತವೆ.