ಬೇಸಿಗೆಯಲ್ಲಿ ಬಾಯಾರಿಕೆಯಾಗುವುದು ಜಾಸ್ತಿ, ಹಾಗಾಗಿ ಪ್ರತಿಯೊಬ್ಬರೂ ಏನಾದರೂ ತಂಪಾಗಿರುವಂತಹ ಪಾನೀಯ ಕುಡಿಯುವುದು, ದೇಹದವನ್ನು ತಂಪಾಗಿಸುವಂತಹ ಆಹಾರ ಸೇವಿಸಲು ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ಸೌತೆಕಾಯಿ ಸಿಕ್ಕಾಪಟ್ಟೆ ಸಿಗುತ್ತದೆ. ದೇಹವನ್ನು ಹೈಡ್ರೀಕರಿಸಿಡಲು ಸೌತೆಕಾಯಿಯು ಬೆಸ್ಟ್ ಆಯ್ಕೆಯಾಗಿದೆ. ಇದರಿಂದ ಹೊಟ್ಟೆಯೂ ತುಂಬುತ್ತದೆ ಜೊತೆಗೆ ದೇಹಕ್ಕೆ ನೀರಿನಂಶವೂ ಸಿಗುತ್ತದೆ.
ಬೇಸಿಗೆಯಲ್ಲಿ ಸೌತೆಕಾಯಿ ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಇದು ಹೈಡ್ರೇಟಿಂಗ್ ಮತ್ತು ರಿಫ್ರೆಶ್ ಮಾತ್ರವಲ್ಲ, ಪೋಷಕಾಂಶಗಳಿಂದ ಕೂಡಿದೆ. ತೂಕ ಇಳಿಸುವುದರಿಂದ ಹಿಡಿದು ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮತ್ತು ಚರ್ಮವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವವರೆಗೆ ಸೌತೆಕಾಯಿಯ ಪ್ರಯೋಜನಗಳು ಲೆಕ್ಕವಿಲ್ಲದಷ್ಟು. ಆದರೆ ಸೌತೆಕಾಯಿ ತಿನ್ನಲು ಸರಿಯಾದ ಸಮಯವೂ ಅಷ್ಟೇ ಮುಖ್ಯ ಎಂದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ಜನರು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಸೌತೆಕಾಯಿ ತಿನ್ನುತ್ತಾರೆ.
ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳುವುದು ಬಹಳ ಮುಖ್ಯ, ಇದರಿಂದ ನೀವು ಅದರ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ಸೌತೆಕಾಯಿ ತಿನ್ನಲು ಉತ್ತಮ ಸಮಯ ಯಾವುದು, ಅದನ್ನು ಯಾವಾಗ ತಿನ್ನುವುದು ಪ್ರಯೋಜನಕಾರಿ ಮತ್ತು ಯಾವಾಗ ಹಾನಿಕಾರಕವಾಗಬಹುದು ಎನ್ನುವುದನ್ನು ತಿಳಿಯೋಣ/
ಬೆಳಿಗ್ಗೆ ಸೌತೆಕಾಯಿ: ನೀವು ಡಿಟಾಕ್ಸ್ ಡ್ರಿಂಕ್ ತೆಗೆದುಕೊಳ್ಳಲು ಬಯಸಿದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿ ಸೇವಿಸಬಹುದು. ಇದು ಹೊಟ್ಟೆಯನ್ನು ಸ್ವಚ್ಛಗೊಳಿಸಲು ಮತ್ತು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ಇದರಲ್ಲಿ ಫೈಬರ್ ಮತ್ತು ನೀರಿನ ಅಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಹೆಚ್ಚು ಸೌತೆಕಾಯಿ ತಿನ್ನುವುದರಿಂದ ಕೆಲವರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಬಹುದು. ನಿಮಗೆ ಅಸಿಡಿಟಿ ಸಮಸ್ಯೆ ಇದ್ದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿ ತಿನ್ನಬೇಡಿ.
