ಸ್ಯಾಂಡಲ್ವುಡ್ನಲ್ಲಿ (Sandalwood) ತಮ್ಮ ಕಾಮಿಡಿ ಪಂಚ್ ಮೂಲಕ ಮನಗೆದ್ದಿರೋ ಚಿಕ್ಕಣ್ಣ (Chikkanna) ಇದೀಗ ‘ಉಪಾಧ್ಯಕ್ಷ’ನಾಗಿ ಬರಲು ರೆಡಿಯಾಗಿದ್ದಾರೆ. ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಚಿಕ್ಕಣ್ಣ ಸಂದರ್ಶನವೊಂದರಲ್ಲಿ ತಮ್ಮ ಲವ್ ಬ್ರೇಕಪ್ ಬಗ್ಗೆ ಹೇಳಿದ್ದಾರೆ
ನಾನು ಪಿಯುಸಿ ಓದುವಾಗಲೇ ಅಮ್ಮನನ್ನು ಕೆಲಸ ಬಿಡಿಸಿ ಅವರನ್ನ ಸಾಕಬೇಕು ಎಂಬ ಹಂಬಲವಿತ್ತು. ಅದರಂತೆಯೇ ಮಾಡಿದೆ, ನನ್ನ ಮೊದಲ ಸಂಬಳದಲ್ಲಿ ಅಮ್ಮನಿಗೆ ಸೀರೆ ಕೊಡಿಸಿರುವೆ. ನನಗೆ ಗೊತ್ತಿರುವ ಹಾಗೇ ತಕ್ಕ ಮಟ್ಟಕ್ಕೆ ಚೆನ್ನಾಗಿ ನೋಡಿಕೊಳ್ಳುತ್ತಿರುವೆ. ನನ್ನ ಯೋಗ್ಯತೆ ಮೀರಿ ಅಲ್ಲ. ನನ್ನ ಯೋಗ್ಯತೆ ತಕ್ಕ ಹಾಗೇ ನೋಡಿಕೊಳ್ಳುತ್ತಿರುವೆ ಎಂದು ಚಿಕ್ಕಣ್ಣ ಮಾತನಾಡಿದ್ದಾರೆ.
ನಾನು ಒಬ್ಬರನ್ನು ಪ್ರೀತಿಸುತ್ತಿದ್ದೆ, ಸಣ್ಣ ಪುಟ್ಟ ಮನಸ್ತಾಪಗಳಿಂದ ಸಂಬಂಧ ಮುರಿದು ಬಿತ್ತು. ಯೋಚನೆ ಮಾಡಿಕೊಂಡು ಕೂತರೆ ನಾನು ತಪ್ಪಾ ಅಥವಾ ಸರಿನಾ ಅನಿಸುತ್ತಿದೆ. ಆ ಟೈಮ್ಗೆ ಏನೋ ತಪ್ಪು ಆಗಿ ಹೋಯ್ತು ಎಂದು ಬ್ರೇಕಪ್ ಬಗ್ಗೆ ಚಿಕ್ಕಣ್ಣ ಮೌನ ಮುರಿದಿದ್ದಾರೆ.