ಕ್ರಿಕೆಟಿಗೂ ಬಾಲಿವುಡ್ಗೂ ಬಹಳ ಹಳೆಯ ಸಂಬಂಧ. ಕ್ರಿಕೆಟ್ ತಾರೆಯರ ಜೊತೆ ಬಾಲಿವುಡ್ ನಟಿಯರು ಡೇಟಿಂಗ್ ನಡೆಸುವುದು ಹೊಸದೇನಲ್ಲ. ಆದ್ರೆ ಮದುವೆ ಕೂಡ ಆಗುವುದು ಹೊಸದೆನಲ್ಲಾ ಇಲ್ಲಿದೆ ನೋಡಿ ಬಾಲಿವುಡ್ ನಟಿಯರನ್ನು ಮದುವೆಯಾದ ಭಾರತೀಯ ಕ್ರಿಕೆಟಿಗರ ಲೀಸ್ಟ್.!
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ
ಅತ್ಯಂತ ಪ್ರಸಿದ್ಧ ಕ್ರಿಕೆಟ್-ಬಾಲಿವುಡ್ ಜೋಡಿ, ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ. 2017ರಲ್ಲಿ ಇಟಲಿಯಲ್ಲಿ ಖಾಸಗಿ ಸಮಾರಂಭದಲ್ಲಿ ಇವರಿಬ್ಬರೂ ವಿವಾಹವಾದರು. ವಿರಾಟ್ ಮತ್ತು ಅನುಷ್ಕಾ ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸನ್ನು ಕಂಡಿದ್ದಾರೆ. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ವಿರುಷ್ಕಾ ಎಂದು ಕರೆಯುತ್ತಾರೆ.
ಕ್ರಿಕೆಟಿಗ ರಾಹುಲ್, ಬಾಲಿವುಡ್ ನಟಿ ಅಥಿಯಾ ಶೆಟ್ಟಿ
ಕ್ರಿಕೆಟಿಗ ರಾಹುಲ್, ಬಾಲಿವುಡ್ ನಟಿ ಅಥಿಯಾ ಶೆಟ್ಟಿಯನ್ನು ವಿವಾಹವಾಗಿದ್ದಾರೆ. ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್ನಲ್ಲಿ ಕೆ. ಎಲ್. ರಾಹುಲ್ ಹಾಗೂ ಅಥಿಯಾ ಶೆಟ್ಟಿ ವಿವಾಹ ಮಹೋತ್ಸವ ಜನವರಿ 23 ರಂದು ಅದ್ಧೂರಿಯಾಗಿ ನೆರವೇರಿತು.
ಯುವರಾಜ್ ಸಿಂಗ್ ಮತ್ತು ಹೇಜಲ್ ಕೀಚ್
ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಬಹುಕಾಲದ ಗೆಳತಿ ಹೇಜಲ್ ಕೀಚ್ ಅವರನ್ನು ನವೆಂಬರ್ 30 ರಂದು ಬುಧವಾರ ಪಂಜಾಬ್ನ ಫತೇಘರ್ ಸಾಹಿಬ್ ಜಿಲ್ಲೆಯ ದಫೆರಾ ಗ್ರಾಮದ ಡೇರಾ ಬಾಬಾ ರಾಮ್ ಸಿಂಗ್ನಲ್ಲಿ ವಿವಾಹವಾದರು. ಮದುವೆ ಸಮಾರಂಭದಲ್ಲಿ ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಹೇಜಲ್ ಕೀಚ್, ನಟಿ ಮತ್ತು ರೂಪದರ್ಶಿಯಾಗಿದ್ದರು. ಇವರಿಬ್ಬರ ಪ್ರೀತಿ ಮತ್ತು ಮದುವೆ ಸಂಸ್ಕೃತಿಗಳ ಗಡಿಗಳನ್ನೂ ಮೀರಿದ್ದಾಗಿದೆ.
ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ
ಭಾರತದ ‘ಟರ್ಬನೇಟರ್’ ನಟಿ ಗೀತಾರನ್ನು ವಿವಾಹವಾದರು. ಸ್ಪಿನ್ ಬೌಲಿಂಗ್ಗೆ ಹೆಸರುವಾಸಿಯಾದ ಹರ್ಭಜನ್ ಸಿಂಗ್ ಬಾಲಿವುಡ್ ನಟಿ ಗೀತಾ ಅವರೊಂದಿಗೆ ಹಲವಾರು ವರ್ಷಗಳ ಡೇಟಿಂಗ್ ನಂತರ 2015ರಲ್ಲಿ ವಿವಾಹವಾದರು. ಐದು ದಿನಗಳ ಕಾಲ ಈ ವಿವಾಹ ಸಮಾರಂಭ ನಡೆಯಿತು.
ಜಹೀರ್ ಖಾನ್ ಮತ್ತು ಸಾಗರಿಕಾ ಘಾಟ್ಗೆ
ಭಾರತದ ಮಾಜಿ ವೇಗಿ ಜಹೀರ್ ಖಾನ್ ನಟಿ ಸಾಗರಿಕಾ ಘಾಟ್ಗೆ ಅವರನ್ನು ಪ್ರೀತಿಸಿದ್ರು. ಬಳಿಕ ಈ ಜೋಡಿ 2017, ನವೆಂಬರ್ 23 ರಂದು ವಿವಾಹವಾದರು. ಅವರ ವಿವಾಹದಲ್ಲಿ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ನವೆಂಬರ್ 27 ರಂದು ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಮತ್ತು ಟವರ್ನಲ್ಲಿ ಬಾಲಿವುಡ್ ಸೆಲೆಬ್ಸ್ ಮತ್ತು ಜಹೀರ್ ಟೀಮ್ ಇಂಡಿಯಾ ಸಹೋದ್ಯೋಗಿಗಳಿಗೆ ಭವ್ಯವಾದ ಆರತಕ್ಷತೆ ನಡೆಯಿತು.