ಮುಂದಿನ IPL ಸೀಸನ್ 2025ರ ಹರಾಜು ಪ್ರಕ್ರಿಯೆ ಮುಕ್ತಾಯ ಆಗಿದ್ದು, ಎಲ್ಲಾ ತಂಡಗಳು ತನ್ನ ತಂಡವನ್ನು ರೆಡಿ ಮಾಡಿಕೊಂಡಿದೆ.
2025ರ ಮಾರ್ಚ್ 14 ರಿಂದ ಪ್ರಾರಂಭವಾಗಲಿರೋ ಈ ಟೂರ್ನಿಯ ಫೈನಲ್ ಪಂದ್ಯವೂ ಮೇ 25ರಂದು ನಡೆಯಲಿದೆ.
ಕಳೆದ ಸೀಸನ್ನಲ್ಲಿ ಎಲ್ಲಾ 10 ತಂಡಗಳು ಒಟ್ಟು 74 ಪಂದ್ಯಗಳು ಆಡಿದ್ದವು. ಈ ಬಾರಿ ಕೂಡ ನಾಕೌಟ್ ಹಂತದಲ್ಲಿ ಒಂದು ತಂಡಕ್ಕೆ 14 ಪಂದ್ಯಗಳಂತೆ ಎಲ್ಲಾ ಟೀಮ್ಗಳಿಗೂ ಒಟ್ಟು 74 ಪಂದ್ಯಗಳು ನಡೆಯಲಿವೆ. ಹರಾಜಿಗೆ ಮುಗಿದ ಬೆನ್ನಲ್ಲೇ ಐದು ತಂಡಗಳು ಈಗಾಗಲೇ ನಾಯಕರ ಹೆಸರು ಫೈನಲ್ ಮಾಡಿವೆ. ಕೆಕೆಆರ್, ಆರ್ಸಿಬಿ ಸೇರಿದಂತೆ ಇನ್ನುಳಿದ ತಂಡಗಳು ಹೊಸ ಕ್ಯಾಪ್ಟನ್ ಹುಡುಕಾಟದಲ್ಲಿವೆ.
ರಾಜ್ಯದಲ್ಲಿ ಫೆಂಗಲ್ ಅಬ್ಬರ – ನಾಳೆ ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಣೆ
ಕಳೆದ ಸೀಸನ್ನಲ್ಲಿ ಎಲ್ಲಾ 10 ತಂಡಗಳು ಒಟ್ಟು 74 ಪಂದ್ಯಗಳು ಆಡಿದ್ದವು. ಈ ಬಾರಿ ಕೂಡ ನಾಕೌಟ್ ಹಂತದಲ್ಲಿ ಒಂದು ತಂಡಕ್ಕೆ 14 ಪಂದ್ಯಗಳಂತೆ ಎಲ್ಲಾ ಟೀಮ್ಗಳಿಗೂ ಒಟ್ಟು 74 ಪಂದ್ಯಗಳು ನಡೆಯಲಿವೆ. ಹರಾಜಿಗೆ ಮುಗಿದ ಬೆನ್ನಲ್ಲೇ ಐದು ತಂಡಗಳು ಈಗಾಗಲೇ ನಾಯಕರ ಹೆಸರು ಫೈನಲ್ ಮಾಡಿವೆ. ಕೆಕೆಆರ್, ಆರ್ಸಿಬಿ ಸೇರಿದಂತೆ ಇನ್ನುಳಿದ ತಂಡಗಳು ಹೊಸ ಕ್ಯಾಪ್ಟನ್ ಹುಡುಕಾಟದಲ್ಲಿವೆ
ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ 2022ರಲ್ಲಿ ರನ್ನರ್ ಅಪ್ ಆಗಿತ್ತು. ಕಳೆದ ಐಪಿಎಲ್ನಲ್ಲೂ ಮೂರನೇ ಸ್ಥಾನದಲ್ಲೇ ಇತ್ತು. ಪ್ರಸ್ತುತ ಟಿ20 ಕ್ರಿಕೆಟ್ನಲ್ಲಿ ಸ್ಯಾಮ್ಸನ್ ಅದ್ಭುತ ಫಾರ್ಮ್ನಲ್ಲಿದ್ದು, ಇವರೇ ಆರ್ಆರ್ ತಂಡದ ಕ್ಯಾಪ್ಟನ್.
2021 ರಿಂದ 2023 ರವರೆಗಿನ ಮೂರು ಸೀಸನ್ಗಳಲ್ಲೂ ಸನ್ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ಗೆ ಹೋಗುವಲ್ಲಿ ವಿಫಲವಾಗಿತ್ತು. ಕಳೆದ ಬಾರಿ ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಸನ್ರೈಸರ್ಸ್ ಹೈದರಾಬಾದ್ ಫೈನಲ್ ತಲುಪಿತ್ತು. ಆದರೆ ಕೆಕೆಆರ್ ವಿರುದ್ಧ ಫೈನಲ್ ಪಂದ್ಯದಲ್ಲಿ ಸೋತಿತ್ತು. 2025ರ ಐಪಿಎಲ್ನಲ್ಲೂ ಹೈದರಾಬಾದ್ ತಂಡವನ್ನು ಪ್ಯಾಟ್ ಕಮಿನ್ಸ್ ಮುನ್ನಡೆಸಲಿದ್ದಾರೆ.
ಕೆಕೆಆರ್ ರಹಾನೆ, ಆರ್ಸಿಬಿ ಕೊಹ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಕೆ.ಎಲ್ ರಾಹುಲ್, ಲಕ್ನೋ ಸೂಪರ್ ಜೈಂಟ್ಸ್ ಪಂತ್ ಮತ್ತು ಪಂಜಾಬ್ ಕಿಂಗ್ಸ್ ಶ್ರೇಯಸ್ ಅಯ್ಯರ್ಗೆ ಮಣೆ ಹಾಕುವ ಸಾಧ್ಯತೆ ಇದೆ