ಬಿಗ್ ಬಾಸ್ (Bigg Boss) ಕಂಟೆಸ್ಟೆಂಟ್ ಅಭಿಮಾನಿಗಳು ಕಿತ್ತಾಡಿಕೊಂಡ ಪ್ರಕರಣ ಹೈದರಾಬಾದ್ ನಲ್ಲಿ ನಡೆದಿದೆ. ಫಿನಾಲೆ ವೇಳೆ ಸ್ಟುಡಿಯೋದಲ್ಲಿ ಗಲಾಟೆ ನಡೆದಿದ್ದು, ಕಾರು ಮತ್ತು ಬಸ್ ಗಳು ಜಖಂ ಆಗಿವೆ. ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 7ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿತ್ತು. ಈ ವೇಳೆ ಕಂಟೆಸ್ಟೆಂಟ್ ಆಗಿದ್ದ ಅಮರ್ ದೀಪ್ (Amar Deep) ಮತ್ತು ಪಲ್ಲವಿ ಪ್ರಶಾಂತ್ (Pallavi Prashant) ಅವರ ಅಭಿಮಾನಿಗಳು ಆಗಮಿಸಿದ್ದರು.
ಗ್ರ್ಯಾಂಡ್ ಫಿನಾಲೆಯಲ್ಲಿ ತಮ್ಮ ನೆಚ್ಚಿನ ಕಂಟೆಸ್ಟೆಂಟ್ ವಿನ್ನರ್ ಆಗುತ್ತಾರೆ ಎನ್ನುವುದು ಅವರವರ ಅಭಿಮಾನಿಗಳ ನಿರೀಕ್ಷೆ ಆಗಿತ್ತು. ಆದರೆ, ಆಗಿದ್ದು ಉಲ್ಟಾ ಎನ್ನುವ ಕಾರಣಕ್ಕಾಗಿ ಗಲಾಟೆ ಶುರುವಾಗಿದೆ. ಪಲ್ಲವಿ ಪ್ರಶಾಂತ್ ವಿನ್ ಆಗಿ, ಅಮರ್ ದೀಪ್ ರನ್ನರ್ ಅಪ್ ಆಗಿ ಘೋಷಣೆ ಆಗುತ್ತಿದ್ದಂತೆಯೇ ಗಲಾಟೆ ಶುರುವಾಗಿದೆ. ಇಬ್ಬರ ಫ್ಯಾನ್ಸ್ ಮಾತು ವಿಕೋಪಕ್ಕೆ ಹೋದ ಕಾರಣದಿಂದಾಗಿ ಆರ್.ಟಿ.ಸಿ ಬಸ್ ಮತ್ತು ಕಾರಿನ ಗಾಜು ಪುಡಿ ಪುಡಿ ಆಗಿದೆ.
ಪಲ್ಲವಿ ಪ್ರಶಾಂತ್ ಅಭಿಮಾನಿಗಳು ರನ್ನರ್ ಅಪ್ ಆಗಿದ್ದ ಅಮರ್ ಅವರ ಕಾರಿನ ಮೇಲೂ ದಾಳಿ ಮಾಡಿದ್ದಾರೆ. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಅನಾಹುತ ಆಗಿರುವುದನ್ನು ತಡೆದಿದ್ದಾರೆ. ಜೊತೆ ಇನ್ನೋರ್ವ ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಶ್ರೀ ಅವರು ಕಾರಿನ ಗಾಜು ಪುಡಿ ಪುಡಿ ಆಗಿದೆ. ಈ ಕುರಿತಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.