ಒಡಿಶಾ:- ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಕೃಷಿ ಜಮೀನಿನಿಂದ ಹೂಕೋಸು ಕಿತ್ತು ಬಂದಿದ್ದಕ್ಕೆ ಮಹಿಳೆಯೊಬ್ಬರನ್ನು ಆಕೆಯ ಮಗನೇ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ಜರುಗಿದೆ.
ಮಹಿಳೆಯು ತನ್ನ ಕಿರಿಯ ಮಗನ ಜಮೀನಿನಲ್ಲಿ ಹೂಕೋಸು ಕಿತ್ತು ತಂದು ಪದಾರ್ಥ ಮಾಡಿ ತಿಂದಿದ್ದರು.ಇದನ್ನರಿತ ಕಿರಿಯ ಮಗ ತನ್ನ ತಾಯಿಯ ಜೊತೆ ಜಗಳಕ್ಕೆ ಇಳಿದಿದ್ದಾನೆ. ಆ ಬಳಿಕ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾನೆ. ಹಿಂದುಳಿಯದೆ ಮಹಿಳೆಯನ್ನು ರಕ್ಷಿಸಿ ಬಾಸುದೇವಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಘಟನೆಯ ಬಗ್ಗೆ ಮಹಿಳೆಯನ್ನು ಕೇಳಿದ್ದು, ಆಕೆಯ ಮಗನ ವಿರುದ್ಧ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.