ಪ್ರೇಮಿಗಳ ದಿನ ಈ ತಿಂಗಳಲ್ಲಿ ಬರುವುದರಿಂದ ಫೆಬ್ರವರಿಯನ್ನು ಸಾಮಾನ್ಯವಾಗಿ ಪ್ರೀತಿಯ ತಿಂಗಳು ಎಂದು ಕರೆಯಲಾಗುತ್ತದೆ. ಜನರು ಈ ತಿಂಗಳಲ್ಲಿ ಪ್ರೇಮಿಗಳ ದಿನವನ್ನು ಒಂದು ವಾರದ ಮುಂಚಿತವಾಗಿ ಆಚರಿಸುವ ಮೂಲಕ, ಅವರ ಸಂಗಾತಿಗೆ ವಿಶೇಷ ಉಡುಗೊರೆಗಳನ್ನು ನೀಡುವ ಮೂಲಕ ಪ್ರೀತಿಯಿಂದ ಆಲಂಗಿಸುತ್ತಾರೆ. ಜೀವನದುದ್ದಕ್ಕೂ ಸಂಗಾತಿಯಾಗಿ ಜೀವನದಲ್ಲಿ ಬರುವ ಸುಖ ದು:ಖದಲ್ಲೂ ಕೊನೆಯವರೆಗೂ ಜೊತೆಯಾಗಿರುವ ಭರವಸೆ ನೀಡುತ್ತಾರೆ.
ರೋಸ್ ಡೇ, ಪ್ರಪೋಸ್ ಡೇ, ಚಾಕಲೇಟ್ ಡೇ, ಟೆಡ್ಡಿ ಡೇ ಮತ್ತು ಪ್ರಾಮಿಸ್ ಡೇ ಹೀಗೆ ವ್ಯಾಲೆಂಟೀನ್ ವಾರದ ಐದು ದಿನಗಳ ಖುಷಿಯನ್ನು ಪ್ರೇಮಿಗಳು ಅನುಭವಿಸಿದ್ದಾರೆ. ಈ ಐದು ದಿನಗಳ ಬಳಿಕ ಬರುವುದು ಹಗ್ ಡೇ. ಪ್ರೀತಿಯ ಆಲಿಂಗನ ಬದುಕಿಗೊಂದು ಭರವಸೆ ತರುತ್ತದೆ, ನಮಗೊಬ್ಬರು ಸಂಗಾತಿ ಇದ್ದಾರೆ ಎಂಬ ಧೈರ್ಯ, ಸಮಾಧಾನ ಮೂಡಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಸಂಗಾತಿ ಬೇಕೇಬೇಕು. ನೋವು ನಲಿವು, ಸುಖ ದುಃಖಗಳನ್ನು ಸಮನಾಗಿ ಹಂಚಿಕೊಳ್ಳಲು ಒಂದು ಹೃದಯ ಬೇಕೇಬೇಕು.
10th, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ..! ಇಂದೇ ಅಪ್ಲೈ ಮಾಡಿ
ಒಂಟಿ ಬಾಳು ಬರಡು ನೆಲಕ್ಕೆ ಸಮ. ಸಂಗಾತಿ ಇದ್ದರೆ ಬಾಂಧವ್ಯದ ನೆಲದಲ್ಲಿ ಪ್ರೀತಿಯ ಕೃಷಿಯು ಫಲವತ್ತಾಗಿ ಬೆಳೆಯಲು ಸಾಧ್ಯ. ಇದನ್ನು ಸಾಂಕೇತಿಕವಾಗಿ ತಿಳಿಸುವ ದಿನವೇ ಈ ಹಗ್ ಡೇ. ಮನಸ್ಸಿನ ಮಧುರ ಮಾತುಗಳನ್ನು ಪರಸ್ಪರ ಹಂಚಿಕೊಂಡು ಬದುಕಿನ ಮುಂದಿನ ದಿನಗಳಲ್ಲಿ ಖುಷಿಯಾಗಿ ಮತ್ತು ಒಮ್ಮತದಿಂದ ಸಾಗಲು ಈ ದಿನಗಳು ಒಂದೊಂದೇ ಮೆಟ್ಟಿಲಾಗಿವೆ.
ಪ್ರೇಮಿಗಳ ದಿನ ಫೆಬ್ರವರಿ 14 ರಂದು ಬರುತ್ತದೆ. ಆದರೆ ಈ ಆಚರಣೆಯು ಒಂದು ವಾರ ಮುಂಚಿತವಾಗಿ ಪ್ರಾರಂಭವಾಗುತ್ತದೆ. ಪ್ರೇಮಿಗಳ ದಿನದ ಮೊದಲು ಬರುವ ಏಳು ದಿನಗಳು ವಿಶೇಷವಾಗಿರುತ್ತವೆ. ಅಪ್ಪುಗೆಗಳು ಗಾಯಗಳನ್ನು ವಾಸಿಮಾಡುವ, ಸಂಬಂಧಗಳನ್ನು ಸರಿಪಡಿಸುವ ಮತ್ತು ಜನರನ್ನು ಹತ್ತಿರ ತರುವ ಶಕ್ತಿಯನ್ನು ಹೊಂದಿವೆ. ಹೀಗಾಗಿ ಹಗ್ ಡೇ ತುಂಬಾ ವಿಶೇಷತೆಯನ್ನು ಪಡೆದುಕೊಂಡಿದೆ.