ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಅವರು ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಮದ್ದೂರಿನಲ್ಲಿ ನಡೆಯಲಿದೆ. ಸ್ತ್ರೀಶಕ್ತಿ ಸಂಘ, ಯಶಸ್ವಿನಿ ಯೋಜನೆ, ಬೆಂಗಳೂರಿನ ಐಟಿ ಕ್ರಾಂತಿಯಲ್ಲಿ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ.
Chanakya Niti: ಗಂಡ-ಹೆಂಡತಿ ಮಧ್ಯೆ ಇಷ್ಟೆಲ್ಲಾ ವಯಸ್ಸಿನ ಅಂತರ ಇದ್ರೆ ಸಂಸಾರ ಹಾಳಾಗುತ್ತಂತೆ!
ಅವರ ಅಗಲಿಕೆ ಕರ್ನಾಟಕ್ಕೆ, ರಾಜಕೀಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ನಾಡಿನ ಗಣ್ಯರು ಕೃಷ್ಣ ಅವರ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ. ಇನ್ನು ಅವರ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಕೃಷ್ಣ ಅವರ ನಿವಾಸದ ಸುತ್ತ ಬ್ಯಾರಿಕೇಡ್ ಹಾಕಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯರಾಜಧಾನಿ ಬೆಂಗಳೂರು ಇಂದು ಐಟಿ ಸಿಟಿ ಎಂದು ಕರೆಸಿಕೊಳ್ಳುತ್ತಿರುವುದರ ಹಿಂದೆ ಎಸ್ಎಂ ಕೃಷ್ಣ ಅವರ ಪಾತ್ರ ಮಹತ್ವದ್ದಾಗಿದೆ.
ಎಸ್.ಎಂ. ಕೃಷ್ಣ ಅವರಿಂದ ಮಾಡಲಾದ ಸಾಧನೆಗಳಿವು…
- ಬೆಂಗಳೂರಿನಲ್ಲಿ ಐಟಿ, ಬಿಟಿ ಸೆಕ್ಟರ್ ಬೆಳವಣಿಗೆ ಚುರುಕುಗೊಳಿಸಿದರು.
- ಬೆಂಗಳೂರಿಗೆ ಮೆಟ್ರೋ ರೈಲು ತರಲು ಅವರ ಪಾತ್ರ ಇತ್ತು
- ಬೆಂಗಳೂರಿಗೆ ಏರ್ಪೋರ್ಟ್ ಬರಲು ಅವರ ಪಾತ್ರ ಇತ್ತು
- ಅವರು ಸಿಎಂ ಆಗಿದ್ದ ಅವಧಿಯಲ್ಲಿ ವಿಕಾಸಸೌಧ ನಿರ್ಮಾಣ ಆಗಿತ್ತು
- ಎಸ್.ಎಂ. ಕೃಷ್ಣ ಸಿಎಂ ಆಗಿದ್ದಾಗ ಸರ್ಕಾರದ ಆದಾಯ ಹೆಚ್ಚಿಸಿದರು. ಮೊದಲ ವರ್ಷ (1999) ಸರ್ಕಾರದ ಬಜೆಟ್ 13,000 ಕೋಟಿ ರೂ ಇತ್ತು. ಕೊನೆಯ ವರ್ಷ (2004) ಬಜೆಟ್ ಗಾತ್ರ 34,000 ಕೋಟಿ ರೂಗೆ ಏರಿತ್ತು.
- ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ
- ರೈತರಿಗೆ ಯಶಸ್ವಿನಿ ಯೋಜನೆ ಜಾರಿ
- ಇವರ ಅವಧಿಯಲ್ಲಿ ರಾಜ್ಯದಲ್ಲಿ ಹೆಚ್ಚಿದ ವಿದ್ಯುತ್ ಉತ್ಪಾದನೆ
- ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ವ್ಯವಸ್ಥೆಯನ್ನು ಗಟ್ಟಿಗೊಳಿಸಿದರು.
- ನೀರಾವರಿ ಆಧುನೀಕರಣ
- ರಾಜ್ಯ ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿ
- ಬಿಎಂಟಿಸಿ, ಕೆಎಸ್ಸಾರ್ಟಿಸಿಗಳಿಗೆ ವೋಲ್ವೋದಂಥ ಲಕ್ಸುರಿ ಬಸ್ಸುಗಳನ್ನು ತರುವ ಪ್ರಯೋಗ ಇವರ ಕಾಲದಲ್ಲಾಯಿತು.
ಮದ್ದೂರಿನಲ್ಲಿ ಹುಟ್ಟಿದ ಎಸ್.ಎಂ. ಕೃಷ್ಣ ಅವರು ಅಮೆರಿಕದ ಡಲ್ಲಾಸ್ ಮತ್ತು ವಾಷಿಂಗ್ಟನ್ನಲ್ಲಿ ಉನ್ನತ ವ್ಯಾಸಂಗ ಮಾಡಿದವರಾಗಿದ್ದರು. ಹೀಗಾಗಿ, ಅವರ ಆಡಳಿತದ ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ಈ ನಿರೀಕ್ಷೆ ಉಳಿಸಿಕೊಳ್ಳಲು ಅವರು ತಮ್ಮ ಕೈಲಾದ ಕಾರ್ಯಗಳನ್ನು ಮಾಡಿದ್ದರು.
ಅವರ ಕಾರ್ಯಗಳಲ್ಲಿ ಹೆಚ್ಚಾಗಿ ನೆನಪುಳಿಯುವುದು ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸುವ ಕೆಲಸ. ಉದ್ಯಮಗಳಿಗೆ ಇದ್ದ ನಿಯಮಗಳನ್ನು ಸಡಿಲಿಸಿದರು. ಟ್ಯಾಕ್ಸ್ ಇನ್ಸೆಂಟಿವ್ಗಳನ್ನು ನೀಡಿದರು. ಈ ನೀತಿಗಳಿಗೆ ಉದ್ಯಮ ವಲಯದಲ್ಲಿ ಮನ್ನಣೆ ಸಿಕ್ಕಿತು. ಹಲವು ಐಟಿ ಬಿಟಿ ಸಂಸ್ಥೆಗಳು ಬೆಂಗಳೂರಿನಲ್ಲಿ ನೆಲೆ ಕಾಣಲು ಈ ನೀತಿಗಳೇ ಕಾರಣವಾದವು. ಈ ಮೂಲಕ ಬೆಂಗಳೂರು ಸಿಲಿಕಾನ್ ಸಿಟಿ ಎನಿಸಿದೆ.