ಮೈಸೂರು: ಸನ್ಯಾಸಿಯಾಗಿ ಒಂದು ಜಾತಿ ಪರವಾಗಿ ಕೆಲಸ ಮಾಡುವುದು ಸರಿಯಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆಎಸ್ ಶಿವರಾಮು ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು,
ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಅವರು ಸನ್ಯಾಸಿಯಾಗಿ ಒಂದು ಜಾತಿ ಪರವಾಗಿ ಕೆಲಸ ಮಾಡುವುದು ಸರಿಯಲ್ಲ. ಸ್ವಾಮೀಜಿಯಾಗಲು ನಾಲಾಯಕ್. ಕಾವಿ ಬಟ್ಟೆ ಬಿಚ್ವಿಟ್ಟು ಬರುವುದು ಉತ್ತಮ ಎಂದು ಕೆಎಸ್ ಶಿವರಾಮು ಹೇಳಿದ್ದಾರೆ.
Weight Loss: ತೂಕ ಇಳಿಕೆಗಾಗಿ ಉಪವಾಸ ಮಾಡ್ತಿರಾ..? ಹಾಗಾದ್ರೆ ಈ ಸಲಹೆಗಳ ಬಗ್ಗೆ ಗಮನಹರಿಸಿ!
ಕಾವಿ ಬಟ್ಟೆಗೆ ನಾವು ಗೌರವ ಕೊಡುತ್ತಾ ಇದ್ದೇವೆ. ಅದನ್ನು ಉಳಿಸಿಕೊಳ್ಳಿ. ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ಇದೆ. ಸ್ವಾಮೀಜಿಯಾಗಿ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುತ್ತಾ ಇದ್ದೀರಿ. ಇದೇನಾ ನಿಮ್ಮ ರೀತಿ ನೀತಿ? ಹಿಂದುಳಿದ ವರ್ಗಗಳು ವೀರಶೈವರು, ಲಿಂಗಾಯತರು ಒಂದಾಗಿ ಇದ್ದೇವೆ. ನಮ್ಮಗಳ ಮಧ್ಯೆ ಜಗಳ ತಂದು ಹಾಕುತ್ತಾ ಇದ್ದೀರಿ ಎಂದು ಶಿವರಾಮು ಕಿಡಿಕಾರಿದ್ದಾರೆ.