ಅಡುಗೆ ಮಾಡುವುದು ಕೂಡ ಒಂದು ಕಲೆ. ಅಡುಗೆ ಮಾಡುವಾಗ ಒಂದು ಚೂರು ಉಪ್ಪು-ಖಾರ ಹೆಚ್ಚು ಕಡಿಮೆಯಾದರೆ, ಆಹಾರದ ರುಚಿಯೇ ಹಾಳಾಗುತ್ತದೆ. ಅದರಲ್ಲೂ ಮಟನ್-ಚಿಕನ್ ಮಾಂಸದ ಅಡುಗೆಗಳನ್ನು ಮಾಡುವಾಗ ಎಷ್ಟೋ ಬಾರಿ ಉಪ್ಪು ಹೆಚ್ಚು-ಕಡಿಮೆ ಆಗಿ ಬಿಡುತ್ತದೆ. ಅದರಲ್ಲೂ ಮಾಂಸದ ಅಡುಗೆ ಮಾಡುವಾಗ ಉಪ್ಪನ್ನು ಎಷ್ಟು ಹಾಕಬೇಕು? ಯಾವ ಸಮಯದಲ್ಲಿ ಹಾಕಬೇಕು ಎಂದು ನಿಮಗೆ ತಿಳಿದಿದ್ಯಾ? ಹಾಗಾದ್ರೆ ಈ ಸ್ಟೋರಿ ಓದಿ.
Breaking News: ಅ.3ಕ್ಕೆ ಕ್ಯಾಮರಾ ಕಣ್ಗಾವಲಿನಲ್ಲಿ ಪಿಎಸ್ಸೈ ಪರೀಕ್ಷೆ!
ಅನೇಕ ಮಂದಿಗೆ ಮಾಂಸದ ಅಡುಗೆ ಮಾಡುವಾಗ ಉಪ್ಪನ್ನು ಯಾವಾಗ ಹಾಕಬೇಕು ಎಂದು ತಿಳಿದಿರುವುದಿಲ್ಲ. ಕೆಲವರು ಮಾಂಸವನ್ನು ಮ್ಯಾರಿನೇಟಿಂಗ್ ಮಾಡುವ ಸಮಯದಲ್ಲಿ ಹಾಕಬೇಕು ಎಂದು ಹೇಳಿದರೆ, ಕೆಲವರು ಮಾಂಸ ಹುರಿದ ನಂತರ ಹಾಕಬೇಕು ಎನ್ನುತ್ತಾರೆ. ಇನ್ನೂ ಕೆಲವರು ಎಲ್ಲವನ್ನೂ ಮಾಡಿ ಮುಗಿಸಿ ಕೊನೆಯಲ್ಲಿ ಉಪ್ಪು ಸೇರಿಸಿ ಎಂದು ಹೇಳುತ್ತಾರೆ.
ಆದರೆ ಉಪ್ಪು ಹಾಕಿದಾಗ ಅಡುಗೆಯ ರುಚಿ ಬಾಯಿಗೆ ಅಂಟಿಕೊಳ್ಳುತ್ತದೆ ಏಕೆ ಎಂದು ನಿಮಗೆ ತಿಳಿದಿದ್ಯಾ? ಹೆಚ್ಚು ಅಡುಗೆ ಮಾಡುವವರಿಗೆ ಕೂಡ ಈ ಪ್ರಶ್ನೆಗೆ ಸರಿಯಾಗಿ ಉತ್ತರಿಸಲು ಸಾಧ್ಯವಿಲ್ಲ. ಅದರಲ್ಲೂ ಖಾಸಿ ಮಾಂಸವನ್ನು ಬೇಯಿಸುವಾಗ ಒಂದಿಷ್ಟು ವಿಧಾನಗಳನ್ನು ಅನುಸರಿಸಿದರೆ, ಅಡುಗೆಯ ರುಚಿ ಅದ್ಭುತವಾಗಿರುತ್ತದೆ.
ಉಪ್ಪು ಯಾವುದೇ ಖಾದ್ಯಕ್ಕೆ ಆದರೂ ರುಚಿಯನ್ನು ನೀಡುತ್ತದೆ. ಆದರೆ ಮಾಂಸವನ್ನು ಬೇಯಿಸುವಾಗ ಆಗೊಮ್ಮೆ- ಈಗೊಮ್ಮೆ ಉಪ್ಪು ಹಾಕುವುದರಿಂದ ಆಹಾರದ ರುಚಿ ಕೆಡುತ್ತದೆ.
ಎಲ್ಲಾ ಪ್ರಸಿದ್ಧ ಬಾಣಸಿಗರು ಮಾಂಸವನ್ನು ಸುಮಾರು 60 ಪ್ರತಿಶತದಷ್ಟು ಬೇಯಿಸಿದಾಗ ಉಪ್ಪು ಹಾಕಬೇಕು ಎಂದು ಹೇಳುತ್ತಾರೆ. ಇಲ್ಲದಿದ್ದರೆ, ಉಪ್ಪು ಮಾಂಸದೊಂದಿಗೆ ಬೇರೆಯುವುದಿಲ್ಲ ಎನ್ನುತ್ತಾರೆ.
ಪ್ರೆಶರ್ ಕುಕ್ಕರ್ನಲ್ಲಿ ಅಡುಗೆ ಮಾಡುತ್ತಿದ್ದರೆ, ಮಾಂಸವನ್ನು ಉಪ್ಪಿನೊಂದಿಗೆ ಮಸಾಲೆ ಹಾಕಿ ಹುರಿದು, ನಂತರ ಅದನ್ನು ಸೀಟಿಗೆ ಮುಚ್ಚಿ. ಅಡುಗೆ ಮಾಡುವಾಗ ಯಾವುದೇ ಮಾಂಸವನ್ನು ಉಪ್ಪುಸಹಿತ ಬಿಸಿನೀರಿನೊಂದಿಗೆ ಲಘುವಾಗಿ ಚಿಮುಕಿಸಬೇಕು. ಸಾರುಗೆ ಬಿಸಿ ನೀರನ್ನು ಸಹ ಬಳಸಬೇಕು