ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತ ಆರ್ಸಿಬಿ ಟೂರ್ನಿಯಿಂದಲೇ ಹೊರಬಿದ್ದಿದೆ. ಒಂದು ರೀತಿ ಆರ್ಸಿಬಿ ಸೋಲಿಗೆ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಕಾರಣ. ರಾಜಸ್ಥಾನ್ ವಿರುದ್ಧ ಪಂದ್ಯದಲ್ಲಿ ಫಾಫ್ ಕೇವಲ 14 ರನ್ಗೆ ಔಟಾದ್ರು.
Karnataka Weather: ಇಂದಿನಿಂದ ರಾಜ್ಯದ ಕೆಲವೆಡೆ ಮಾತ್ರ ಮಳೆ… ಎಲ್ಲೆಲ್ಲಿ ಗೊತ್ತಾ!?
ಈ ಸೀಸನ್ನಲ್ಲಿ ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಿಲ್ಲ. ತಾನು ಆಡಿದ 15 ಪಂದ್ಯಗಳಲ್ಲಿ ಫಾಫ್ ಕೇವಲ 438 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಆವರೇಜ್ 29 ಇದ್ದು, ಸ್ಟ್ರೈಕ್ ರೇಟ್ 160 ಇದೆ. ಕೇವಲ 47 ಫೋರ್, 21 ಸಿಕ್ಸರ್ ಸಿಡಿಸಿದ್ದಾರೆ. 4 ಪಂದ್ಯಗಳಲ್ಲಿ ಮಾತ್ರ ಅರ್ಧಶತಕ ಸಿಡಿಸಿದ್ದು, ಒಂದು ಪಂದ್ಯವೂ ಗೆಲ್ಲಿಸಿಲ್ಲ. ಕೇವಲ ಬ್ಯಾಟಿಂಗ್ ಮಾತ್ರವಲ್ಲ ಆನ್ಫೀಲ್ಡ್ ಡಿಸಿಷನ್ ತೆಗೆದುಕೊಳ್ಳುವುದರಲ್ಲೂ ಎಡವಿದ್ದು, ಇವರಿಗೆ ಆರ್ಸಿಬಿ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ ಎಂದು ಒತ್ತಡ ಹಾಕಲಾಗುತ್ತಿದೆ. ಫಾಫ್ ಡುಪ್ಲೆಸಿಸ್ಗೆ 39 ವರ್ಷ ಆಗಿದ್ದು, ಮುಂದಿನ ವರ್ಷ ರಿಟೈರ್ ಆಗೋ ಸಾಧ್ಯತೆ ಕೂಡ ಇದೆ.
ಮುಂದಿನ ಸೀಸನ್ ವೇಳೆಗೆ ಫಾಫ್ ಡುಪ್ಲೆಸಿಸ್ಗೆ 40 ವರ್ಷ ಆಗಲಿದೆ. ಹಾಗಾಗಿ ಎಲ್ಲಾ ಮಾದರಿ ಕ್ರಿಕೆಟ್ಗೂ ಫಾಫ್ ನಿವೃತ್ತಿ ಘೋಷಿಸೋ ಸಾಧ್ಯತೆ ಇದೆ. ಹಾಗಾಗಿ ಆರ್ಸಿಬಿ ತಂಡಕ್ಕೆ ಹೊಸ ಕ್ಯಾಪ್ಟನ್ ಬೇಕಿದೆ. ಅದು ಲಾಂಗ್ ಟರ್ಮ್ ದೃಷ್ಟಿಯಿಂದ ರಜತ್ ಪಾಟಿದಾರ್ಗೆ ಕ್ಯಾಪ್ಟನ್ಸಿ ಪಟ್ಟ ನೀಡಲಾಗುವುದು ಎಂದು ವರದಿಯಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)