ಬಸ್ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಸಿಕ್ಕಿದ್ದು ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸಾರಿಗೆ ಇಲಾಖೆ ಹೊಸ ಬಸ್ ಖರೀದಿ ಮಾಡುತ್ತಿದೆ. ಅದರಂತೆ ಬಿಎಂಟಿಸಿ ಹೊಸದಾಗಿ 840 ಬಸ್ಗಳು ಸೇರ್ಪಡೆಯಾಗಲಿದೆ.
100 ಬಿಎಸ್ 6 ಬಿಎಂಟಿಸಿ ಬಸ್ ಗಳಿಗೆ ಸಿಎಂ ಸಿದ್ಧರಾಮಯ್ಯರಿಂದ ನೂತನ ಬಸ್ ಗಳ ಲೋಕಾರ್ಪಣೆ ವಿಧಾನ ಸೌಧದ ಮುಂಭಾಗದಲ್ಲಿ ಹೊಸ ಬಸ್ ಗಳಿಗೆ ಚಾಲನೆ ನೀಡಿದ್ದು 336 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 840 ಹೊಸ ಬಸ್ ಖರೀದಿ ಇಂದು 100 ಬಸ್ ಗಳಿಗೆ ಸಿಎಂ ಚಾಲನೆ ನೀಡಿದ್ದಾರೆ.
ಬಸ್ ಗಳ ವಿಶೇಷತೆ
* ಬಿಎಸ್ 6 ಬಸ್ ಗಳು ಪರಿಸರ ಸ್ನೇಹಿ
* ಬಿಎಸ್ 4 ಬಸ್ ಗಳಿಗಿಂದ ಇಂಜಿನ್ ಸಾಮರ್ಥ್ಯ ಅಧಿಕ
*
* ಬೆಂಕಿ ಅವಘಡ ಸಂದರ್ಭದಲ್ಲಿ ಸೇಫ್ಟಿ ಟೂಲ್
* ಅಶೋಕ್ ಲೇಲ್ಯಾಂಡ್ ಕಂಪನಿ ಡಿಸೈನ್ ಮಾಡಿರುವ ಬಸ್
ಶಕ್ತಿ ಯೋಜನೆಯಿಂದ ಬಸ್ ಗಳಲ್ಲಿ ಮಹಿಳೆಯರ ಓಡಾಟ ಹೆಚ್ಚಳ
ಬಸ್ ಗಳಲ್ಲಿ ಪ್ರಯಾಣಿಕರ ದಟ್ಟಣೆ ಕಾರಣ ಹೊಸ ಬಸ್ ಗಳ ಖರೀದಿ
ಒಂದು ಬಸ್ ಬೆಲೆ 40 ಲಕ್ಷ ರೂಪಾಯಿ
ಹೆಚ್ಚು ಪ್ರಯಾಣಿಕರು ಇರುವೆಡೆ ಹೊಸ ಬಸ್ ಗಳನ್ನು ಬಿಡಲು ನಿರ್ಧಾರ
ಯಶವಂತಪುರ, ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಮೈಸೂರು ರಸ್ತೆ, ರಾಜಾಜಿನಗರ, ಸೇರಿ ಪ್ರಮುಖ ಕಡೆಗಳಲ್ಲಿ ಸಂಚಾರ