IPL ಸೀಸನ್ 17 ರಲ್ಲಿ ಸತತ ಸೋಲಿನ ಬಳಿಕ ಆರ್ಸಿಬಿ ವಿಲ್ ಜ್ಯಾಕ್ಸ್ ಅವರನ್ನು ಕಣಕ್ಕಿಳಿಸಬೇಕು ಎಂದು ಮಾಜಿ ಆಟಗಾರರು, ಕ್ರಿಕೆಟ್ ಪಂಡಿತರು ಕೂಡ ಒತ್ತಾಯಿಸಿದ್ದಾರೆ. ಅಭಿಮಾನಿಗಳಂತೂ ವಿಲ್ ಜ್ಯಾಕ್ಸ್ ಅಂತಹ ಆಟಗಾರನನ್ನು ಐದು ಪಂದ್ಯಗಳು ಕೂರಿಸಿರುವುದಕ್ಕೆ ತಂಡದ ಮ್ಯಾನೇಜ್ಮೆಂಟ್ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಮತದಾರರಿಗೆ ಅಭ್ಯರ್ಥಿಗಳ ಎಲ್ಲಾ ಆಸ್ತಿಗಳ ವಿವರ ತಿಳಿಯುವ ಹಕ್ಕಿಲ್ಲ – ಸುಪ್ರೀಂ
ವಿಲ್ ಜ್ಯಾಕ್ಸ್ ಆಡಲೇಬೇಕು ಎಂದು ಒತ್ತಾಯ ಮಾಡುತ್ತಿರುವುದರ ಹಿಂದೆ ಬಲವಾದ ಕಾರಣವಿದೆ. ವಿಲ್ ಜ್ಯಾಕ್ಸ್ ಎಂತಹ ಎದುರಾಳಿಗಳನ್ನು ಧ್ವಂಸ ಮಾಡಬಲ್ಲ ಸ್ಫೋಟಕ ಬ್ಯಾಟರ್, ಬೌಲಿಂಗ್ನಲ್ಲೂ ಮೋಡಿ ಮಾಡಬಲ್ಲ ಆಟಗಾರ. ಅವರ ದಾಖಲೆಗಳ ಪಟ್ಟಿ ನೊಡಿದ್ರೆ ಇಂತಹ ಆಟಗಾರನನ್ನ ಐದು ಪಂದ್ಯ ಯಾಕೆ ಆಡಿಸಿಲ್ಲ ಎನ್ನುವ ಪ್ರಶ್ನೆ ನಿಮಗೂ ಬರುತ್ತದೆ.
ವಿಲ್ ಜ್ಯಾಕ್ಸ್ 25 ಎಸೆತಗಳಲ್ಲಿ ಶತಕ ಸಿಡಿಸಿರುವ ಆಟಗಾರ, ಅದೇ ಇನ್ನಿಂಗ್ಸ್ನಲ್ಲಿ ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸಿದ ಸ್ಫೋಟಕ ಬ್ಯಾಟರ್. 2019ರಲ್ಲಿ ಸರ್ರೇ ತಂಡಕ್ಕಾಗಿ ಆಡುವ ಅವರು, ದುಬೈನಲ್ಲಿ ನಡೆದ ಟಿ10 ಪಂದ್ಯದಲ್ಲಿ ಲ್ಯಾಂಕಾಶೈರ್ ವಿರುದ್ಧ ಈ ಸಾಧನೆ ಮಾಡಿದರು.
2024ರ ಎಸ್ಎ ಟಿ20 ಪಂದ್ಯಾವಳಿಯಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಕ್ಕಾಗಿ ಆಡುವ ವಿಲ್ ಜ್ಯಾಕ್ಸ್ 42 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದರು. ಅವರ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಮತ್ತು 9 ಭರ್ಜರಿ ಸಿಕ್ಸರ್ ಸೇರಿದ್ದವು. ಎಸ್ಎ ಟಿ20 2024 ಪಂದ್ಯಾವಳಿಯಲ್ಲಿ ಜ್ಯಾಕ್ಸ್ 10 ಪಂದ್ಯಗಳಲ್ಲಿ 245 ರನ್ ಗಳಿಸಿದ್ದಾರೆ, ಅವರ ಸ್ಟ್ರೈಕ್ರೇಟ್ 180.15 ಆಗಿದೆ. 10 ಪಂದ್ಯಗಳಲ್ಲಿ ಅವರು 6 ವಿಕೆಟ್ ಕೂಡ ಪಡೆದಿದ್ದಾರೆ.
ಫೆಬ್ರವರಿಯಲ್ಲ ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ ಕೂಡ ಆಡಿರುವ ವಿಲ್ ಜ್ಯಾಕ್ಸ್ 53 ಎಸೆತಗಳಲ್ಲಿ ಅಜೇಯ 108 ಬಾರಿಸಿದ್ದರು. ಈ ಇನ್ನಿಂಗ್ಸ್ನಲ್ಲಿ 5 ಬೌಂಡರಿ, 10 ಭರ್ಜರಿ ಸಿಕ್ಸರ್ ಸೇರಿದ್ದವು.
ಒಟ್ಟಾರೆ 157 ಟಿ20 ಪಂದ್ಯಗಳನ್ನಾಡಿರುವ ವಿಲ್ ಜ್ಯಾಕ್ಸ್ 29.71 ಸರಾಸರಿಯಲ್ಲಿ 4130 ರನ್ ಕಲೆಹಾಕಿದ್ದಾರೆ. ಅವರ ಸ್ಟ್ರೈಕ್ರೇಟ್ 158.66 ಆಗಿದೆ. 66 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು 49 ವಿಕೆಟ್ ಕೂಡ ಪಡೆದುಕೊಂಡಿದ್ದಾರೆ.
ಇಷ್ಟೆಲ್ಲಾ ಅನುಭವ ಇರುವ ವಿಲ್ಜ್ಯಾಕ್ಸ್ ಯಾವುದೇ ತಂಡಕ್ಕೆ ಉತ್ತಮ ಆಸ್ತಿ. ಅದರೆ ಅವರನ್ನು ಬಳಸಿಕೊಳ್ಳುವ ಕ್ಷಮತೆ ತಂಡಕ್ಕಿರಬೇಕು ಅಷ್ಟೇ. ಸರಿಯಾದ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವಲ್ಲೇ ಎಡವಿರುವ ಆರ್ ಸಿಬಿ ತಕ್ಕ ಬೆಲೆ ತೆತ್ತಿದೆ.