ಬೆಂಗಳೂರು:ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಭೇಟಿ ಮಾಡಿ ಬಂದಿರುವ ಬಗ್ಗೆ ವಿ ಸೋಮಣ್ಣ ಇಂದು ನಗರದಲ್ಲಿ ಪ್ರತಿಕ್ರಿಯೆ ನೀಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೆಹಲಿಯಲ್ಲಿ ನಮ್ಮ ನಾಯಕರ ಭೇಟಿ ಜತೆಗೆ ದೇವಸ್ಥಾನಗಳನ್ನೂ ನೋಡಿಕೊಂಡು ಬಂದೆ ಈ ಸಲದ ದೆಹಲಿ ಭೇಟಿ ನನಗೆ ದೊಡ್ಡ ಅನುಭವ ಕೊಡ್ತು
ಅಮಿತ್ ಶಾ ಮತ್ತು ಜೆ ಪಿ ನಡ್ಡಾ ಅವರ ಭೇಟಿ ಮಾಡಿದ್ದೇನೆ ಅಮಿತ್ ಶಾ ರಾಷ್ಟ್ರದ ಅತ್ಯುನ್ನತ ನಾಯಕ ಅಮಿತ್ ಶಾ ಅವರ ಜತೆಗೆ ನಡೆದ ಮಾತುಕತೆ ಫಲಪ್ರದ ಆಗಿದೆ ಎಲ್ಲವೂ ಸುಖಾಂತ್ಯ ಆಗಿದೆ ಯಾವುದಾದರೂ ಮೂರು ಲೋಕಸಭೆ ಕ್ಷೇತ್ರಗಳ ಜವಾಬ್ದಾರಿ ಕೊಡಿ, ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರ್ತೇನೆ ಅಂದೆ ರಾಜ್ಯಸಭೆ ಸ್ಥಾನ ಕೊಡಿ ಅಂತ ಕೇಳಿದ್ದೇನೆ ಅಮಿತ್ ಶಾ ಅರ್ಧ ಗಂಟೆ ಕಾಲ ಮಾತಾಡಿದ್ರು ನನಗೆ 73 ವರ್ಷ, ಆರೋಗ್ಯವಾಗಿದೀನಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಈ ತಿಂಗಳ ಕೊನೆಗೆ ಅಮಿತ್ ಶಾ ಬರ್ತಾರೆ, ಎಲ್ಲವೂ ಬಗೆಹರಿಯಲಿದೆ ಎಂದರು.
ಹಾಗೆ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ನಯವಾಗಿಯೇ ವಿರೋಧ ವ್ಯಕ್ತಪಡಿಸಿದ ಸೋಮಣ್ಣ. ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆ ಗಮನಿಸಿದ್ದೇನೆ ಅವರು ಪಕ್ಷದ ಹಿರಿಯ ನಾಯಕರು ಅವರಿಗೆ ನಿಷ್ಕಲ್ಮಷ ಭಾವನೆ ಇದೆ ಏನು ಬಾಯಿಗೆ ಬರುತ್ತೋ ಅದನ್ನು ಅವರು ನನ್ನ ಹಾಗೆ ಮಾತಾಡಿ ಬಿಡ್ತಾರೆ ಹಿಂದೆಮುಂದೆ ನೋಡೋದೇ ಇಲ್ಲ ಆದ್ರೆ ಸಿದ್ದರಾಮಯ್ಯ ಕೇವಲ ಸಿದ್ದರಾಮಯ್ಯ ಅಲ್ಲ, ಈ ರಾಜ್ಯದ ಸಿಎಂ ಸಿದ್ದರಾಮಯ್ಯ ಏನೋ ಮಾತಾಡ್ತಾರೆ ಅಂತ ನಾವ್ಯಾಕೆ ಚಿಕ್ಕವರಾಗಬೇಕು? ನಾವು ಚಿಕ್ಕವರಾಗೋದು ಬೇಡ ಸಿದ್ದರಾಮಯ್ಯ ಏನು ಮಾತಾಡ್ತಾರೆ ಅನ್ನೋದು ಅವರ ವಿವೇಚನೆಗೆ ಬಿಟ್ಟಿದ್ದು ಅನಂತ್ ಕುಮಾರ್ ಹೆಗಡೆ ಸುಸಂಸ್ಕೃತ ಕುಟುಂಬದಿಂದ ಬಂದವರು ನಾವು ನಮ್ಮ ಭಾಷೆ ಹಿಡಿತದಲ್ಲಿ ಇಟ್ಕೋಬೇಕಾಗುತ್ತೆ ಅನಂತ್ ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕವಾಗಿ ನನಗೆ ಸ್ವಲ್ಪ ಬೇಸರಿಕೆ ತರಿಸಿದೆ ಸಿದ್ದರಾಮಯ್ಯ ಏಳು ಕೋಟಿ ಜನರ ಪ್ರತಿನಿಧಿ, ಮುಖ್ಯಮಂತ್ರಿ ಸಿದ್ರಾಮಯ್ಯ ಭಾಷೆ ಏನು, ಹೇಗೆ ಅಂತ ನಮಗೆ ಬೇಡ ಎಂದರು.
ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ ವಿಚಾರ ಈ ದೇಶದ ಇತಿಹಾಸ, ಸಂಸ್ಕೃತಿ ವಿಶ್ವಕ್ಕೆ ಪರಿಚಯಿಸುವ ಜಾಗ ಅದು ನಾನು, ಇನ್ನೊಬ್ರು ಹೋಗೋದು ಬೇರೆ ಇಡೀ ದೇಶಕ್ಕೆ ಅದರ ಹೆಗ್ಗಳಿಕೆ ಸಲ್ಲಲಿದೆ ರಾಮ ಅನ್ನೋದು ನಂಬಿಕೆ, ದೇವ್ರು ಅದರಲ್ಲಿ ಪ್ರಧಾನಿಯವ್ರು ಯಶಸ್ಸಾಗಿದ್ದಾರೆ
ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಅಧ್ಯಕ್ಷ ಸ್ಥಾನ ಅರುಣ್ ಸೋಮಣ್ಣಗೆ ಕೈತಪ್ಪಿದ ವಿಚಾರ ನಾನು ಯಾರ ಬಳಿಯೂ ಮಗನಿಗೆ ಸ್ಥಾನಮಾನ ಕೇಳಲಿಲ್ಲ ಸಿ ಕೆ ರಾಮಮೂರ್ತಿಯನ್ನು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಆಗಿ ಮಾಡಿದ್ದಾರ ಹಳೆಯದೆಲ್ಲದರ ಪೋಸ್ಟ್ ಮಾರ್ಟಂ ಬೇಡ ಈಗ ಸಿ ಕೆ ರಾಮಮೂರ್ತಿಯೂ ಒಳ್ಳೆಯವನೇ, ನಮ್ಮ ಹುಡುಗನೇ ಎರಡು ಸಲ ಕಾರ್ಪೊರೇಟರ್ ಆಗಿ ಈಗ ಶಾಸಕ ಆಗಿದಾನೆ ಅವನಿಗೂ ಅರ್ಹತೆ ಇದೆ ಅರ್ಹತೆ ಇರೋರಿಗೆ ಯಾರಿಗೆ ಬೇಕಾದರೂ ಕೊಡಲಿ ಪಕ್ಷ ವಿರೋಧಿ ಕೆಲಸ ಮಾಡಿ ಹಲ್ಕಾ ಕೆಲಸ ಮಾಡಿದವ್ರಿಗೆ ಬೇಡ ಅಂತ ಹೇಳ್ತೀನಿ ಅಂಥವರನ್ನು ರಾಜ್ಯಾಧ್ಯಕ್ಷರು ಜಿಲ್ಲಾಧ್ಯಕ್ಷ ಮಾಡಿರೋದು ಸರಿ ಇದೆ ಎಂದು ಹೇಳಿದರು.