ವಿಜಯಪುರ:- ಅಯೋಧ್ಯೆ ಶ್ರೀರಾಮ ಮಂದಿರ ಸೋರಿಕೆ ಬಗ್ಗೆ ಪೇಜಾವರಶ್ರೀ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮಳೆ ಬಂದಾದ ರಾಮ ಮಂದಿರ ಮೇಲ್ಚಾವಣಿ ಸೋರಿದೆ. ಮಂದಿರ ನಿರ್ಮಾಣ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ.ಇನ್ನೂ ಒಂದು ವರ್ಷದಲ್ಲಿ ಮಂದಿರ ಪೂರ್ಣಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರಾಮಮಂದಿರ ಮೇಲ್ಚಾವಣಿ ಸೋರಿಕೆ ಬಗ್ಗೆ ಸ್ಪಷ್ಟನೆ ನೀಡಿದರು.
ರೋಹಿತ್ ಶರ್ಮಾಗೆ ನರೇಂದ್ರ ಮೋದಿ ಗುಟ್ಟಾಗಿ ಹೇಳಿದ್ದೇನು ಗೊತ್ತಾ!?- ಇಲ್ಲಿದೆ ಡೀಟೈಲ್ಸ್!
ಇತ್ತೀಚೆಗೆ ಸುರಿದ ಭಾರೀ ಮಳೆಗೆ ಉತ್ತರ ಪ್ರದೇಶದ ಅಯೋಧ್ಯೆಯ ರಾಮ್ಪಥ್ ಬಳಿಕ ಹಲವಾರು ಸ್ಥಳಗಳಲ್ಲಿ ರಸ್ತೆಗಳು ಜಲಾವೃತ್ತಗೊಂಡಿದ್ದವು. ಅಲ್ಲದೇ ಶ್ರೀರಾಮ ಮಂದಿರದ ಮೇಲ್ಚಾವಣಿ ಸಹ ಸೋರಿದೆ ಎಂದು ವರದಿಯಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಯಾಗಿದೆ. ತರಾತುರಿಯಲ್ಲಿ ಕಾಮಗಾರಿ ಮಾಡಿದ್ದರಿಂದ ಒಂದೇ ಮಳೆಗೆ ಶ್ರೀರಾಮ ಮಂದಿರ ಸೋರಿತ್ತಿದೆ ಎನ್ನುವ ಆರೋಪಗಳು ವ್ಯಕ್ತವಾಗಿದ್ದವು