ಬೆಂಗಳೂರು: ಕಚ್ಚಾ ತೈಲಗಳಾದ ಪೆಟ್ರೋಲ್ ಡೀಸೆಲ್ ಕೂಡ ಬೆಲೆಗಳಲ್ಲಿ ಏರಿಳಿತಕ್ಕೊಳಗಾಗುತ್ತಿದ್ದು, ದಿನಂಪ್ರತಿ ಬಳಕೆಯಾಗುವ ಈ ಇಂಧನಗಳು ಒಮ್ಮೊಮ್ಮೆ ಬೆಲೆ ಏರಿಸಿಕೊಂಡಿರುವುದು ವಾಹನ ಚಾಲಕರಿಗೆ ತಲೆನೋವಿನ ಸಮಸ್ಯೆಯಾಗಿದೆ. ನವೀಕರಿಸಲಾಗದೇ ಇರುವ ಇಂಧನಗಳಾಗಿ ಗುರುತಿಸಿಕೊಂಡಿರುವ ಪೆಟ್ರೋಲ್, ಡೀಸೆಲ್ ಅನ್ನು ಹಲವಾರು ಪ್ರಕ್ರಿಯೆಗಳ ಮೂಲಕ ಶುದ್ಧೀಕರಿಸಿ ಬಳಕೆಗೆ ಲಭ್ಯವಾಗಿಸಲಾಗುತ್ತದೆ.
ಬಿಹಾರದಲ್ಲಿ ಪೆಟ್ರೋಲ್ ಲೀಟರ್ಗೆ 9 ಪೈಸೆ ಇಳಿಕೆಯಾಗಿದ್ದು, 106.85 ರೂ.ಗೆ ಮತ್ತು ಡೀಸೆಲ್ 21 ಪೈಸೆ ಇಳಿಕೆಯಾಗಿದೆ. ಪ್ರತಿ ಲೀಟರ್ಗೆ 93.59 ರೂ. ಜಾರ್ಖಂಡ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 29 ಪೈಸೆ ಏರಿಕೆಯಾಗಿ 98.25 ರೂ.ಗೆ ಮತ್ತು ಡೀಸೆಲ್ ಲೀಟರ್ಗೆ 28 ಪೈಸೆ ಏರಿಕೆಯಾಗಿ 93.00 ರೂ.ಗೆ ತಲುಪಿದೆ. ಇದಲ್ಲದೇ ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 36 ಪೈಸೆ ಏರಿಕೆಯಾಗಿ 104.94 ರೂ.ಗೆ ಮತ್ತು ಡೀಸೆಲ್ ಲೀಟರ್ಗೆ 34 ಪೈಸೆ ಏರಿಕೆಯಾಗಿ 91.45 ರೂ.7 ಆಗಿದೆ.
ನಿಮಗೆ ಅರಿವಿಲ್ಲದೆ PAN Card ದುರ್ಬಳಕೆ ಆಗಿರಬಹುದು ಎಂಬ ಅನುಮಾನವಿದ್ದರೆ ಹೀಗೆ ಮಾಡಿ ಸಾಕು..! ನಿಮ್ಮ ಕಾರ್ಡ್ ಸೇಫ್
ದೆಹಲಿಯಲ್ಲಿ ಪೆಟ್ರೋಲ್ ಬೆಲೆ 94.77 ರೂ. ಮತ್ತು ಡೀಸೆಲ್ ಬೆಲೆ ಲೀಟರ್ಗೆ 87.67 ರೂ., ಮುಂಬೈನಲ್ಲಿ ಪೆಟ್ರೋಲ್ ಬೆಲೆ 103.50 ರೂ ಮತ್ತು ಡೀಸೆಲ್ ಬೆಲೆ ಲೀಟರ್ಗೆ 90.03 ರೂ., ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 105.01 ರೂ ಮತ್ತು ಡೀಸೆಲ್ ಬೆಲೆ ಲೀಟರ್ಗೆ 91.82 ರೂ., ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 101.3 ರೂ ಮತ್ತು ಡೀಸೆಲ್ ಬೆಲೆ ಲೀಟರ್ಗೆ 92.61 ರೂ. ಇದೆ., ಬೆಂಗಳೂರು ಪೆಟ್ರೋಲ್: ಲೀಟರ್ಗೆ 102.92 ರೂ. ಡೀಸೆಲ್: ಪ್ರತಿ ಲೀಟರ್ಗೆ 88.99 ರೂ. ಇದೆ.
ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ 73 ಡಾಲರ್ ದಾಟಿದೆ. ಬ್ರೆಂಟ್ ಕಚ್ಚಾ ತೈಲವು ಇಂದು ಪ್ರತಿ ಬ್ಯಾರೆಲ್ಗೆ 73.86 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ, ಡಬ್ಲ್ಯೂಟಿಐ ಕಚ್ಚಾ ಪ್ರತಿ ಬ್ಯಾರೆಲ್ಗೆ 70.60 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.