ಮಧ್ಯಾಹ್ನ ಸೌತೆಕಾಯಿ ತಿನ್ನುವುದು: ಮಧ್ಯಾಹ್ನದ ಊಟದಲ್ಲಿ ಸಲಾಡ್ ಆಗಿ ಸೌತೆಕಾಯಿ ತಿನ್ನುವುದು ಉತ್ತಮ ಆಯ್ಕೆಯಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಆಹಾರವನ್ನು ಬೇಗ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಇದು ದೇಹವನ್ನು ತಂಪಾಗಿ ಮತ್ತು ಹೈಡ್ರೇಟ್ ಆಗಿ ಇಡುತ್ತದೆ. ಮಧ್ಯಾಹ್ನ ಸೌತೆಕಾಯಿ ತಿನ್ನುವುದು ತೂಕ ಇಳಿಸಿಕೊಳ್ಳಲು ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ಹೊಟ್ಟೆ ತುಂಬಿರುವಂತೆ ಮಾಡುತ್ತದೆ ಮತ್ತು ಹೆಚ್ಚು ತಿನ್ನುವುದನ್ನು ತಪ್ಪಿಸುತ್ತದೆ. ಮಧ್ಯಾಹ್ನದ ಊಟದೊಂದಿಗೆ ಸೌತೆಕಾಯಿ ರೈತಾ ತೆಗೆದುಕೊಳ್ಳಿ ಅಥವಾ ಸೌತೆಕಾಯಿ, ಟೊಮೆಟೊ ಮತ್ತು ಕ್ಯಾರೆಟ್ ಸಲಾಡ್ ಮಾಡಿ ತಿನ್ನಿರಿ.
ರಾತ್ರಿಯಲ್ಲಿ ಸೌತೆಕಾಯಿ ತಿನ್ನುವುದು: ನೀವು ಲಘು ಭೋಜನ ಮಾಡಲು ಬಯಸಿದರೆ, ಸೌತೆಕಾಯಿ ಉತ್ತಮ ಆಯ್ಕೆಯಾಗಿದೆ. ಇದು ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವಾಗಿದೆ, ಇದು ರಾತ್ರಿಯಲ್ಲಿ ತಿಂದ ನಂತರವೂ ಹೊಟ್ಟೆಯನ್ನು ಹಗುರವಾಗಿರಿಸುತ್ತದೆ. ಇದರಲ್ಲಿ 90% ಕ್ಕಿಂತ ಹೆಚ್ಚು ನೀರಿರುತ್ತದೆ, ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಾತ್ರಿಯಲ್ಲಿ ಹೆಚ್ಚು ಸೌತೆಕಾಯಿ ತಿನ್ನುವುದರಿಂದ ಹೊಟ್ಟೆ ಉಬ್ಬುವುದು ಅಥವಾ ಗ್ಯಾಸ್ ಸಮಸ್ಯೆ ಉಂಟಾಗಬಹುದು. ನಿಮಗೆ ತಣ್ಣನೆಯ ಆಹಾರ ಇಷ್ಟವಿಲ್ಲದಿದ್ದರೆ, ರಾತ್ರಿಯಲ್ಲಿ ಕಡಿಮೆ ಸೌತೆಕಾಯಿ ತಿನ್ನಿರಿ. ರಾತ್ರಿಯ ಊಟದ ನಂತರ ತಕ್ಷಣವೇ ಸೌತೆಕಾಯಿ ತಿನ್ನಬೇಡಿ, ಇದರಿಂದ ಅಜೀರ್ಣವಾಗಬಹುದು.
ಸೌತೆಕಾಯಿ ತಿನ್ನುವುದರಿಂದ ಆಗುವ ಲಾಭಗಳು: ಇದು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುವ ಆಹಾರವಾಗಿದೆ, ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ. ಇದರಲ್ಲಿರುವ ಫೈಬರ್ ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ಗಳು ಚರ್ಮವನ್ನು ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡುತ್ತದೆ. ಇದರೊಂದಿಗೆ ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಏಕೆಂದರೆ ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಬಿಪಿಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.