ಗದಗ : ಸಿಎಂ ಸಿದ್ದರಾಮಯ್ಯರಿಂದ ಅಧಿಕಾರ ಕಿತ್ತುಕೊಳ್ಳೋಕೆ ಆಗಲ್ಲ, ಸಿದ್ದರಾಮಯ್ಯ ಪೂರ್ಣವಾಧಿ ಮುಗಿಸುತ್ತಾರೆ ಎಂದು ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿಕೆ ಭವಿಷ್ಯ ನುಡಿದಿದ್ದಾರೆ. ಗದಗನಲ್ಲಿ ಕೋಡಿಮಠದಲ್ಲಿ ಮಾತನಾಡಿದ ಅವರು, ಹಾಲುಮತ ಸಮಾಜಕ್ಕೆ ಅಧಿಕಾರ ಬಂದರೆ ಸುಲಭವಾಗಿ ಕಿತ್ತುಕೊಳ್ಳಲು ಆಗೋದಿಲ್ಲ. ಇವತ್ತಿನ ರಾಜಕೀಯ ಚಿಂತನೆ ಮಾಡೋದಾದ್ರೆ ಈ ಮುಖ್ಯಮಂತ್ರಿ ಇರೋವರೆಗೂ ಕಿತ್ತುಕೊಳ್ಳೋದು ಕಷ್ಟ. ನಾವು ಹೇಳಿದ್ದು ಕೇಲವ ವ್ಯಕ್ತಿಯ ಚಿಂತನೆ ಅಲ್ಲ, ಸಮಗ್ರ ಭವಿಷ್ಯದ ಚಿಂತನೆ
ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದವರು ಹಕ್ಕಬುಕ್ಕರು. ಇವತ್ತಿಗೂ ವಿಜಯನಗರ ಸಾಮ್ರಾಜ್ಯದ ಹೆಸರು ಚಿರಸ್ಥಾಯಿಯಾಗಿದೆ. ಆ ಸಾಮ್ರಾಜ್ಯ ಕೊಡುಗೆ, ನೆನಪು, ಮೈಸೂರು ದಸರಾ ವಿಜಯನಗರ ಸಾಮ್ರಾಜ್ಯದ ಅರಸರ ಕೊಡುಗೆ. ಆ ಸಾಮ್ರಾಜ್ಯ ಕಟ್ಟಿದವರು ಹಕ್ಕಬುಕ್ಕರು ಹಾಲುಮತ ಸಮಾಜದವರು. ಆ ಸಮಾಜಕ್ಕೆ ಅಧಿಕಾರ ಬಂದರೆ ಸುಲಭವಾಗಿ ಕಿತ್ತುಕೊಳ್ಳಲು ಆಗೋದಿಲ್ಲ. ಸಮಾಜದ ಮೇಲೆ, ರಾಜ್ಯದ ಮೇಲೆ ಒಳ್ಳೆ ಕೆಲಸ ಮಾಡೋ ಜನರಿಗೆ ಕೆಡುಕಾಗೋದು ಕಷ್ಟ. ಆ ದೃಷ್ಠಿಯಿಂದ ಹಾಲುಮತ ಸಮಾಜದ ಸಿದ್ದರಾಮಯ್ಯನವರು ರಾಜ್ಯದ ಅಧಿಕಾರದಲ್ಲಿ ಇದ್ದಾರೆ ಅವರಿಂದ ಅಧಿಕಾರ ಕಿತ್ತುಕೊಳ್ಳೋದು ಕಷ್ಟ ಎಂದು ವಿಜಯನಗರ ಸಾಮ್ರಾಜ್ಯದ ಉದಾಹರಣೆ ಇಟ್ಟು ಸಾಮಾನ್ಯ ಭವಿಷ್ಯ ಜ್ಞಾನವನ್ನ ಹೇಳಿದ್ದಾರೆ.
ಅಲ್ಲಾಳರೊಂಭತ್ತು ಪಟ್ಟ, ಗೊಲ್ಲಾಳರೊಂಭತ್ತು ಪಟ್ಟ
ನಮಗೆ ಕಂಡ ಉದಾಹರಣೆಗೆಗಳು, ತಿಳಿದ ಚಿಂತನೆಗಳ ಬಗ್ಗೆ ಹಿಂದೆಯೂ ಸಿದ್ದರಾಮಯ್ಯ ಇದ್ದಾಗ ಹೇಳಿದ್ದೆ. ಐದು ವರ್ಷಗಳ ಆಳಿದ್ರು, ಯಾರೂ ಕಿತ್ತುಕೊಳ್ಳೋಕೆ ಆಗಲಿಲ್ಲ. ಎಲ್ಲಾ ಸಮಾಜದವರೂ ಮುಗಿಸಲಿಲ್ಲ. ಅಲ್ಲಾಳರೊಂಭತ್ತು ಪಟ್ಟ, ಗೊಲ್ಲಾಳರೊಂಭತ್ತು ಪಟ್ಟ. ಅಲ್ಲಾಳ, ಗೊಲ್ಲಾಳ, ಬಲ್ಲಾಳ ಅಂತಾ ಕರೀತಾರೆ . ಅಲ್ಲಾಳರಾದ ಮೊಹಮ್ಮದೀಯರು ಈ ದೇಶವನ್ನು ಒಂಭತ್ತು ಪಟ್ಟ ಆಳಿದರು. ಬಲ್ಲಾಳರು ಪಾಳೇಗಾರರು, ಪಾಳೆ ಪಟ್ಟುಗಳು ಎಲ್ಲರೂ ಒಂಭತ್ತು ಪಟ್ಟ ಆಳಿದರು. ಗೊಲ್ಲಾಳರು ಯದು ವಂಶಸ್ಥರು, ಮೈಸೂರು ಒಡೆಯರು ಇವರೂ ಒಂಭತ್ತು ಪಟ್ಟ ಆಳಿದರು. ನಂತರ ಪ್ರಜಾಪ್ರಭುತ್ವದ ಪಟ್ಟ ಬಂತ ಎಂದಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಪ್ರಾಕೃತಿಕ ದೋಷಗಳು ಹೆಚ್ಚಿವೆ
ಇನ್ನೂ ಈ ವರ್ಷ ಕರ್ನಾಟಕಕ್ಕೆ ಮಳೆ ಬೆಳೆ ತೊಂದರೆ ಇಲ್ಲ, ಶುಭಯೋಗ ಇದೆ. ಆದರೆ ಪ್ರಾಕೃತಿಕ ದೋಷಗಳು ಬಹಳ ಇವೆ. ಭೂಕಂಪ, ಭೂಮಿ ಸುನಾಮಿ, ವಾಯು ಸುನಾಮಿ ಆಗೋದು. ಕಳೆದ ಬಾರಿಗಿಂತ ಈ ಬಾರಿ ಪ್ರಾಕೃತಿಕ ದೋಷಗಳು ಹೆಚ್ಚಿವೆ. ಬಿಸಿಲ ಧಗೆ ಬಹಳ ಆಗತ್ತೆ, ಹಿಮಪಾತ ಆಗುತ್ತೆ. ಪ್ರಾಕೃತಿಕ ದೋಷವೇ ಮತ್ತೊಂದು ಕರೋನಾ ಆಗಿ ಬರತ್ತೆ ಈ ಬಾರಿ, ಬರೋ ಸಂವತ್ಸರ ಕೆಟ್ಡದೇನಲ್ಲ, ಚೆನ್ನಾಗಿದೆ ಎಂದರು.