ಬೆಂಗಳೂರು: ಇಂದಿರಾ ಕ್ಯಾಂಟೀನ್ ನಲ್ಲಿ ನಿತ್ಯ ಒಂದೇ ಬಗೆಯ ತಿಂಡಿ, ಊಟ ಸೇವನೆ ಮಾಡುತ್ತಿದ್ದ ನಾಗರೀಕರಿಗೆ ಇದೀಗ ಬಿಬಿಎಂಪಿ ಬಗೆ ಬಗೆಯ ಉಪಹಾರಗಳನ್ನು ಮೆನು ಲಿಸ್ಟ್ನಲ್ಲಿ ಸೇರಿಸಿದೆ.
ಇಂದಿರಾ ಕ್ಯಾಂಟೀನ್ಗಳ ನಿರ್ವಹಣೆಗೆ ಬಿಬಿಎಂಪಿ ಟೆಂಡರ್ ಕರೆದಿದ್ದು. ಆಹಾರದ ಮೆನುವಿನಲ್ಲಿ ರಾಗಿ ಮುದ್ದೆ, ಇಡ್ಲಿ, ಮಂಗಳೂರು ಬನ್ಸ್, ಬಿಸಿಬೇಳೆ ಬಾತ್ ಸೇರಿದಂತೆ ಹಲವು ಬಗೆಯ ಆಹಾರ ಪದಾರ್ಥಗಳನ್ನು ಹೊಸದಾಗಿ ಸೇರ್ಪಡೆ ಮಾಡಿದೆ
ಉಪಾಹಾರದಲ್ಲಿ ಇಡ್ಲಿ, ಪುಲಾವ್, ಬಿಸಿಬೇಳೆ ಬಾತ್, ಖಾರಾಬಾತ್, ಪೊಂಗಲ್, ಬ್ರೆಡ್ ಜಾಮ್, ಚೌಚೌಬಾತ್ ಒಂದೊಂದು ದಿನ ಲಭ್ಯವಾಗಲಿವೆ. ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ರಾಗಿಮುದ್ದೆ, ಚಪಾತಿ, ಅನ್ನ ಸಾಂಬಾರು ಇರಲಿವೆ. ಮಾವಿನಕಾಯಿ ಲಭ್ಯವಿರುವ ಕಾಲದಲ್ಲಿ ಯಾವುದಾದರೂ ಒಂದು ಉಪಾಹಾರದಲ್ಲಿ ಮಾವಿನಕಾಯಿ ಚಿತ್ರಾನ್ನವನ್ನು ಗ್ರಾಹಕರಿಗೆ ನೀಡಲು ನಿರ್ಧರಿಸಲಾಗಿದೆ.